ETV Bharat / state

ಮುಖ್ಯಮಂತ್ರಿ ಬಗ್ಗೆ ಮಾತನಾಡಿ ಯಾವುದೇ ಗೊಂದಲಕ್ಕೆ ಸಿಲುಕುವುದಿಲ್ಲ: ಸಿ.ಪಿ.ಯೋಗೇಶ್ವರ್ - ಸಿಎಂ ಯಡಿಯೂರಪ್ಪ ಬಗ್ಗೆ ಸಚಿವ ಸಿಪಿ ಯೋಗೇಶ್ವರ್ ಹೇಳಿಕೆ

ಯಡಿಯೂರಪ್ಪ ಅವರ ಬಗ್ಗೆ ನಾನು ಯಾವಾಗಲೂ ಮಾತನಾಡಿಲ್ಲ. ಅವರು ನಮ್ಮ ನಾಯಕರು. ಮುಖ್ಯಮಂತ್ರಿ ಬಗ್ಗೆ ನಾನು ಮಾತನಾಡಿ ಯಾವುದೇ ಗೊಂದಲಕ್ಕೆ ಸಿಲುಕುವುದಿಲ್ಲ. ಹೈಕಮಾಂಡ್ ನಿರ್ಧಾರಕ್ಕೆ ನಾನು‌ ಬದ್ಧನಾಗಿರುವೆ ಎಂದು ಸಚಿವ ಸಿ.ಪಿ,ಯೋಗೇಶ್ವರ್​ ಹೇಳಿದ್ದಾರೆ.

Minister CP Yogeshwar statement about CM BS yeddyurappa
ಸಚಿವ ಸಿ.ಪಿ.ಯೋಗೇಶ್ವರ್
author img

By

Published : Jun 6, 2021, 12:37 PM IST

ರಾಮನಗರ: ನಾನು ರಾಜಕೀಯ ವಿಚಾರವಾಗಿ ಯಾವುದೇ ಹೇಳಿಕೆ ಕೊಡುವುದಿಲ್ಲ. ನನ್ನ ಹೇಳಿಕೆ ಸಾಕಷ್ಟು ಸುದ್ದಿಯಾಗಿದೆ. ನಾನು ಮುಖ್ಯಮಂತ್ರಿ ಬಗ್ಗೆ ಮಾತನಾಡುವುದಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ಪಕ್ಷದಲ್ಲಿ ಉನ್ನತ ನಾಯಕರು ಇದ್ದಾರೆ ಎಂದು‌ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.

ಸಚಿವ ಸಿ.ಪಿ.ಯೋಗೇಶ್ವರ್

ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ಹೆಚ್ಚಾದ ಹಿನ್ನೆಲೆಯಲ್ಲಿ‌ ಇಂದು ಸ್ನೇಹಿತರ ಸಹಗೂಡಿ ಸಾವಿರಾರು ದಿನಸಿ ಕಿಟ್‌ಗಳನ್ನು ವಿತರಣೆ ಮಾಡುವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಅವರು, ಕಳೆದ ಒಂದು ತಿಂಗಳಿಂದ ಬಿಜೆಪಿ ಕಾರ್ಯಕರ್ತರು ಆಹಾರವನ್ನು ವಿತರಣೆ ಮಾಡ್ತಿದ್ದಾರೆ. ಹೀಗಾಗಿ ನಾನು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ನನಗೆ ಪಕ್ಷ ರಾಜೀನಾಮೆ ಕೊಡು ಎಂದರೆ ಕೊಡಬೇಕಾಗುತ್ತದೆ. ಮುಖ್ಯಮಂತ್ರಿ ಬಗ್ಗೆ ನಾನು ಮಾತನಾಡಿ ಯಾವುದೇ ಗೊಂದಲಕ್ಕೆ ಸಿಲುಕುವುದಿಲ್ಲ. ಹೈಕಮಾಂಡ್ ನಿರ್ಧಾರಕ್ಕೆ ನಾನು‌ ಬದ್ಧನಾಗಿರುವೆ ಎಂದಿದ್ದಾರೆ.

ವಿರೋಧ ಪಕ್ಷಗಳು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿಲ್ಲ. ವಿರೋಧ ಪಕ್ಷಗಳು ನಮ್ಮ ಪಕ್ಷದವರ ಜೊತೆಯಲ್ಲಿ ಚೆನ್ನಾಗಿ ಇದ್ದಾರೆ. ಹಾಗಾಗಿ ನಾವೇ ವಿರೋಧ ಪಕ್ಷವಾಗಿ ಕೆಲಸ ಮಾಡುವ ಸಂದರ್ಭ ಬಂತು ಎಂದಿದ್ದೇನೆ ಅಷ್ಟೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹೈಕಮಾಂಡ್ ಸೂಚಿಸಿದರೆ ತಕ್ಷಣ ರಾಜೀನಾಮೆ: ಸಿಎಂ ಬಿಎಸ್​ವೈ

ಯಡಿಯೂರಪ್ಪ ಅವರ ಬಗ್ಗೆ ನಾನು ಯಾವಾಗಲೂ ಮಾತನಾಡಿಲ್ಲ. ಅವರು ನಮ್ಮ ನಾಯಕರು. ಬಿಜೆಪಿ ಪಕ್ಷಕ್ಕೆ ಯಡಿಯೂರಪ್ಪ ನವರೇ ನಾಯಕರು. ಹಾಗಾಗಿ ನಾನು ಅವರ ಬಗ್ಗೆ ಹಿಂದೆಯೂ ಮಾತನಾಡಿಲ್ಲ. ಈಗಲೂ ಮಾತನಾಡಲ್ಲ. ಅವರ ಬಗ್ಗೆ ನಾನು‌ ಯಾವಾಗಲೂ ಸಾಫ್ಟ್, ಅವರು ನಮ್ಮ ನಾಯಕರು ಎಂದು ಸಚಿವ ಸಿ.ಪಿ.ಯೋಗೇಶ್ವರ್ ಇದೇ ವೇಳೆ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.