ರಾಮನಗರ: ಕನಕಪುರದಲ್ಲಿ ಮತ್ತೆ ಪ್ರತಿಭಟನೆ ಶುರುವಾಗಿದ್ದು, ಪೊಲೀಸರ ಮಧ್ಯಪ್ರವೇಶದಿಂದಾಗಿ ಪರಿಸ್ಥಿತಿ ತಿಳಿಯಾಗಿದೆ.
ರಾತ್ರಿ ಏಕಾ ಏಕಿ ಪಂಜುಗಳನ್ನಿಡಿದ ಪ್ರತಿಭಟನಾಕಾರರು, ಕನಕಪುರ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ್ದಾರೆ. ಇದರಿಂದಾಗಿ ಮತ್ತೆ ಪ್ರತಿಭಟನೆ ಬಿಸಿ ಕನಕಪುರಕ್ಕೆ ತಟ್ಟಿದ್ದು, ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ.
ನೂರಾರು ಪ್ರತಿಭಟನಕಾರರು ಏಕಾ ಏಕೀ ಪಂಜಿನ ಮೆರವಣಿಗೆ ನಡೆಸಿದ್ದನ್ನು ಕಂಡು ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು, ಪ್ರತಿಭಟನಾಕಾರರನ್ನು ಸಮಾಧಾನ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಿದ್ದರೂ, ಸುಮಾರು 30 ನಿಮಿಷಗಳ ಕಾಲ ಕನಕಪುರದಲ್ಲಿ ಪ್ರತಿಭಟನೆ ನಡೆದಿದ್ದರಿಂದ ಮತ್ತೆ ಬಿಗುವಿನ ವಾತವರಣ ಸೃಷ್ಟಿಯಾಗಿತ್ತು.