ETV Bharat / state

ಸಿಎಂ ಯಾರೆಂದು ತೀರ್ಮಾನಿಸೋದು ನಾಡಿನ ಜನತೆ: ಕುಮಾರಸ್ವಾಮಿ - ಡಿಕೆಶಿ ವಿರುದ್ಧ ಹೆಚ್​ಡಿಕೆ ವಾಗ್ದಾಳಿ

ಮುಖ್ಯಮಂತ್ರಿ ಸ್ಥಾನಕ್ಕೆ ಆಸೆ ಪಡುವುದು ದೊಡ್ಡ ವಿಷಯವಲ್ಲ- ನಾಡಿನ ಜನರ ನಾಡಿಮಿಡಿತ ಅರಿತಿರಬೇಕು-ಜನರಿಗಾಗಿ ಏನು ಮಾಡುತ್ತೇನೆ ಎಂಬುದನ್ನು ಹೇಳಿ ಅವಕಾಶ ಕೇಳಲಿ ಎಂದ ಹೆಚ್​ಡಿಕೆ

HDK talked to press
ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಮಾಧ್ಯಮಗಳೊಂದಿಗೆ ಮಾತನಾಡಿದರು.
author img

By

Published : Jul 24, 2022, 7:31 PM IST

ರಾಮನಗರ : ಈಗಾಗಲೇ ಚುನಾವಣೆಯ ಬಿರುಸು ಆರಂಭವಾಗಿದೆ‌. ಚುನಾವಣೆ ಘೋಷಣೆಗೂ ಮುನ್ನವೇ ಮುಖ್ಯಮಂತ್ರಿ ನಾನು ತಾನು ಎನ್ನುವಂತಹ ಮಾತುಗಳು ಕೇಳಿಬರುತ್ತಿವೆ. ಸಿಎಂ ಗಾದಿಗಾಗಿ ಆಸೆ ಪಡೋದು ತಪ್ಪೇನಿಲ್ಲ. ಎಲ್ಲರೂ ಅವರವರದೇ ಆಸೆಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಆಸೆಗಳನ್ನು ನೆರವೇರಿಸೋದು ನಾಡಿನ ಜನತೆ ಎಂದು‌ ಮಾಜಿ‌ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಸಿಎಂ ಕುರ್ಚಿಗಾಗಿ ನಾನು ತಾನು‌ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ರಾಮನಗರದಲ್ಲಿ ಮಾತನಾಡಿದ ಅವರು,‌‌ ಸಿಎಂ ಆಗಬೇಕು ಎಂದು ಎಲ್ಲರೂ ಆಸೆ ಪಡುತ್ತಾರೆ. ಚುನಾವಣೆ‌ ಹತ್ತಿರ ಇರುವಾಗ ಆಸೆ ಪಡುವುದು ಸಹಜ. ಆದರೆ ಸಿಎಂ ಆಗಬೇಕಾದರೆ ಜನತೆಯ ಆಶೀರ್ವಾದದ ಜೊತೆಗೆ ದೈವ ಕೃಪೆಯೂ ಕೂಡ ಇರಬೇಕು ಎಂದರು.

ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಮಾಧ್ಯಮಗಳೊಂದಿಗೆ ಮಾತನಾಡಿದರು.

ಡಿಕೆಶಿ ವಿರುದ್ಧ ಮಾಜಿ ಸಿಎಂ ಹೆಚ್‌ಡಿಕೆ ವಾಗ್ದಾಳಿ : ರಾಮನಗರದಲ್ಲಿ ಯಾರೇ ಬಂದರೂ ನಮ್ಮನ್ನು ಏನು‌ ಮಾಡಲು ಸಾಧ್ಯವಿಲ್ಲ. ಕಳೆದ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇರಲಿಲ್ಲ ಅಷ್ಟೇ. ಉಳಿದ ಎಲ್ಲಾ ಚುನಾವಣೆಗಳಲ್ಲಿ ರಾಮನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇದ್ದರು. ಜನತೆಯ ಆಶೀರ್ವಾ ಇರುವವರೆಗೆ ಏನು ಆಗಲ್ಲ ಎಂದು ಡಿಕೆಶಿ ಕುಟುಂಬದ ಅಭ್ಯರ್ಥಿ ಕಣಕ್ಕಿಳಿದರೆ ಎಂಬ ವಿಚಾರವಾಗಿ ಹೆಚ್​ಡಿಕೆ ಪ್ರತಿಕ್ರಿಯೆ ನೀಡಿದ್ದಾರೆ.

ರಾಮನಗರದಲ್ಲಿ ಶಿವಕುಮಾರ್ ಅವಕಾಶ ಕೇಳಿರುವುದು ತಪ್ಪಿಲ್ಲ. ಆದರೆ ಜನರ ಕಷ್ಟ ಸುಖಕ್ಕೆ ಕೆಲಸ ಮಾಡಿದ್ದೇನೆ ಮತ ಕೊಡಿ ಎಂದು ಕೇಳಬಹುದು. ಕೇವಲ ಅಧಿಕಾರಕ್ಕೆ ಮಾತ್ರ ಕೇಳಿದರೆ ಆಗಲ್ಲ. ಅವರ ಬ್ಯಾಕ್​ಗ್ರೌಂಡ್​ ನೋಡ್ತಾರೆ. ಅವರು ಒಕ್ಕಲಿಗ ಟ್ರಂಪ್ ಕಾರ್ಡ್ ಬಳಸಿ ಮತ ಕೇಳಿದರೂ, ಅದನ್ನು ಜನ‌ ತೀರ್ಮಾನ ಮಾಡ್ತಾರೆ ಎಂದರು.

ಇಲ್ಲಿ ಸಿಎಂ ಆಗುವುದು ಅಥವಾ ಸಿಎಂ ಆಗಲು ಅಪೇಕ್ಷೆ ಪಟ್ಟರೆ ಸಾಲದು. ಜನರ ನಡವಳಿಕೆ, ನಾಡಿನ ಸಮಸ್ಯೆ ಬಗ್ಗೆ ಅರಿವಿರಬೇಕು. ಜನರಿಗಾಗಿ ಏನು‌ ಮಾಡುತ್ತೇನೆ ಎಂದು ಹೇಳಬೇಕು. ನಾನು ಸಿಎಂ ಆಗಿ ಕಾರ್ಯಕ್ರಮ ಏನು ನೀಡುತ್ತೇನೆ. ಬಡವರಿಗಾಗಿ ಯಾವ ಕಾರ್ಯಕ್ರಮ ಕೊಡುತ್ತೇನೆ. ನನ್ನ ಕಾರ್ಯಕ್ರಮಗಳೇನು, ಈ ಬಗ್ಗೆ ಹೇಳಿ ಅವಕಾಶ ಕೇಳಲಿ ಪರವಾಗಿಲ್ಲ. ಆಗ ಯಾರೋ ಸಿಎಂ ಆಗಿದ್ರು, ಈಗ ನನಗೆ ಅವಕಾಶ ನೀಡಿ ಅಂದರೆ, ಅವಕಾಶ ತೆಗೆದುಕೊಂಡು ಏನು ಮಾಡ್ತೀರಿ. ಜನ ಕೋಡೋ ಅವಕಾಶ ಏನಕ್ಕೆ ಬಳಕೆಯಾಗುತ್ತದೆ ಎಂಬುದರ ಬಗ್ಗೆ ಹೇಳಬೇಕಲ್ಲ. ಜನ ಅವೆಲ್ಲವನ್ನೂ ಚರ್ಚೆ ಮಾಡುತ್ತಾರೆ ಎಂದರು.

ಹಳೆ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆ : ಹಳೆ ಮೈಸೂರು ಭಾಗದ ಜಿಲ್ಲೆಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸಂಘಟನೆ ವಿಚಾರವಾಗಿ ಮಾತನಾಡಿದ ಹೆಚ್​ಡಿಕೆ, ಹಳೆ ಮೈಸೂರಲ್ಲಿ ಜೆಡಿಎಸ್​ ನಿರ್ನಾಮ ಮಾಡಬೇಕೆಂದು ಎರಡೂ ಪಕ್ಷಗಳು​ ಹೊರಟಿವೆ. ಅಲ್ಲೇನು ಆಗಲ್ಲ, ಜೆಡಿಎಸ್​ ಭದ್ರವಾಗಿದೆ. ಈ ಬಾರಿ ಜೆಡಿಎಸ್​ ಹೆಚ್ಚಿನ ಸ್ಥಾನ ಗಳಿಸಲಿದೆ. ಕಾಂಗ್ರೆಸ್- ಬಿಜೆಪಿಗಿಂತ ಜೆಡಿಎಸ್​ 15-20 ಹೆಚ್ಚು ಸ್ಥಾನ ಪಡೆಯಲಿದ್ದು, ಹೆಚ್ಚಿನ ಸ್ಥಾನ ಪಡೆಯುವ ವಿಶ್ವಾಸ ನಂಬಿಕೆ ನನಗಿದೆ ಎಂದು ತಿಳಿಸಿದರು.

ರಾಮನಗರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ : ನಿಖಿಲ್ ಸ್ಪರ್ಧಿಸುವ ಕುರಿತು ಪಕ್ಷ ನಿರ್ಧಾರ ಮಾಡಲಿದೆ. ಈ ಬಗ್ಗೆ ಅಭಿಪ್ರಾಯ ತಿಳಿಸಿರುವ ನಿಖಿಲ್​ ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡ್ತೇನೆ. ನಾನು ಶಾಸಕನಾಗೋದು ಮುಖ್ಯವಲ್ಲ. 30-40 ಸ್ಥಾನದಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬರಬೇಕು. ಇದು ನನ್ನ ಮನಸ್ಸಿನಲ್ಲಿದೆ. ಆದ್ದರಿಂದ ನೀವು ನನ್ನ ಅಭ್ಯರ್ಥಿ ಆಗು ಎನ್ನುವ ಬದಲು ಹೆಚ್ಚಿನ ಸ್ಥಾನವನ್ನು ಗೆಲ್ಲಲು ಸಮಯ ಮೀಸಲಿಡು ಎನ್ನಬೇಕು ಎಂದು ನನ್ನ ಬಳಿ ಚರ್ಚೆ ಮಾಡಿದ್ದಾರೆ. ನನಗೂ ನಿಖಿಲ್ ಶಾಸಕನಾಗಬೇಕು ಎಂದಿಲ್ಲ. ಹೆಚ್ಚಿನ ಸ್ಥಾನ ಗೆಲ್ಲಲು ಆತನ ಕೊಡುಗೆ ಪಕ್ಷಕ್ಕೆ ಬೇಕಿದೆ. ಈ ಬಗ್ಗೆ ಕಾರ್ಯಕರ್ತರು ಹಾಗೂ ಪಕ್ಷ ಮುಂದೆ ತೀರ್ಮಾನಿಸಲಿದೆ ಎಂದು ತಿಳಿಸಿದರು.

ಅನಿತಾ ಕುಮಾರಸ್ವಾಮಿ ಅವರ ಸ್ಪರ್ಧೆ ವಿಚಾರವನ್ನೂ ಪಕ್ಷ ನಿರ್ಧರಿಸಲಿದೆ. ಅನಿತಾ ಕುಮಾರಸ್ವಾಮಿ ನನಗಿಂತ ಹೆಚ್ಚಾಗಿ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ. ಚನ್ನಪಟ್ಟಣಕ್ಕೆ ನಾನೇನು ಮಾಡ್ತಾ ಇದ್ದೇನೆ, ಅದರ ಎರಡರಷ್ಟು ಅನಿತಾ ಕುಮಾರಸ್ವಾಮಿ ಅವರು ಮಾಡುತ್ತಿದ್ದಾರೆ ಎಂದು ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದರು.

ಇದನ್ನೂ ಓದಿ : ಫೋನ್ ಮೂಲಕ ಸಚಿವರನ್ನು ರಿಮೋಟ್ ಕಂಟ್ರೋಲ್ ಮಾಡುವ ತಾಕತ್ತು ಅಂಗಾರರಿಗಿದೆ: ಸಚಿವ ಸೋಮಶೇಖರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.