ರಾಮನಗರ: ಜಯಪುರ ಗೇಟ್ ಬಳಿ ಮಿನ್ ಬಸ್ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ನಲ್ಲಿ ಇದ್ದ 15ಕ್ಕೂ ಹೆಚ್ಚು ಮಹಿಳೆಯರಿಗೆ ಗಾಯಗಳಾಗಿರುವ ಘಟನೆ ನಡೆದಿದೆ.
ತಾಲೂಕಿನ ಜಯಪುರ ಗ್ರಾಮದ ಬಳಿಯ ಪೇಟೆ ಕುರುಬರಹಳ್ಳಿ ನಡುವೆ ಅಪಘಾತ ಸಂಭವಿಸಿದ್ದು, ಮಿನಿ ಬಸ್ ಪಲ್ಟಿಯಾಗಿದೆ. ರಾಮನಗರಕ್ಕೆ ಬರುತ್ತಿದ್ದ ಮಿನಿ ಬಸ್ ಚಾಲಕನ ಅಜಾಗರೂಕತೆ ಮತ್ತು ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಗಂಬೀರವಾಗಿ ಗಾಯಗೊಂಡ ಗಾಯಾಳುಗಳಿಗೆ ಸರ್ಕಾರಿ ಆಸ್ಫತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಮನಗರ ಹೊರವಲಯದಲ್ಲಿರುವ ಮಧುರಾ ಗಾರ್ಮೆಂಟ್ಸ್ಗೆ ಸೇರಿದ ಬಸ್ ಮಾಗಡಿ ರಸ್ತೆಯ ಅಕ್ಕೂರು ಗ್ರಾಮದಿಂದ ಬರುತ್ತಿತ್ತು ಎನ್ನಲಾಗಿದ್ದು, ಅತಿ ವೇಗವಾಗಿ ಬಂದ ವಾಹನ ಚಾಲಕ ದಿಢೀರ್ ಬ್ರೇಕ್ ಹಾಕಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ದೌಡಾಯಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ರಸ್ತೆ ಮಧ್ಯೆ ಬಿದ್ದಿದ್ದ ವಾಹನಗಳ ತೆರವು ಕಾರ್ಯಾಚರಣೆ ನಡೆಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.