ರಾಮನಗರ: ತಾಲೂಕಿನ ವಿಶ್ವ ವಿಖ್ಯಾತ ಗೌಡಗೆರೆ ಚಾಮುಂಡೇಶ್ವರಿ ತಾಯಿಗೆ ಇದೇ ಜುಲೈ 31 ರಂದು ಮಹಾ ಅಭಿಷೇಕ ನೆರವೇರಿಸಲು ದೇವಸ್ಥಾನದ ಆಡಳಿತ ಮಂಡಳಿ ಸಜ್ಜಾಗಿದೆ. ಬಾಹುಬಲಿ ವಿಗ್ರಹಕ್ಕೆ ನಡೆಸುವ ಮಹಾಮಸ್ತಕಾಭಿಷೇಕ ಮಾದರಿಯಲ್ಲೇ ಈ ಗೌಡಗೆರೆಯಲ್ಲೂ ಕೂಡ ಚಾಮುಂಡೇಶ್ವರಿ ತಾಯಿಗೆ ಮಹಾ ಅಭಿಷೇಕ ನೆರವೇರಲಿದೆ. ಈ ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಜುಲೈ 29 ರಂದು ಅಮ್ಮನವರ ಮೂಲಕ ವಿಗ್ರಹಕ್ಕೆ ಮಂಗಳ ಸ್ನಾನ, ಅಭಿಷೇಕ, ಪಂಚಾಮೃತ ನೈವೇದ್ಯ ಹಾಗೂ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ನಡೆಯಲಿದೆ. ಕ್ಷೇತ್ರದ ಬನ್ನಿ ಮಂಟಪದಿಂದ 108 ಹಾಲರಬಿಯನ್ನು ಮೆರವಣಿಗೆಯಲ್ಲಿ ತಂದು ಬಸಪ್ಪನಿಗೆ ಕ್ಷೀರಾಭಿಷೇಕ ಜರುಗಲಿದೆ. ದೇವಾಲಯದ ಮುಂಭಾಗದಲ್ಲಿರುವ ದೇವಿ ವಿಗ್ರಹಕ್ಕೆ ವಿವಿಧ ಅಭಿಷೇಕಗಳನ್ನು ವಿಗ್ರಹಕ್ಕೆ ಸಲ್ಲಿಸಲಾಗುತ್ತದೆ. ಸುಮಾರು 37,247ಕೆ.ಜಿ.ಯ ವಿವಿಧ ಬಗೆಯ ದ್ರವ್ಯಗಳಿಂದ ಅಭಿಷೇಕ ಮಾಡಲಾಗುವುದು.
ಈ ಮಹಾ ಅಭಿಷೇಕ ಕಾರ್ಯಕ್ರಮ ವಿಕ್ಷಣೆಗೆ ಲಕ್ಷಾಂತರ ಮಂದಿ ಬರುವ ನಿರೀಕ್ಷೆ ಇದೆ. ದೇಗುಲ ಧರ್ಮದರ್ಶಿಗಳಾದ ಮಲ್ಲೇಶ್ ಗೂರೂಜಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಪ್ರದಾನಿ ಹೆಚ್.ಡಿ. ದೇವೇಗೌಡ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವತ್ಥ್ ನಾರಾಯಣ್, ಸಂಸದ ಡಿ.ಕೆ. ಸುರೇಶ್, ಚಿತ್ರ ನಟ ಸುದೀಪ್, ಶಿವರಾಜ್ ಕುಮಾರ್ ಸೇರಿದಂತೆ ಹಲವು ಸಚಿವರು ಹಾಗೂ ಶಾಸಕರಿಗೆ ಆಹ್ವಾನ ನೀಡಿದ್ದಾರೆ.
ಇದನ್ನೂ ಓದಿ: ವಾರ್ಷಿಕ ಪ್ರವಾಸದ ನಂತರ ನಿವಾಸಕ್ಕೆ ಮರಳಿದ ಜಗನ್ನಾಥ - ಬಲಭದ್ರ ದೇವ ಮತ್ತು ಸಹೋದರಿ ದೇವಿ ಸುಭದ್ರಾ