ETV Bharat / state

ಪತ್ನಿಗೆ ವಿಷದ ಇಂಜಕ್ಷನ್​ ಕೊಟ್ಟು ಕೊಂದ ಪಾಪಿ ಪತಿ - Husband killed his wife by injecting poison

ಪತ್ನಿ ಮೇಲೆ ಅನುಮಾನಗೊಂಡ ಪತಿ ಆಕೆಗೆ ವಿಷದ‌ ಇಂಜೆಕ್ಷನ್‌ ಕೊಟ್ಟು ಉಸಿರುಗಟ್ಟಿಸಿ ಕೊಂದಿರುವ ಘಟನೆ ರಾಮನಗರದ ಹನುಮಂತ ನಗರದಲ್ಲಿ ನಡೆದಿದೆ.

Murder of wife by husband in Ramnagar
ಪೊಲೀಸರಿಂದ ಸ್ಥಳ ಪರಿಶೀಲನೆ
author img

By

Published : Jan 15, 2020, 10:16 AM IST

Updated : Jan 15, 2020, 4:48 PM IST

ರಾಮನಗರ: ಪತಿ ಪತ್ನಿಯನ್ನು ವಿಷದ‌ ಇಂಜೆಕ್ಷನ್‌ ಕೊಟ್ಟು ಉಸಿರುಗಟ್ಟಿಸಿ ಕೊಂದಿರುವ ಘಟನೆ ರಾಮನಗರದ ಹನುಮಂತ ನಗರದಲ್ಲಿ ನಡೆದಿದೆ.

ಕೊಳಮಾರನಕುಪ್ಪೆ ಮೂಲದ ದೀಪಾ (22) ಕೊಲೆಯಾಗಿರುವ ದುರ್ದೈವಿ. ದೀಪಾಳನ್ನು ವಡ್ಡರದೊಡ್ಡಿಯ ವೆಂಕಟೇಶ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ಸದಾ ತನ್ನ ಪತ್ನಿ ಮೇಲೆ ಅನುಮಾನ ಪಡುತಿದ್ದ ವೆಂಕಟೇಶ, ಆಕೆಗೆ ಮಾನಸಿಕ‌ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದನಂತೆ. ಜೊತೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ದಿನಗೂಲಿ ‌ನೌಕರನಾಗಿರುವ ವೆಂಕಟೇಶನಿಗೆ ಅಕ್ರಮ ಸಂಭಂದವಿತ್ತು ಎನ್ನಲಾಗ್ತಿದೆ.

ಪೊಲೀಸರಿಂದ ಸ್ಥಳ ಪರಿಶೀಲನೆ

ಪತಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದಿದ್ದ ದೀಪಾ, ತನ್ನ ಕುಟುಂಬಸ್ಥರಿಗೆ ತಿಳಿಸುವ ಬೆದರಿಕೆ ‌ಹಾಕಿದ್ದಳಂತೆ. ಇದರಿಂದ ಹೆದರಿದ ವೆಂಕಟೇಶ ರಸಗೊಬ್ಬರ ಅಂಗಡಿಯಿಂದ ಕ್ರಿಮಿನಾಶಕ ತಂದು ದೀಪಾಳಿಗೆ ಇಂಜೆಕ್ಟ್​ ಮಾಡಿ ಉಸಿರುಗಟ್ಟಿಸಿ ಸಾಯಿಸಿದ್ದಾನೆ. ಬಳಿಕ ತನಗೇನು ಗೊತ್ತಿಲ್ಲದಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಹುಷಾರಿಲ್ಲ ಎಂದು ದಾಖಲಾಗಿದ್ದ.

Murder of wife by husband in Ramnagar , ಪೊಲೀಸರಿಂದ ಸ್ಥಳ ಪರಿಶೀಲನೆ
ಹತ್ಯೆಯಾದ ಮಹಿಳೆ ಮತ್ತು ಆಕೆಯ ಪತಿ

ದೀಪಾ ಸಾವಿನ ಬಗ್ಗೆ ಪತಿ ವೆಂಕಟೇಶ ಬಳಿ ಎಷ್ಟೇ ವಿಚಾರಿಸಿದರೂ ಆತ ಮಾತ್ರ ಯಾವುದೇ ವಿಷಯವನ್ನು ಬಾಯಿಬಿಟ್ಟಿರಲಿಲ್ಲ. ಇದರಿಂದ ಅನುಮಾನಗೊಂಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಈ ಬಗ್ಗೆ ಐಜೂರು ಠಾಣೆ ಪೊಲೀಸರು ಪ್ರಕರಣ ದಾಖಲಾಗಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Intro:Body:ರಾಮನಗರ : ಪತ್ನಿಗೆ ಮಾನಸಿಕ‌ ಹಾಗು ದೈಹಿಕ ಹಿಂಸೆ ನೀಡುತ್ತಿದ್ದ ವಿಕೃತ‌ ಮನಸ್ಸಿನ ಪತಿ ಆಕೆಗೆ ವಿಷದ‌ ಇಂಜೆಕ್ಷನ್‌ಕೊಟ್ಟು ಮನೆಯಲ್ಲಿಯೇ ಉಸಿರುಗಟ್ಟಿಸಿ ಸಾಯಿಸಿರುವ ವಿಲಕ್ಷಣ ಘಟನೆ‌ ನಡೆದಿದೆ.
ನಗರದ ಹನುಮಂತನಗರದ ಮನೆಯೊಂದರಲ್ಲಿ ವಾಸವಾಗಿದ್ದ ಕೊಳಮಾರನಕುಪ್ಪೆ ಮೂಲದ ದೀಪಾ (22) ಎಂಬಾಕೆಯೇ ಕೊಲೆಯಾಗಿರುವ ದುರ್ದೈವಿ. ದೀಪಾಳನ್ನ ವಡ್ಡರದೊಡ್ಡಿಯ ವೆಂಕಟೇಶ ಎಂಬಾತನೊಂದಿಗೆ ವಿವಾಹ ಮಾಡೊಕೊಡಲಾಗಿತ್ತು. ವೆಂಕಟೇಶ ಅನುಮಾನದ ಪಿಶಾಚಿಯಂತೆ ವರ್ತಿಸುತ್ತಿದ್ದ‌ ಅಲ್ಲದೆ ಮಾನಸಿಕ‌ ಹಾಗೂ ದೈಹಿಕವಾಗಿಯೂ ಹಿಂಸಿಸುತ್ತಿದ್ದ ಎನ್ನಲಾಗಿದೆ. ವೆಂಕಟೇಶ ಸರ್ಕಾರಿ ಆಸ್ಪತ್ರೆಯಲ್ಲಿ ದಿನಗೂಲಿ‌ನೌಕರನಾಗಿರುವ ವೆಂಕಟೇಶನಿಗೆ ಅಕ್ರಮ ಸಂಭಂದವಿತ್ತು ಎನ್ನಲಾಗಿದೆ‌, ಇದು ದೀಪಾಳ ಗಮನಕ್ಕೆ ಬಂದಿದ್ದು ಅದನ್ನ ತನ್ನ ಕುಟುಂಬಸ್ಥರಿಗೆ ತಿಳಿಸುವ ಬೆದರಿಕೆ‌ಹಾಕಿದ್ದರಿಂದ ಹೆದರಿದ ಪಾಪಿ ವೆಂಕಟೇಶ ಪರ್ಟಿಲೈಸರ್ ಅಂಗಡಿಯಿಂದ (ಕ್ರಿಮಿನಾಶಕ)ವಿಷದ ಬಾಟಲಿ ತಂದು ಅದನ್ನ ಬೇರೆ ಬಾಟಲಿಗೆ ಹಾಕಿ ಮನೆಗಡತಂದು ತನ್ನ ಹೆಂಡತಿ ದೀಪಾಳಿಗೆ ಇಂಜೆಕ್ಷನ್ ಕೊಟ್ಟಿದ್ದಾನೆ ಹಾಗೂ ಉಸಿರುಗಟ್ಟಿಸಿ ಸಾಯಿಸಿದ್ದಾನೆ .‌ನಂತರ ತನಗೇನು ಗೊತ್ತಿಲ್ಲ‌ಎನ್ನುವಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಹುಷಾರಿಲ್ಲ ಎಂದು ಹಾಸಿಗೆ ಮೇಲೆ‌ ಡ್ರಿಪ್ಸ್ ಹಾಕಿಸಿಕೊಂಡು ಮಲಗಿದ್ದ ಆತನನ್ನ ಪೋಲೀಸರು ಎಷ್ಟೇ ವಿಚಾರಿಸಿದರೂ ಚಾಲಾಕಿ ವೆಂಕಟೇಶ ಬಾಯಿಬಿಟ್ಟಿರಲಿಲ್ಲ ಕಡೆಗೆ ಅನುಮಾನದಿಂದಲೇ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿ‌ ತಪ್ಪೊಪ್ಪಿಕೊಂಡಿದ್ದಾನೆ‌. ಮೃತ ದೀಪಾಳ‌ ಕುಟುಂಬಸ್ಥರ ರೋಧನೆ‌ ಮುಗಿಲು ಮುಟ್ಟುತ್ತಿತ್ತು.
ಈ ಸಂಭಂಧ ಐಜೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.Conclusion:
Last Updated : Jan 15, 2020, 4:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.