ರಾಮನಗರ: ಫಾರೆಸ್ಟ್ ಗಾರ್ಡ್ ನೇಣು ಬಿಗಿದುಕೊಂಡು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ರಾಮನಗರದಲ್ಲಿ ಜರುಗಿದೆ.
ಶ್ರೀನಿವಾಸ್ ಮೃತ ವ್ಯಕ್ತಿಯಾಗಿದ್ದು, ಪಾವಗಡ ಮೂಲದವರಾಗಿದ್ದಾರೆ. ರಾಮನಗರ ಭಾಗದ ಫಾರೆಸ್ಟ್ ಡಿಪಾರ್ಟ್ಮೆಂಟ್ನಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದರು. ನಿನ್ನೆ ರಾತ್ರಿ ಹತ್ತು ಗಂಟೆಯ ಸುಮಾರಿಗೆ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಇದನ್ನೂ ಓದಿ: ಟ್ಯಾಕ್ಸಿ ಚಾಲಕನ ಆತ್ಮಹತ್ಯೆ: ಏರ್ಪೋರ್ಟ್ ಟ್ಯಾಕ್ಸಿ ಸ್ಥಗಿತ, ಪ್ರಯಾಣಿಕರ ಪರದಾಟ
ರಾಮನಗರದ ಫಾರೆಸ್ಟ್ ಡಿಪಾರ್ಟ್ಮೆಂಟ್ನ ಕ್ವಾಟ್ರರ್ಸ್ನಲ್ಲಿ ವಾಸವಿದ್ದ ಇವರು ಕಳೆದ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು ಎನ್ನಲಾಗಿದೆ. ಕಳೆದ ವರ್ಷ ಮುಖ್ಯಮಂತ್ರಿ ಪದಕ ಸಹ ಪಡೆದಿದ್ದ ಶ್ರೀನಿವಾಸ್ ಅವರ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಶಂಕೆ ಉಂಟಾಗಿದೆ. ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.