ರಾಮನಗರ: ಗಣೇಶ ನಿಮಜ್ಜನಕ್ಕೆ ತೆರಳುವ ವೇಳೆ ಪಾನಮತ್ತರಾಗಿ ಅಸಭ್ಯವಾಗಿ ವರ್ತಿಸುತ್ತಿದ್ದ ಯುವಕರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿರುವ ಘಟನೆ ರಾಮನಗರದಲ್ಲಿ ನಡೆದಿದೆ.
ರಾಮನಗರ ಜಿಲ್ಲೆಯ ಕನಕಪುರದ ಎವಿಆರ್ ರಸ್ತೆಯ ಅಜ್ಜಿ ಮೆಸ್ ಬಳಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶ ಮೂರ್ತಿಯ ನಿಮಜ್ಜನಕ್ಕೆ ತೆರಳುವ ವೇಳೆ ಮದ್ಯ ಕುಡಿದು ಬಂದ ಯುವಕರು ಡಿಜೆ ಮ್ಯೂಸಿಕ್ ಹಾಕಿಕೊಂಡು ಅಸಭ್ಯವಾಗಿ ನರ್ತಿಸುತ್ತಿದ್ದರು. ಈ ವೇಳೆ, ಸ್ಥಳಕ್ಕೆ ತೆರಳಿದ ಪಟ್ಟಣ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಅರ್ಧ ಗಂಟೆಯಲ್ಲಿ 278 ಬಾರಿ ಸೂರ್ಯ ನಮಸ್ಕಾರ: ಏಷ್ಯಾ ಬುಕ್ ಆಫ್ ರೇಕಾರ್ಡ್ ಸೇರಿದ ಕುಂದಾನಗರಿ ವೀರ
ಲಘು ಲಾಠಿ ಪ್ರಹಾರ ನಡೆಸಿ ಯುವಕರನ್ನು ಚದುರಿಸಿದ ಪೊಲೀಸರು ಸ್ವತಃ ಗಣೇಶ ಮೂರ್ತಿಯನ್ನು ಕೊಂಡೊಯ್ದು ಪೂಜೆ ಸಲ್ಲಿಸಿ ಗಡಸಳ್ಳಿ ಕೆರೆಯಲ್ಲಿ ನಿಮಜ್ಜನ ಮಾಡಿದ್ದಾರೆ. ಇನ್ನೂ ಮೂರು ಮಂದಿ ಯುವಕರ ಜೊತೆಗೆ ಟ್ರ್ಯಾಕ್ಟರ್ ವಶಪಡಿಸಿಕೊಂಡಿದ್ದು, ತಲೆ ಮರೆಸಿಕೊಂಡಿರುವ ಯುವಕರ ಪತ್ತೆಗೆ ಶೋಧ ಕಾರ್ಯ ಕೈಗೊಂಡಿದ್ದಾರೆ.