ರಾಮನಗರ: ಬಿಜೆಪಿ ಸರ್ಕಾರದಲ್ಲಿ ಬರೀ ಹಗರಣಗಳೇ ಇವೆ ಎಂಬ ಸಂಸದ ಡಿ.ಕೆ.ಸುರೇಶ್ ಹೇಳಿಕೆಗೆ ಸಚಿವ ಅಶ್ವತ್ಥ ನಾರಾಯಣ್ ವಾಗ್ದಾಳಿ ನಡೆಸಿ, ಯಾರ ಬಾಯಲ್ಲಿ ಯಾರ ಮಾತು ಬರುತ್ತಪ್ಪಾ?. ಇವತ್ತು ಅವರ ಮಾತಲ್ಲಿ ಒಳ್ಳೆಯ ಮಾತುಗಳು ಬರುತ್ತಿವೆ. ಭ್ರಷ್ಟಾಚಾರ ಮುಕ್ತ, ಪಾರದರ್ಶಕತೆ, ಆಡಳಿತ ಇಂತಹ ಮಾತುಗಳು ಬರುತ್ತಿವೆ ಅಂದ್ರೆ ಸಂತೋಷ. ಅವರ ಕಣಕಣದಲ್ಲೂ ಭ್ರಷ್ಟಾಚಾರ ತುಂಬಿದೆ. ಅಧಿಕಾರ ದುರ್ಬಳಕೆ, ಸ್ವಜನ ಪಕ್ಷಪಾತ, ಇವೆಲ್ಲಾ ಅವರು ಅಳವಡಿಸಿಕೊಂಡಿದ್ದಾರೆ ಎಂದರು.
ಕನಕಪುರದಲ್ಲಿ ಬಿಜೆಪಿ ಸಂಘಟನೆಗೆ ಹೆಚ್ಚಿನ ಒತ್ತು ವಿಚಾರಕ್ಕೆ ಸಂಬಂಧಿಸಿ ಮಾತನಾಡಿ, ಕನಕಪುರದಲ್ಲಿ ದೌರ್ಜನ್ಯ, ಉಸಿರುಗಟ್ಟುವಂತಹ ವಾತಾವರಣವಿದ್ದು ಇದಕ್ಕೆಲ್ಲ ಕೊನೆಗಾಲ ಬಂದಿದೆ. ಕೊನೆಯ ಆಟ ಆಡುವಾಗ ಉಸಿರು ಜೋರಾಗಿ ಆಡ್ತಾರೆ ಅನ್ನೋ ರೀತಿ ಆಗ್ತಿದೆ ಎಂದರು.
ಇದನ್ನೂ ಓದಿ: 'ರಾಷ್ಟ್ರೀಯ ಭಾಷೆ ಕುರಿತು ಪದೇ ಪದೇ ಹೇಳಿಕೆ ನೀಡಿದರೆ ಸಾಮರಸ್ಯಕ್ಕೆ ಧಕ್ಕೆ'