ETV Bharat / state

ವೈಯಕ್ತಿಕವಾಗಿ ಟೀಕೆ ಮಾಡುವುದು ಸರಿಯಲ್ಲ: ಅನಿತಾ ಕುಮಾರಸ್ವಾಮಿ

ಮಾಜಿ ಸಿಎಂ ಹೆಚ್​​ ಡಿ ಕುಮಾರಸ್ವಾಮಿ ವಿರುದ್ಧ ಹೇಳಿಕೆ ನೀಡುತ್ತಿದ್ದ ಜಮೀರ್​​​​ಗೆ ಜೆಡಿಎಸ್​ ಶಾಸಕಿ ಅನಿತಾ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

Anitha kumaraswamy
ಅನಿತಾ ಕುಮಾರಸ್ವಾಮಿ
author img

By

Published : Oct 28, 2021, 5:28 PM IST

ರಾಮನಗರ : ರಾಜಕೀಯ ನಾಯಕರು ಜವಾಬ್ದಾರಿಯುತವಾಗಿ ಮಾತನಾಡಬೇಕು. ವೈಯಕ್ತಿಕವಾಗಿ ಯಾರೊಬ್ಬರ ಮೇಲೆ ಟೀಕೆ ಮಾಡುವುದು ಸರಿಯಲ್ಲ ಎಂದು ಜೆಡಿಎಸ್​ ಶಾಸಕಿ ಅನಿತಾ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್​ ಶಾಸಕಿ ಅನಿತಾ ಕುಮಾರಸ್ವಾಮಿ

ಜಿಲ್ಲೆಯ ​​ಚನ್ನಪಟ್ಟಣ ತಾಲೂಕಿನ ಗೋವಿಂದಹಳ್ಳಿ ಗ್ರಾಮದಲ್ಲಿ ನೂತನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಮೀರ್ ಅಹ್ಮದ್ ನಾಲಿಗೆ ಮೇಲೆ ನಿಯಂತ್ರಣ ಇಟ್ಟುಕೊಂಟು ಮಾತನಾಡಬೇಕು. ಜನರು ರಾಜಕೀಯ ನಾಯಕರನ್ನು ಗಮನಿಸುತ್ತಾರೆ. ಮುಂದಿನ ದಿನಗಳಲ್ಲಿ ಜನರೇ ಈ ಬಗ್ಗೆ ನಿರ್ಧಾರ ಮಾಡುತ್ತಾರೆ ಎಂದರು.

ಕುಮಾರಸ್ವಾಮಿ ಅವರು ಎಂಪಿ ಆಗಿದ್ದಾಗ ಜಮೀರ್ ಪರಿಚಯವಾಗಿದ್ದು, ಇವರು ಹೇಗೆ ಕುಮಾರಸ್ವಾಮಿ ಅವರನ್ನು ಸಾಕಿದರು. ಅವರಿಗೇನು ಅಪ್ಪ - ಅಮ್ಮ ಇರಲಿಲ್ಲವಾ, ಅವರ ಹೇಳಿಕೆ ಎಲ್ಲ ಬಾಲಿಷ ಎನಿಸುತ್ತದೆ ಎಂದರು.

ಚುನಾವಣೆ ಬಂದಾಗ ಮಾತ್ರ ಕುಮಾರಸ್ವಾಮಿ ಅವರು ಟಾರ್ಗೆಟ್ ಆಗುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಗ ಚುನಾವಣೆ ಇದೆಯಲ್ಲ ಅದಕ್ಕೆ ಒಬ್ಬರಿಗೊಬ್ಬರು ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ. ಮುಂದೆ ಇದೆಲ್ಲವೂ ನಿಲ್ಲುತ್ತದೆ ಬಿಡಿ ಎಂದರು.

ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್ ಮತದಾರರಿಗೆ ಹಣ ಹಂಚುತ್ತಿವೆ: ಹೆಚ್​ಡಿಕೆ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.