ರಾಮನಗರ: ಜಿಲ್ಲೆಯಲ್ಲಿ ಇಂದು 29 ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ ಎಂದು ಜಿಲ್ಲಾಧಿಕಾರಿ ಎನ್.ಎಸ್.ಅರ್ಚನಾ ತಿಳಿಸಿದ್ದಾರೆ.

ಇವತ್ತು ದೃಢಪಟ್ಟ ಪ್ರಕರಣಗಳ ಪೈಕಿ ಮಾಗಡಿ, ರಾಮನಗರ ತಾಲೂಕಿನಲ್ಲಿ ತಲಾ 11 ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೆ ಕನಕಪುರ ತಾಲೂಕಿನಲ್ಲಿ 4, ಚನ್ನಪಟ್ಟಣದಲ್ಲಿ 3 ಪ್ರಕರಣಗಳು ಕಾಣಿಸಿಕೊಂಡಿವೆ. ಈ ಎಲ್ಲರನ್ನು ರಾಮನಗರ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.