ETV Bharat / state

ಸರಗಳ್ಳತನ ಮಾಡಿ ಪರಾರಿಯಾಗಲು ಯತ್ನಿಸಿದ ಖದೀಮ: ಗ್ರಾಮಸ್ಥರಿಂದ ಧರ್ಮದೇಟು - ಬೈಕ್ ನಲ್ಲಿ ಬಂದ ಇಬ್ಬರು ಸರಗಳ್ಳರು

ಬೈಕ್ ನಲ್ಲಿ ಬಂದ ಇಬ್ಬರು ಸರಗಳ್ಳರು ಸರ ಕದ್ದು ಪರಾರಿಯಾಗಲು ಯತ್ನಿಸುವ ವೇಳೆ ಬೈಕ್ ನಿಂದ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಓರ್ವ ಕಳ್ಳ ಅಲ್ಲಿಂದ ತಪ್ಪಿಸಿಕೊಂಡಿದ್ದು, ಮತ್ತೋರ್ವನನ್ನು ಬೆನ್ನಟ್ಟಿದ ಗ್ರಾಮಸ್ಥರು ಆತನನ್ನು ಸೆರೆಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ.

Ramanagara is a thief who tried to escape
ಸರಗಳ್ಳತನ ಮಾಡಿ ಪರಾರಿಯಾಗಲು ಯತ್ನಿಸಿದ ಖದೀಮ, ಗ್ರಾಮಸ್ಥರಿಂದ ಧರ್ಮದೇಟು
author img

By

Published : Aug 13, 2020, 12:04 PM IST

Updated : Aug 13, 2020, 1:09 PM IST

ರಾಮನಗರ: ಹಾಡಹಗಲೇ ಮಹಿಳೆಯ ಸರ ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನು ಹಿಡಿದ ಸಾರ್ವಜನಿಕರು ಆತನಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ತಾಲೂಕಿನ ಗುಂಗರಹಳ್ಳಿಯಲ್ಲಿ ನಡೆದಿದೆ.

ಸರಗಳ್ಳತನ ಮಾಡಿ ಪರಾರಿಯಾಗಲು ಯತ್ನಿಸಿದ ಖದೀಮ: ಗ್ರಾಮಸ್ಥರಿಂದ ಧರ್ಮದೇಟು

ಬೈಕ್​ನಲ್ಲಿ ಬಂದ ಇಬ್ಬರು ಸರಗಳ್ಳರು ಸರ ಕದ್ದು ಪರಾರಿಯಾಗಲು ಯತ್ನಿಸುವ ವೇಳೆ ಬೈಕ್ ನಿಂದ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಓರ್ವ ಕಳ್ಳ ಅಲ್ಲಿಂದ ತಪ್ಪಿಸಿಕೊಂಡಿದ್ದು, ಮತ್ತೋರ್ವನನ್ನು ಬೆನ್ನಟ್ಟಿದ ಗ್ರಾಮಸ್ಥರು ಆತನನ್ನು ಸೆರೆಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಸರ ಕಳ್ಳತನದ ಉದ್ದೇಶದಿಂದಲೇ ರಾಮನಗರ ತಾಲೂಕಿನ ಗುಂಗರಹಳ್ಳಿ ಬಳಿ ಹೋಗುತ್ತಿದ್ದರೆನ್ನಲಾಗ್ತಿದೆ. ಕಳೆದ ಎರಡು ದಿನಗಳ ಹಿಂದೆ ರಾಮನಗರ-ಮಾಗಡಿ ಹೆದ್ದಾರಿಯಲ್ಲಿಯೂ ಸರಗಳ್ಳತನ ನಡೆದಿತ್ತು.

ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಕಳ್ಳನನ್ನ ಪೊಲೀಸರ ವಶಕ್ಕೆ ಕೊಟ್ಟಿರುವ ಗ್ರಾಮಸ್ಥರು ದೂರು ನೀಡಿದ್ದಾರೆ. ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೆರೆಸಿಕ್ಕ ಕಳ್ಳನನ್ನು ಪೊಲೀಸ್​ ಠಾಣೆಗೆ ಕರೆದೊಯ್ದು ತನಿಖೆ ಮುಂದುವರಿಸಿದ್ದಾರೆ.

Last Updated : Aug 13, 2020, 1:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.