ETV Bharat / state

ರಾಮನಗರದಲ್ಲಿ ಭಾರಿ ಮಳೆ: 15ಕ್ಕೂ ಹೆಚ್ಚು ಕುರಿಗಳು ಸಾವು, ವಿದ್ಯುತ್ ಕಂಬಗಳು ಧರಾಶಾಹಿ - Ramanagara rain

ರಾಮನಗರದಲ್ಲಿ ಭಾನುವಾರ ಸುರಿದ ಗುಡುಗುಸಹಿತ ಧಾರಾಕಾರ ಮಳೆಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

Ramanagara
ರಾಮನಗರ
author img

By

Published : May 2, 2022, 10:47 AM IST

ರಾಮನಗರ: ಜಿಲ್ಲಾದ್ಯಂತ ನಿನ್ನೆ ಸುರಿದ ಗುಡುಗು, ಮಿಂಚು, ಬಿರುಗಾಳಿ ಸಹಿತ ಜೋರು ಮಳೆಗೆ ಜನತೆ ತತ್ತರಿಸಿದ್ದಾರೆ. ವರುಣನ‌ ಆರ್ಭಟಕ್ಕೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ಹೊಲ, ರಸ್ತೆಗುಂಡಿಗಳಲ್ಲಿ ನೀರು ತುಂಬಿಕೊಂಡಿದೆ.

ಸುಮಾರು ಎರಡು ಗಂಟೆಗೂ ಅಧಿಕ ಕಾಲ ಮಳೆ ಸುರಿದಿದೆ. ಬಿಡದಿಯ ನಾರಾಯಣ, ಕುಮಾರ್ ಹಾಗೂ ವೆಂಕಟರಮಣಪ್ಪ ಎಂಬುವರ ಕುರಿಗಳು ಸಿಡಿಲಿನ ಅಬ್ಬರಕ್ಕೆ ಸಿಲುಕಿ ಸಾವನ್ನಪ್ಪಿವೆ. ಒಟ್ಟು 15 ಕ್ಕೂ ಹೆಚ್ಚು ಕುರಿ ಹಾಗೂ 6 ಮೇಕೆಗಳು ಅಸುನೀಗಿವೆ. ಅಷ್ಟೇ ಅಲ್ಲದೆ, ರಾಮನಗರ - ಮಾಗಡಿ ರಸ್ತೆ ಬಳಿ ಗಾಳಿಯ ರಭಸಕ್ಕೆ ಅರಳಿಮರ ಬಿದ್ದು 10 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ.

ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಗುಡುಗು, ಗಾಳಿಸಹಿತ ಜೋರು ಮಳೆ: ಜನಜೀವನ ಅಸ್ತವ್ಯಸ್ತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.