ETV Bharat / state

ಸಿ ಪಿ ಯೋಗೇಶ್ವರ್ ಕರೆದದ್ದು ಸತ್ಯ.. ಆದರೆ ಬಾಲಕೃಷ್ಣ ರೀತಿ ತಲೆ ಮಾರಿಕೊಂಡಿಲ್ಲ: ಮಾಗಡಿ ಶಾಸಕ ಎ ಮಂಜುನಾಥ್ - ETV Bharath Kannada news

ಮಾಜಿ ಶಾಸಕ ಬಾಲಕೃಷ್ಣ ಮತ್ತು ಮಾಗಡಿ ಶಾಸಕ ಎ ಮಂಜುನಾಥ್ ನಡುವೆ ಟಾಕ್​ವಾರ್​ - ಎ. ಮಂಜುನಾಥ್ ಪಕ್ಷ ಬಿಡುತ್ತಾರೆ ಎಂಬ ಭಯ ಸ್ವತಃ ಕುಮಾರಸ್ವಾಮಿಗೆ ಇದೆ ಬಾಲಕೃಷ್ಣ ಆರೋಪ - ಬಾಲಕೃಷ್ಣನ ರೀತಿ 10 ಕೋಟಿಗೆ ತಲೆ ಮಾರಿಕೊಂಡಿಲ್ಲ ಎಂದು ಮಂಜುನಾಥ್​ ಪ್ರತಿಕ್ರಿಯೆ.

ramanagara-congress-and-jds-leaders-talk-war
ಮಾಜಿ ಶಾಸಕ ಬಾಲಕೃಷ್ಣ vs ಮಾಗಡಿ ಶಾಸಕ ಎ ಮಂಜುನಾಥ್
author img

By

Published : Jan 9, 2023, 8:17 PM IST

ಮಾಜಿ ಶಾಸಕ ಬಾಲಕೃಷ್ಣ ಮತ್ತು ಮಾಗಡಿ ಶಾಸಕ ಎ ಮಂಜುನಾಥ್ ನಡುವೆ ಟಾಕ್​ವಾರ್

ರಾಮನಗರ: ಚುನಾವಣೆಯಲ್ಲಿ ಗೆದ್ದ ನಂತರ ಜೆಡಿಎಸ್ ಪಕ್ಷ ಬಿಟ್ಟು ಬಿಜೆಪಿ ಪಕ್ಷ ಸೇರಲು ಮಾಗಡಿ ಶಾಸಕ ಎ ಮಂಜುನಾಥ್ ಮುಂದಾಗಿದ್ದರು. ಆಪರೇಷನ್​ ಕಮಲಕ್ಕೆ ಒಳಗಾಗಿದ್ರಾ ಅಥವಾ ಬಿಜೆಪಿ ಸೇರಲು ಸ್ವಯಂ ಮುಂದಾಗಿದ್ರಾ ಜೆಡಿಎಸ್ ಶಾಸಕ ಎಂಬ ಪ್ರಶ್ನೆ ಎಂದು ಹೊಸ ಬಾಂಬ್ ಸಿಡಿಸುವ ಮೂಲಕ ಮಾಜಿ ಶಾಸಕ ಹೆಚ್ ಸಿ ಬಾಲಕೃಷ್ಣ ಮಾಗಡಿ ಶಾಸಕ ಎ.ಮಂಜುನಾಥ್ ಟಾಂಗ್ ಕೊಟ್ಟಿದ್ದಾರೆ.

ರಾಮನಗರ ಜಿಲ್ಲೆ ಮಾಗಡಿಯಲ್ಲಿ ಹೆಚ್ ಸಿ ಬಾಲಕೃಷ್ಣ ಮಾತನಾಡಿ, ಕಳೆದ 2018 ರ ಚುನಾವಣೆಯಲ್ಲಿ ಜೆಡಿಎಸ್​ನಿಂದ ಗೆದ್ದು ನಂತರ ಬಿಜೆಪಿ ಪಕ್ಷಕ್ಕೆ ಸೇರಲು ಮುಂದಾಗಿದ್ದರು. ಎಂಎಲ್ಸಿ ಸಿ.ಪಿ ಯೋಗೇಶ್ವರ್ ಜೊತೆ ಮಾತುಕತೆ ನಡೆಸಿದರು. ಮಾಜಿ ಶಾಸಕ ಬಾಲಕೃಷ್ಣ ಅವರು ಬಿಜೆಪಿಗೆ ಬಂದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಸ್ಪರ್ಧೆ ಮಾಡುವುದಾಗಿ ಹೇಳಿದ್ದರಂತೆ. ಇದಲ್ಲದೇ ಬಾಲಕೃಷ್ಣ ಕಾಂಗ್ರೆಸ್ ಬಿಟ್ಟು ಬಿಜೆಪಿಯಿಂದ ಲೋಕಸಭೆಗೆ ಸ್ಪರ್ಧಿಸಿದರೆ ನಾನು ಎಂಎಲ್​ಎಗೆ ಸ್ಪರ್ಧೆ ಮಾಡುತ್ತೇನೆ ಎಂದು ಎ.ಮಂಜುನಾಥ್ ಹೇಳಿದ್ದರು ಎಂದು ದೂರಿದ್ದಾರೆ.

ಯೋಗೇಶ್ವರ್ ಜೊತೆ ಬೆಂಗಳೂರು ರೌಂಡ್ಸ್​: ಶಾಸಕ ಎ.ಮಂಜುನಾಥ್ ಯೋಗೇಶ್ವರ್ ಹಾಗೂ ಬಾಲಕೃಷ್ಣ ಜೊತೆ ಹಲವು ಬಾರಿ ಮಾತುಕತೆ ನಡೆಸಿದ್ದರು. ಸಿ ಪಿ ಯೋಗೇಶ್ವರ್ ಕಾರಿನಲ್ಲಿ ಶಾಸಕ ಎ.ಮಂಜುನಾಥ್ ಬೆಂಗಳೂರು ಸುತ್ತಾಡಿ, ಕೊನೆಗೆ ತಮ್ಮ ಧರ್ಮಪತ್ನಿ ಬಳಿ ಮಾತನಾಡಿ ಮುಂದಿನ ನಿರ್ಣಯ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಈ ಬಗ್ಗೆ ಯೋಗೇಶ್ವರ್ ಅವರಿಗೆ ಕೇಳಿದರೆ ಸತ್ಯ ಗೊತ್ತಾಗುತ್ತೆ. ಜನರ ಭಯದಿಂದ ಜೆಡಿಎಸ್ ಪಕ್ಷದಲ್ಲಿ ಎ.ಮಂಜುನಾಥ್ ಇದ್ದಾರೆ ಹೊರತು ದೇವೆಗೌಡರು, ಕುಮಾರಸ್ವಾಮಿ ಮೇಲಿನ ಗೌರವದಿಂದ ಅಲ್ಲ ಎಂದು ಟೀಕಿಸಿದ್ದಾರೆ.

ಅಶ್ವತ್ಥ ನಾರಾಯಣ್ ಜೊತೆ ಹೆಚ್ಚು ಕಾಣಿಸಿ ಕೊಳ್ಳುವ ಮಂಜುನಾಥ್​: ಈ ಬಗ್ಗೆ ಕುಮಾರಸ್ವಾಮಿ ಸಹ ಹಲವು ಬಾರಿ‌ ಸಭೆಯಲ್ಲಿ ಹೇಳಿದ್ದಾರೆ. ಎ.ಮಂಜುನಾಥ್ ಅಶ್ವತ್ಥ ನಾರಾಯಣ್ ಜೊತೆ ಹೆಚ್ಚು ಕಾಣಿಸಿಕೊಳ್ಳೂತ್ತಾರೆ. ಪಕ್ಷ ಬಿಟ್ಟು ಬಿಜೆಪಿ ಸೇರುವ ಅನುಮಾನ ಇದೆ. ಆದರೆ ಈ ಕ್ಷೇತ್ರದಲ್ಲಿ ಬೇರೆ ಪ್ರಬಲ ಅಭ್ಯರ್ಥಿ ಇರದ ಕಾರಣ ಎ.ಮಂಜುನಾಥ್​ಗೆ ಪ್ರಾಶಸ್ತ್ಯ ನೀಡಲಾಗುಗತ್ತಿದೆ ಎಂದು ಕುಮಾರಸ್ವಾಮಿ ಅವರೇ ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ.

ಎ.ಮಂಜುನಾಥ್ ತಿರುಗೇಟು: ರಾಮನಗರದ ಮಾಗಡಿಯಲ್ಲಿ ಹೆಚ್ ಸಿ ಬಾಲಕೃಷ್ಣ ಮಾಡಿದ್ದ ಆರೋಪಕ್ಕೆ ಶಾಸಕ ಎ.ಮಂಜುನಾಥ್ ತಿರುಗೇಟು ನೀಡಿದ್ದಾರೆ. ಬಾಲಕೃಷ್ಣ ಹೇಳಿಕೆಗೆ ಕೆಂಡಾಮಂಡಲ ಆಗಿರುವ ಮಂಜುನಾಥ್​ ನಾನು ನಿಮ್ಮ ಹಾಗೆ ಅಲ್ಲ, ನಿಯತ್ತಿನ ನಾಯಿ. ಹೆಚ್​ಡಿಕೆ ಹೆಸರಲ್ಲಿ ನಾಯಿ ನರಿಗಳೆಲ್ಲ ಗೆದ್ದಿವೆ ಎಂಬ ಬಾಲಕೃಷ್ಣ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ದಾರೆ.

ಬಿಡದಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಬಾಲಕೃಷ್ಣ ವಿರುದ್ಧ ಶಾಸಕ ಎ ಮಂಜುನಾಥ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಾಲಕೃಷ್ಣಗೆ ಆತ್ಮಸಾಕ್ಷಿ ಇದೆಯಾ. ಹಿಂದೆ ಅವರೂ ಜೆಡಿಎಸ್ ನಿಂದ ಗೆದ್ದಿದ್ದರು, ಹಾಗಿದರೆ ಇವರೇನು?. ಬಾಲಕೃಷ್ಣ ಅವರಿಗೆ ಮಾತಿನಲ್ಲಿ ಹಿಡಿತ ಇರಬೇಕು. ನನಗೆ ಬಿಜೆಪಿಯಿಂದ ಆಫರ್ ಬಂದಿದ್ದು ನಿಜ. ಆದರೆ ಬಾಲಕೃಷ್ಣ ರೀತಿ ಮಣ್ಣು ತಿನ್ನುವ ಕೆಲಸ ನಾನು ಮಾಡಲಿಲ್ಲ ಎಂದರು.

10 ಕೋಟಿಗೆ ತಲೆಮಾರಿಕೊಳ್ಳಲ್ಲ: ನಿಮ್ಮ ಹಾಗೆ 10 ಕೋಟಿಗೆ ತಲೆಮಾರಿಕೊಳ್ಳುವ ಕೆಲಸ ಮಾಡಲಿಲ್ಲ. ನಾನು ದೇವೇಗೌಡರು ಹಾಗೂ ಹೆಚ್​ಡಿಕೆ ಆಶಿರ್ವಾದಲ್ಲಿ ಗೆದ್ದಿದ್ದೇನೆ. ನೇರವಾಗಿ ಬಿಜೆಪಿ ಸಚಿವರ ಮನೆಗೆ ಹೋಗಿ ಕ್ಷೇತ್ರದ ಕೆಲಸ ಮಾಡಿಸುತ್ತೇನೆ. ನಾನು ತಾಲೂಕಿಗೋಸ್ಕರ ಕೆಲಸ ಮಾಡುವ ನಿಯತ್ತಿನ ನಾಯಿ. ಇನ್ನು ನಾನು ಹೊಟ್ಟೆ ಪಾಡಿಗೆ ರಾಜಕಾರಣಕ್ಕೆ ಬಂದಿಲ್ಲ. ನಿಮ್ಮನ್ನು ಮನೆಗೆ ಕಳುಹಿಸಲು ರಾಜಕಾರಣಕ್ಕೆ ಬಂದಿದ್ದೇನೆ ಎಂದರು.

ಯೋಗೇಶ್ವರ್ ಆಫರ್ ನೀಡದ್ದು‌ ಸತ್ಯ: ಇನ್ನು ಬಿಜೆಪಿ ಸೇರಲು ಸಿಪಿವೈ ಜೊತೆ ಚರ್ಚೆ ಎಂಬ ವಿಚಾರ‌ವಾಗಿ ಮಾತನಾಡಿದ ಅವರು, ಹೌದು ಮೈತ್ರಿ ಸರ್ಕಾರ ತೆಗೆಯುವ ಸಂದರ್ಭದಲ್ಲಿ ಯೋಗೇಶ್ವರ್ ಅವರೇ ನನ್ನ ಭೇಟಿ ಆಗಿದ್ದರು. ಪಕ್ಷಕ್ಕೆ ಆಹ್ವಾನಿಸಿದ್ದರು, ಆಗ ನಾನು ಅದನ್ನು ರಿಜೆಕ್ಟ್ ಮಾಡಿದ್ದೆ. ಬೇಕಾದಲ್ಲಿ ಯೋಗೇಶ್ವರ್ ಅವರನ್ನೇ ಕೇಳಲಿ. ನಾನು ಮಾಜಿ ಶಾಸಕರ ರೀತಿ ಸೇಲ್ ಆಗೋ ಗಿರಾಕಿ ಅಲ್ಲ. ಬೇಕಿದ್ದರೆ ಮಾಗಡಿ ರಂಗನಾಥ ಸ್ವಾಮಿ ದೇವಾಲಯದಲ್ಲಿ ಪ್ರಮಾಣ ಮಾಡುತ್ತೇನೆ. ಅವರೂ ಬಂದು ಪ್ರಮಾಣ ಮಾಡಲಿ ಎಂದು ಮಾಜಿ ಶಾಸಕ ಬಾಲಕೃಷ್ಣಗೆ ಸವಾಲ್ ಹಾಕಿದ್ದಾರೆ.

ಇದನ್ನೂ ಓದಿ: 2ಎ ಮೀಸಲಾತಿ ಕೊಡಬಾರದೆಂದು ಯಡಿಯೂರಪ್ಪ ಬೊಮ್ಮಾಯಿ ಬಳಿ ತಿರುಪತಿಯಲ್ಲಿ ಆಣೆ ಮಾಡಿಸಿದ್ದಾರೆ: ಕಾಶಪ್ಪನವರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.