ರಾಮನಗರ : ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಸ್ವಗ್ರಾಮ ಚಕ್ಕರೆಯ ದೇವಾಲಯ ಸೇರಿದಂತೆ 6 ದೇಗುಲಗಳಲ್ಲಿ ಕಳ್ಳತನ ಮಾಡಿದ್ದ ಖದೀಮರನ್ನು 24 ಗಂಟೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಶ್ರೀರಾಮ ದೇವರ ಬೆಟ್ಟದ ಬಳಿಯಿರುವ ಇರುಳಿಗರ ಕಾಲೋನಿ ವಾಸಿಗಳಾದ ಮರಿಯಪ್ಪ, ಶ್ರೀನಿವಾಸ್, ನಾಗರಾಜ ಬಂಧಿತ ಆರೋಪಿಗಳು. ಇನ್ನೊಬ್ಬ ತಲೆಮರಿಸಿಕೊಂಡಿದ್ದು, ಆರೋಪಿ ಮಹದೇವ್ ಎಂಬಾತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಗ್ರಾಮದ ಹೊರ ಭಾಗದಲ್ಲಿರುವ ದೇವಾಲಯಗಳನ್ನು ಟಾರ್ಗೆಟ್ ಮಾಡುತ್ತಿದ್ದ ಕಳ್ಳರು, ಅಲ್ಲಿರುವ ದೇವರ ಮೂರ್ತಿ ಸೇರಿ ವಸ್ತುಗಳನ್ನು ಕದಿಯುತ್ತಿದ್ದರು. ಆರೋಪಿಗಳ ವಿರುದ್ಧ ಚನ್ನಪಟ್ಟಣ ಗ್ರಾಮಾಂತರ ಠಾಣೆ, ಅಕ್ಕೂರು ಠಾಣೆ ಮತ್ತು ಎಂ ಕೆ ದೊಡ್ಡಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿವೆ.
ಆರೋಪಿಗಳಿಂದ ಎರಡು ಚಿನ್ನದ ತಾಳಿ, ಮೂಗುತಿ, ಕಂಚಿನ ಶಿವಲಿಂಗ, ದೊಡ್ಡ ಹಾಗೂ ಚಿಕ್ಕ ಕಂಚಿನ ಗಂಟೆಗಳು, ಕಂಚಿನ ಕೈಗಂಟೆಗಳು, ತೂಗು ಕಂಚಿನ ದೀಪಗಳು, ಕಂಚಿನ ಪಣಿಗೆ, ದೇವರ ಶ್ರೀಶೂಲ ಸೇರಿ 1 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನು, ದೇವಾಲಯದ ಹುಂಡಿ ಹಣವನ್ನು ಕಳ್ಳರು ಖರ್ಚು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಸುಪ್ರೀಂಕೋರ್ಟ್ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕಾಗುತ್ತದೆ : ಸಚಿವ ಎ. ನಾರಾಯಣಸ್ವಾಮ