ETV Bharat / state

ರಾಮನಗರದಲ್ಲಿ ಹಳೆ ಮನೆಯ ಗೋಡೆ ಕುಸಿತ: ನಾಲ್ವರಿಗೆ ಗಾಯ - ರಾಮನಗರ ಲೇಟೆಸ್ಟ್ ನ್ಯೂಸ್

ರಾಮನಗರದ ಎಂಜಿ ರಸ್ತೆಯಲ್ಲಿರುವ ಶಿವನಾಂದ ಥಿಯೇಟರ್ ಬಳಿಯಿದ್ದ ಹಳೆ ಮನೆಯ ಗೋಡೆ ಕುಸಿದು ಬಿದ್ದಿದೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.

Old house wall collapse in Ramnagar
ರಾಮನಗರದಲ್ಲಿ ಹಳೆ ಮನೆಯ ಗೋಡೆ ಕುಸಿತ
author img

By

Published : Oct 20, 2021, 6:09 PM IST

Updated : Oct 20, 2021, 6:49 PM IST

ರಾಮನಗರ : ನಗರದ ಎಂಜಿ ರಸ್ತೆಯಲ್ಲಿರುವ ಶಿವನಾಂದ ಥಿಯೇಟರ್ ಬಳಿಯ ದಿನೇಶ್ ಲ್ಯಾಬ್ ಮುಂಭಾಗದ ಹಳೆ ಮನೆಯ ಗೋಡೆ ಕುಸಿದು ಬಿದ್ದಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ರಾಮನಗರದಲ್ಲಿ ಹಳೆ ಮನೆಯ ಗೋಡೆ ಕುಸಿತ

ತಾಲೂಕಿನಲ್ಲಿ ಕೆಲ ದಿನಗಳಿಂದ ಮಳೆಯಾಗುತ್ತಿದ್ದು, ಕಟ್ಟಡ ಕುಸಿದಂತಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇಂದು ದಿನೇಶ್ ಲ್ಯಾಬ್ ಮುಂಭಾಗದಲ್ಲಿದ್ದ ಹಳೆ ಮನೆಯ ಗೋಡೆ ಕುಸಿದು ಬಿದ್ದಿದೆ. ಮನೆ ಕುಸಿದ ವೇಳೆ ಮನೆಯಲ್ಲಿ ಯಾರೂ ವಾಸವಿರಲಿಲ್ಲ ಎನ್ನಲಾಗುತ್ತಿದೆ.

ಕೆಲ ದಿನಗಳಿಂದ ಈ ಮನೆ ಸಂಬಂಧ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿತ್ತು. ಇದೀಗ ಇತ್ಯರ್ಥವಾಗಿದೆ. ಮನೆಯ ಜಾಗವನ್ನು ನಾರಾಯಣ್ ಡಿಜಿಟಲ್ ಸ್ಟುಡಿಯೋ ಮಾಲೀಕರು ಕೊಂಡುಕೊಂಡಿದ್ದರು ಎಂದು ತಿಳಿದುಬಂದಿದೆ.

youth injured
ಘಟನೆಯಲ್ಲಿ ಗಾಯಗೊಂಡ ಯುವಕ

ತಾಲೂಕಿನ ಮಳೂರು ಪಟ್ಟಣ ಗ್ರಾಮದ ಯೋಗೇಶ್ ಎಂಬ ಯುವಕ ಸಹ ಲ್ಯಾಬ್‌ಗೆ ಪರೀಕ್ಷೆ ಮಾಡಿಸಿಕೊಳ್ಳಲು ಹೋಗಿದ್ದು, ಆತ ಫೋನಿನಲ್ಲಿ ಮಾತನಾಡುತ್ತಾ ಕುಸಿದು ಬೀಳುವ ಸಂದರ್ಭದಲ್ಲಿ ಓಡಿ ಬರಲು ಸಾಧ್ಯವಾಗದೆ ಅವನು ಹಾಗೂ ಇನ್ನಿತರೆ ಮೂವರ ಮೇಲೆ ಗೋಡೆ ಕುಸಿದಿದೆ. ಗಾಯಾಳುಗಳನ್ನು ಮಂಡ್ಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಕಟ್ಟಡದ ಅವಶೇಷದಲ್ಲಿ ಮತ್ತಷ್ಟು ಜನ ಸಿಕ್ಕಿಕೊಂಡಿರಬಹುದು ಎಂಬ ಸಂಶಯದ ಮೇಲೆ ದಿನೇಶ್ ಲ್ಯಾಬ್‌ನ ಮಾಲೀಕರು, ಜೆಸಿಬಿಯನ್ನು ತರಿಸಿ ಅದನ್ನು ತೆರವುಗೊಳಿಸಿದರು. ಆದರೆ ಅಲ್ಲಿ ಬೇರೆ ಯಾರೂ ಸಿಲುಕಿಕೊಂಡಿರಲಿಲ್ಲ.

ಇದನ್ನೂ ಓದಿ: ಶಿಷ್ಯ ಸತೀಶ್​ ಜಾರಕಿಹೊಳಿಗೆ ಹೆಲಿಕಾಪ್ಟರ್​​ನಲ್ಲಿ ಡ್ರಾಪ್ ಕೊಟ್ಟ ಸಿದ್ದರಾಮಯ್ಯ: Video

Last Updated : Oct 20, 2021, 6:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.