ರಾಮನಗರ: ಕಪಾಲಿ ಬೆಟ್ಟದಲ್ಲಿ ಏಸುಕ್ರಿಸ್ತನ ಅತಿ ಎತ್ತರದ ಪ್ರತಿಮೆ ನಿರ್ಮಾಣ ಮಾಡುವ ವಿವಾದ ದಿನದಿಂದ ದಿನಕ್ಕೆ ತಿರುವುಗಳನ್ನು ಪಡೆದುಕೊಳ್ಳುತ್ತಾ ಸಾಗುತ್ತಿದೆ.
ರಾಜ್ಯ ರಾಜಕೀಯ ವಲಯದಲ್ಲಿ ಈ ವಿಷಯ ಸಂಚಲನವನ್ನೇ ಸೃಷ್ಠಿಸಿದ್ದು, ಇದೀಗ ಪ್ರಕರಣ ಸಂಬಂಧ ತಹಸೀಲ್ದಾರ್ ಆನಂದಯ್ಯ ದಿಢೀರ್ ವರ್ಗಾವಣೆಗೊಂಡಿದ್ದಾರೆ. ಕನಕಪುರ ತಾಲೂಕಿನ ಹಾರೋಬೆಲೆ ಬಳಿಯ ಕಪಾಲಿ ಬೆಟ್ಟದಲ್ಲಿ ಏಸುಕ್ರಿಸ್ತನ ಬೃಹತ್ ಪ್ರತಿಮೆ ನಿರ್ಮಾಣ ಮಾಡುವ ಸಲುವಾಗಿ ಇತ್ತೀಚೆಗೆ ಶಂಕುಸ್ಥಾಪನೆ ನಡೆಸಲಾಗಿತ್ತು.
![ರಾಮನಗರ ತಹಸೀಲ್ದಾರ್ ಆನಂದಯ್ಯ ದಿಡೀರ್ ವರ್ಗಾವಣೆ, Ramanagara Tahsildar Anandayya transfer](https://etvbharatimages.akamaized.net/etvbharat/prod-images/5548142_thumb.jpg)
ಈ ಸಂಬಂಧ ರಾಜಕೀಯ ಪಡಸಾಲೆಯಲ್ಲಿ ಆರೋಪ ಪ್ರತ್ಯಾರೋಪಗಳು ಹೆಚ್ಚಾಗಿದ್ದು, ಸರ್ಕಾರಿ ಜಮೀನು ವಾಪಾಸ್ ಪಡೆಯಲು ಸರ್ಕಾರ ಚಿಂತನೆ ನಡೆಸಿದ್ರೆ, ಸಚಿವರುಗಳು ಯಾವುದೇ ಕಾರಣದಕ್ಕೂ ಏಸುಪ್ರತಿಮೆ ನಿರ್ಮಾಣಕ್ಕೆ ಬಿಡೋದಿಲ್ಲ ಎಂದು ಪಟ್ಟು ಹಿಡಿದಿದ್ದರು.
![ರಾಮನಗರ ತಹಸೀಲ್ದಾರ್ ಆನಂದಯ್ಯ ದಿಡೀರ್ ವರ್ಗಾವಣೆ, Ramanagara Tahsildar Anandayya transfer](https://etvbharatimages.akamaized.net/etvbharat/prod-images/kn-rmn-01-tahsildar-transfer-photo-7204219_31122019085834_3112f_1577762914_657.jpg)
ಈ ಎಲ್ಲಾ ಘಟನೆ ನಡುವೆ ಇತ್ತೀಚೆಗೆ ಅಧಿಕಾರಿಗಳು ಸ್ಥಳ ಪರಿಶೀಲನೆ ಕೂಡ ನಡೆಸಿದ್ದರು. ಮತ್ತೊಂದೆಡೆ ಅಧಿಕಾರಿಗಳ ಎತ್ತಂಗಡಿ ಪರ್ವ ಇನ್ನಷ್ಟು ಕುತೂಹಲ ಮೂಡಿಸಿದೆ. ಕನಕಪುರ ತಹಸೀಲ್ದಾರ್ ಆನಂದಯ್ಯ ಅವರನ್ನ ವರ್ಗಾವಣೆ ಮಾಡಿದ್ದು, ಇವರ ಸ್ಥಾನಕ್ಕೆ ಚಾಮರಾಜನಗರದ ಯಳಂದೂರು ತಹಸೀಲ್ದಾರ್ ಆಗಿದ್ದ ವರ್ಷಾ ಅವರನ್ುನ ನಿಯೋಜಿಸಲಾಗಿದೆ ಎಂದು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಉಮಾದೇವಿ.ಆರ್ ಆದೇಶ ಹೊರಡಿಸಿದ್ದಾರೆ.