ರಾಮನಗರ : ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ರಾಮನಗರ ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಗೆಲವು ಸಾಧಿಸಿದ್ದಾರೆ. ಬಿಜೆಪಿ ಸಿದ್ಧಾಂತಗಳನ್ನ ನೋಡಿ ಜನರು ಗ್ರಾಪಂನಲ್ಲಿ ನಂಬಿಕೆ ಇಟ್ಟು ಮತ ಹಾಕಿದ್ದಾರೆಂದು ಡಿಸಿಎಂ ಡಾ.ಅಶ್ವತ್ಥ್ ನಾರಾಯಣ್ ತಿಳಿಸಿದರು.
ರಾಮನಗರದಲ್ಲಿ ಮಾತನಾಡಿದ ಅವರು, ಈ ಗೆಲುವು ಕಾರ್ಯಕರ್ತರದ್ದು ಹಾಗೂ ಗೆಲುವು ಸಾಧಿಸಿದ ಅಭ್ಯರ್ಥಿಗಳದ್ದಾಗಿದೆ. ನಾನು ಹಾಗೂ ರುದ್ರೇಶ್ ಜೊತೆಯಲ್ಲೇ ಮೀಟಿಂಗ್ ಮಾಡಿದ್ದೇವೆ. ಪಕ್ಷದ ನೀತಿ ರೀತಿ ಬಿಟ್ಟು ಕೆಲಸ ಮಾಡುವವರಿಗೆ ಪಕ್ಷದಲ್ಲಿ ಉಳಿಗಾಲ ಇಲ್ಲ.
ಓದಿ-ಸಿದ್ದರಾಮಯ್ಯ ವಿರುದ್ಧ ಮಡಿಕೇರಿಯಲ್ಲಿ ಎಫ್ಐಆರ್
ಬಿಜೆಪಿಯಲ್ಲಿ ಪಕ್ಷ ಶಾಶ್ವತ ಹೊರತು ಯಾವುದೇ ವ್ಯಕ್ತಿಗಳಲ್ಲ. ನಾನು ಕೂಡ ಒಬ್ಬ ಕಾರ್ಯಕರ್ತನಾಗಿ ಇವತ್ತು ಈ ಮಟ್ಟಕ್ಕೆ ಬಂದಿದ್ದೇನೆ. ಪಕ್ಷದ ಶಿಸ್ತನ್ನ ಉಲ್ಲಂಘನೆ ಮಾಡಿದ್ರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಹಾಗೆಯೇ ಸಿಎಂ ನಮ್ಮ ಕ್ಯಾಪ್ಟನ್, ಅವರು ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಿರ್ಧಾರ ಮಾಡುತ್ತಾರೆ ಎಂದರು.