ETV Bharat / state

ರಾಮನಗರ: ಮೀಸಲಾತಿ ಕಲ್ಪಿಸುವಂತೆ ಬ್ರಾಹ್ಮಣರ ಪ್ರತಿಭಟನೆ

author img

By

Published : Nov 15, 2022, 5:20 PM IST

ದೇಶದಲ್ಲಿ ಎಲ್ಲ ಜಾತಿಯವರಿಗೂ ಮೀಸಲಾತಿ ನೀಡಲಾಗುತ್ತಿದೆ. ಆದರೆ, ಸಾಮಾಜಿಕವಾಗಿ, ಆರ್ಥಿಕವಾಗಿ, ಹಿಂದುಳಿದಿರುವ ಬ್ರಾಹ್ಮಣರಿಗೆ ಮೀಸಲಾತಿ ಸಿಗುತ್ತಿಲ್ಲ. ರಾಜ್ಯ ಬಿಜೆಪಿ ಸರ್ಕಾರಗಳು ಬ್ರಾಹ್ಮಣ ಸಮುದಾಯಕ್ಕೆ ಯಾವುದೇ ಯೋಜನೆಗಳನ್ನು ನೀಡಿಲ್ಲ.

Ramnagar: Brahmins protest for reservation
ರಾಮನಗರ: ಮೀಸಲಾತಿ ಕಲ್ಪಿಸುವಂತೆ ಬ್ರಾಹ್ಮಣರ ಪ್ರತಿಭಟನೆ

ರಾಮನಗರ: ಬ್ರಾಹ್ಮಣ ಸಮುದಾಯದತ್ತ ತಾರತಮ್ಯ ತೋರುತ್ತಿರುವ ರಾಜ್ಯ ಬಿಜೆಪಿ ಸರ್ಕಾರದ ಧೋರಣೆ ಖಂಡಿಸಿ ಹಾಗೂ ಬ್ರಾಹ್ಮಣರಿಗೂ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ರಾಮನಗರ ಜಿಲ್ಲಾಧಿಕಾರಿ ಕಚೇರಿ ಎದುರು ವಿಪ್ರ ಸಂಘದ ಸದಸ್ಯರು ಪ್ರತಿಭಟನೆ ನಡಸಿದರು. ರಾಮನಗರದ ಆಂಜನೇಯ ಸ್ವಾಮಿ ದೇಗುಲದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ಹಾಗೂ ವಿಶ್ವ ವಿಪ್ರ ಪರಿಷತ್ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿದ ಬ್ರಾಹ್ಮಣರು ದಾರಿ ಉದ್ದಕ್ಕೂ ಸರ್ಕಾರದ ನಿಲುವಿನ ವಿರುದ್ಧ ಘೋಷಣೆ ಕೂಗಿದರು.

ನಮ್ಮವರು ಆರ್ಥಿಕವಾಗಿ ಹಿಂದುಳಿದಿದ್ದಾರೆ: ಇನ್ನು ಬ್ರಾಹ್ಮಣ ಸಮುದಾಯವನ್ನು ಕೇವಲ ಮತಕ್ಕಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿ ಸರ್ಕಾರ, ಸಮುದಾಯಕ್ಕೆ ಯಾವುದೇ ಸವಲತ್ತುಗಳನ್ನು ನೀಡುತ್ತಿಲ್ಲ ಎಂದು ತಮ್ಮ ಆಕ್ರೋಶ ಹೊರ ಹಾಕಿದರು. ಅಲ್ಲದೇ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕೆಲಕಾಲ ಹೋರಾಟ ನಡೆಸಿದ ಬ್ರಾಹ್ಮಣರು ನಮ್ಮ ಸಮುದಾಯದಲ್ಲೂ ಸಾಕಷ್ಟು ಬಡವರಿದ್ದು, ನಮ್ಮವರೂ ಆರ್ಥಿಕವಾಗಿ ಹಿಂದುಳಿದಿದ್ದಾರೆ. ಆದರೆ ಸರ್ಕಾರ ಮಾತ್ರ ಸಮುದಾಯವನ್ನು ಗಣನೆಗೆ ತೆಗೆದುಕೊಳ್ಳದೆ ಸದಾ ಕಡೆಗಣಿಸುತ್ತಿದೆ ಎಂದು ಕಿಡಿಕಾರಿದರು.

ಹಾಗೆ ದೇಶದಲ್ಲಿ ಎಲ್ಲ ಜಾತಿಯವರಿಗೂ ಮೀಸಲಾತಿಯನ್ನು ನೀಡಲಾಗುತ್ತಿದೆ. ಆದರೆ ಸಾಮಾಜಿಕವಾಗಿ, ಆರ್ಥಿಕವಾಗಿ, ಹಿಂದುಳಿದಿರುವ ಬ್ರಾಹ್ಮಣರಿಗೆ ಮೀಸಲಾತಿ ಸಿಗುತ್ತಿಲ್ಲ. ಮೇಲ್ವರ್ಗದ ಬಡವರಿಗಾಗಿ ತಂದಿರುವ ಶೇಕಡ 10ರಷ್ಟು ಮೀಸಲಾತಿಯನ್ನು ನೀಡುತ್ತಿಲ್ಲ. ಅಲ್ಲದೇ ಕೇಂದ್ರ ಅಥವಾ ರಾಜ್ಯ ಬಿಜೆಪಿ ಸರ್ಕಾರಗಳು ಬ್ರಾಹ್ಮಣ ಸಮುದಾಯಕ್ಕೆ ಯಾವುದೇ ಯೋಜನೆಗಳನ್ನು ನೀಡಿಲ್ಲ.

ಬ್ರಾಹ್ಮಣರಲ್ಲೂ ಜೀವನ ನಿರ್ವಹಣೆಗೆ ಕಷ್ಟಪಡುತ್ತಿರುವ ಅಸಂಖ್ಯ ಜನರಿದ್ದು, ಎಷ್ಟೋ ಕುಟುಂಬದ ಮಕ್ಕಳಿಗೆ ವಿದ್ಯಾಸಿರಿ ಸವಲತ್ತು, ಇನ್ನಿತರ ಸವಲತ್ತು ದೊರೆಯದೇ ಉನ್ನತ ಶಿಕ್ಷಣಕ್ಕೆ ಹೋಗಲಾಗದೇ ಸಂಕಷ್ಟಕ್ಕೆ ಸಿಲುಕಿರುವ ಉದಾಹರಣೆಗಳೂ ಇವೆ. ಮೀಸಲಾತಿ ನೀಡಿದರೆ ಉನ್ನತ ಶಿಕ್ಷಣದ ಕನಸು ಈಡೇರಲು ಸಾಧ್ಯವಾಗಲಿದೆ.

ಈ ಕೂಡಲೇ ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮಕ್ಕೆ ಮುಂದಾಗಬೇಕಿದ್ದು, ಇಲ್ಲದಿದ್ದಲ್ಲಿ ರಾಜ್ಯದ 22 ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಮತಗಳೇ ನಿರ್ಣಾಯಕವಾಗಿದ್ದು, ರಾಜ್ಯದಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳುವ ಮೂಲಕ ರಾಜ್ಯ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಇದೇ ವೇಳೆ ಬ್ರಾಹ್ಮಣ ಸಮುದಾಯ ಎಚ್ಚರಿಕೆ ಸಂದೇಶ ನೀಡಿದರು.

ಇದನ್ನೂ ಓದಿ:' ಕೆಂಪೇಗೌಡರ ಪ್ರತಿಮೆ ವೀಕ್ಷಣೆಗೆ ಯಾವುದೇ ಶುಲ್ಕ ಇಲ್ಲ, ಶೀಘ್ರದಲ್ಲೇ ಮತ್ತಷ್ಟು ಸೌಲಭ್ಯ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.