ETV Bharat / state

ರಾಜಕೀಯ ಕೇವಲ ಲಾಭಕಾಗಿ ಅಲ್ಲ, ರಾಜ್ಯದ ಅಭಿವೃದ್ಧಿಗಾಗಿ: ಸಚಿವ ಅಶ್ವಥ್ ನಾರಾಯಣ್

ರಾಜಕೀಯ ಮಾಡೋದು ಕೇವಲ ಲಾಭಕಾಗಿ ಅಲ್ಲ, ಅಭಿವೃದ್ಧಿಗಾಗಿ ಎಂದು ಹೆಚ್‌.ಡಿ.ಕುಮಾರಸ್ವಾಮಿ ಅವರಿಗೆ ಸಚಿವ ಅಶ್ವಥ್ ನಾರಾಯಣ್ ತಿರುಗೇಟು ಕೊಟ್ಟರು.

Higher Education Minister Dr. Aswath Narayan
ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್
author img

By

Published : Jan 3, 2023, 6:53 AM IST

'ಅಭಿವೃದ್ಧಿ ನಮ್ಮ ಪಕ್ಷದ ಅಜೆಂಡಾ'

ರಾಮನಗರ: ರಾಮದೇವರ ಬೆಟ್ಟದ ಅಭಿವೃದ್ಧಿ ಬಗ್ಗೆ ಹೆಚ್‌.ಡಿ.ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿ, ಶ್ರೀರಂಗ ಯೋಜನೆಯನ್ನು ಇವರು 20 ವರ್ಷ ಆದ್ರೂ ಮಾಡೋಕೆ ಆಗ್ತಿರಲಿಲ್ಲ. ಇವ್ರು ಒಂದು ಜಮೀನನ್ನಾದರೂ ಸ್ವಾಧೀನ‌ಪಡಿಸುಕೊಳ್ಳೋಕೆ ಆಯ್ತಾ? ಕೆಂಪಾಪುರದಲ್ಲಿ ಪೂಜೆ ಮಾಡಿ ಹೋದರು. ನಂತರ ಕೆಂಪೇಗೌಡ ಹೆಸರು ಹೇಳಿದ್ರು, ಆದರೆ, ಒಂದು ನಯಾಪೈಸೆಯ ಕೆಲಸ ಮಾಡಿದ್ರಾ ಎಂದು ಡಾ.ಅಶ್ವಥ್ ನಾರಾಯಣ್ ಪ್ರಶ್ನಿಸಿದರು.

ಮಾಗಡಿಯಲ್ಲಿ ಬಿಜೆಪಿಯ ಬೂತ್ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಭಿವೃದ್ಧಿ ಮಾಡುತ್ತೇನೆ ಎಂದು ಸುಳ್ಳು ಹೇಳಿಕೊಂಡು ರಾಜಕೀಯ ಮಾಡುವವರು ನಾವಲ್ಲ. ಅಭಿವೃದ್ಧಿ ನಮ್ಮ ಪಕ್ಷದ ಅಜೆಂಡಾ ಎಂದರು. ಮಾಗಡಿ ಚತುಷ್ಪಥ ರಸ್ತೆ ಅಭಿವೃದ್ಧಿ ಏನಾಯ್ತು?, ಸಂಸ್ಕೃತ ವಿವಿಗೆ 65 ಕೋಟಿ ರೂ ಖರ್ಚು ಮಾಡಿ ಅಭಿವೃದ್ಧಿ ಮಾಡ್ತಾ ಇದೀವಿ‌. ಎಲ್ಲರಿಗೂ ಉದ್ಯೋಗ ಸಿಗುವ ಕೆಲಸ ಮಾಡುತ್ತೇವೆ. ಒಬ್ಬರಿಗೆ ಒಂದು ಉದ್ಯೋಗ ಕೊಡಿಸುವ ಕೆಲಸವನ್ನು ಇವರು ಮಾಡಿದ್ದಾರಾ ಎಂದರು.

ಕೋಟಿ ಜನರಿಗೆ ಕೌಶಲ್ಯ ಕೊಡಿಸುವ ಶಕ್ತಿ ನಮ್ಮ ಸರ್ಕಾರಕ್ಕಿದೆ. ಶಿಕ್ಷಣ, ಆರೋಗ್ಯ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿಯಾಗುತ್ತಿದೆ. ಅಭಿವೃದ್ಧಿ ಅಂದ್ರೆ ಏನು? ಮೂಲಭೂತವಾಗಿ ಏನು ಬೇಕೋ ಅದನ್ನು ಕೊಡೋದು. ರಾಜಕೀಯ ಮಾಡೋದು ಕೇವಲ ಲಾಭಕಾಗಿ ಅಲ್ಲ. ರಾಜಕೀಯ ಮಾಡೋದು ಅಭಿವೃದ್ಧಿಗಾಗಿ ಎಂದರು.

ಅಮುಲ್ ಜೊತೆ ನಂದಿನಿ ವಿಲೀನ ವಿಚಾರ: ಈ ವಿಚಾರವಾಗಿ ಗುಜರಾತಿ ಗುಲಾಮರನ್ನಾಗಿ ಮಾಡಲು ಹೊರಟಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಅಶ್ವಥ್ ನಾರಾಯಣ್‌ ತಿರುಗೇಟು ಕೊಟ್ಟರು. ನಂದಿನಿ-ಅಮುಲ್ ಹೇಗೆ ವಿಲೀನ ಮಾಡೋಕೆ ಆಗುತ್ತೆ?. ಸ್ವಲ್ಪ ಹೇಳಿಕೊಡಲು ಹೇಳಿ. ಇಂತಹ ತಪ್ಪು ಭಾವನೆ ತರುವುದನ್ನು ಖಂಡಿಸುತ್ತೇನೆ ಎಂದು ಗುಡುಗಿದರು.

ಕರ್ನಾಟಕ ರಾಜ್ಯ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುತ್ತಿದೆ‌. ಅವರ ಸಹೋದರರು ಕೂಡ ಫೆಡರೇಷನ್​ನಲ್ಲಿ ಇದ್ದರು. ಅಮುಲ್ ಜೊತೆ ಐಸ್‌ಕ್ರೀಮ್ ಉತ್ಪಾದನೆ ಯಾರು ಮಾಡಿಕೊಡುತ್ತಿದ್ದರು. ಪರಸ್ಪರ ಸಹಕಾರ ಪಡೆಯುವಂಥದ್ದು, ಅತಿ ಹೆಚ್ಚಿನ ಉತ್ಪಾದನೆ ಆದಾಗ ಅದನ್ನು ತೆಗೆದುಕೊಳ್ಳುವುದು ಕೊಡುವುದರ ಬಗ್ಗೆ ಕೊಲಾಬ್ರೇಷನ್ ಇರಬೇಕು. ಈ ದಿಕ್ಕಿನಲ್ಲಿ ಯೋಚನೆ ಮಾಡಲಾಗಿದೆ. ವಿಲೀನ ಹೇಗೆ ಮಾಡ್ತಾರೆ ಅಂತ ಬುದ್ದಿವಂತರೇ ಹೇಳಬೇಕು ಎಂದರು.

ಪಕ್ಷ ಸಂಘಟನೆಗೆ ಮುಂದಾದ ಸಚಿವರು: ಅಮಿತ್ ಷಾ ರಾಜ್ಯಕ್ಕೆ ಬಂದು ಹೋದ ಮೇಲೆ ಮಾಗಡಿಯಲ್ಲಿ ಪಕ್ಷ ಸಂಘಟನೆಗೆ ಫೀಲ್ಡಿಗಿಳಿದ ಸಚಿವ ಅಶ್ವಥ್ ನಾರಾಯಣ್, ಬಿಜೆಪಿಯ ಬೂತ್ ವಿಜಯ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಮಾಗಡಿ ತಾಲೂಕಿನ ಸಂಕೀಘಟ್ಟ ಗ್ರಾಮದಲ್ಲಿ ಬೈಕ್ ಮೂಲಕ ಗ್ರಾಮದಲ್ಲಿ ಕಾರ್ಯಕರ್ತರ ಜೊತೆ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು.

ಇದನ್ನೂ ಓದಿ: ನಾಳೆ ರಾಜ್ಯಕ್ಕೆ ಅಮಿತ್ ಶಾ ಆಗಮನ, ಪಕ್ಷ ಸಂಘಟನೆ ಕಾರ್ಯಕ್ರಮಗಳಲ್ಲಿ ಭಾಗಿ: ಅಶ್ವತ್ಥನಾರಾಯಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.