ETV Bharat / state

ರಾಮನಗರ: ಅಕ್ರಮವಾಗಿ ಸಾಗಿಸುತ್ತಿದ್ದ ಕೋಟ್ಯಂತರ ರೂ. ಹಣ ವಶಕ್ಕೆ

ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಎಲ್ಲಡೆ ಕಟ್ಟುನಿಟ್ಟಿನ ತನಿಖೆ ಜಾರಿಯಲ್ಲಿದೆ.

Police seized illegal amount
ಅಕ್ರಮವಾಗಿ ಸಾಗಿಸುತ್ತಿದ್ದ ಕೋಟ್ಯಾಂತರ ಹಣ ವಶಕ್ಕೆ ಪಡೆದ ಪೊಲೀಸರು
author img

By

Published : Apr 18, 2023, 4:11 PM IST

ರಾಮನಗರ: ಸೂಕ್ತ ದಾಖಲೆ ಇಲ್ಲದೇ ಎಟಿಎಂ ವಾಹನದಲ್ಲಿ ಸಾಗಿಸುತ್ತಿದ್ದ ಸುಮಾರು 1 ಕೋಟಿ 97 ಲಕ್ಷ ರೂ. ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಾಮನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಾರೋಹಳ್ಳಿ ಹೋಬಳಿಯ ಗಂಡಕನದೊಡ್ಡಿ ಚೆಕ್ ಪೋಸ್ಟ್​ನಲ್ಲಿ ಎಸ್ಎಸ್​ಟಿ ತಂಡದ ಮುಖ್ಯಸ್ಥರು ವಾಹನ ತಪಾಸನೆ ನಡೆಸಿದ ವೇಳೆ ATM ಹಣ ವರ್ಗಾವಣೆ ವಾಹನದಲ್ಲಿ ಹಣ ಇರುವುದು ಪತ್ತೆಯಾಗಿದೆ.

CMS info systems ಸಂಸ್ಥೆಯ ATM ಹಣ ವರ್ಗಾವಣೆ ವಾಹನವು ಚುನಾವಣಾ ಆಯೋಗ ಸೂಚಿಸಿದ ಮಾರ್ಗಸೂಚಿಗಳ ವಿರುದ್ಧವಾಗಿ ಸೂಕ್ತ ದಾಖಲೆಯಿಲ್ಲದೇ ಹಣ ವರ್ಗಾಯಿಸುತ್ತಿರುವುದು ಬೆಳಕಿಗೆ ಬಂದಿದೆ. ಮೇಲ್ನೋಟಕ್ಕೆ ಸೂಕ್ತ ದಾಖಲೆಗಳು ಇಲ್ಲದೇ ಇರುವುದು ಕಂಡು ಬಂದ ಕಾರಣ ರೂ. 1.97 ಕೋಟಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಂಡು ಕನಕಪುರ ತಾಲ್ಲೂಕು ಖಜಾನೆಯಲ್ಲಿ ಭದ್ರತೆ ಇಡಲಾಗಿದೆ.

ಇದನ್ನೂ ಓದಿ: ದಾಖಲೆ ಇಲ್ಲದ 10 ಲಕ್ಷ ಹಣ ಪತ್ತೆ: ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.