ರಾಮನಗರ: ರೈತರಿಂದ ಖರೀದಿಸುವ ಹಾಲಿನ ಬೆಲೆಯಲ್ಲಿ 1.50 ರೂ ಕಡಿತಕ್ಕೆ ಮುಂದಾಗಿರುವ ಬೆಂಗಳೂರು ಹಾಲು ಒಕ್ಕೂಟ ನಿರ್ಧಾರವನ್ನು ಮಾಗಡಿ ಶಾಸಕ ಎ.ಮಂಜುನಾಥ ವಿರೋಧಿಸಿ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ಹಾಲು ಒಕ್ಕೂಟವು ಕೊರೊನಾ ಸಂಕಷ್ಟ ಕಾಲದಲ್ಲಿ ರೈತರ ನೆರವಿಗೆ ಧಾವಿಸದೆ ರೈತರಿಂದ ತೆಗೆದುಕೊಳ್ಳುವ ಹಾಲಿನ ಬೆಲೆ ಕಡಿಮೆ ಮಾಡಲು ಮುಂದಾಗಿರುವುದರ ವಿರುದ್ಧ ಮಾಗಡಿ ಶಾಸಕ ಆಕ್ರೋಶ ವ್ಯಕ್ತಪಡಿಸಿದರು.
ರಾಮನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಬೆಂಗಳೂರು ಹಾಲು ಒಕ್ಕೂಟ ಮಂಗಳವಾರದಿಂದ ರೈತರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ 1 ರೂ. 50 ಪೈಸೆ ಕಡಿತ ಮಾಡಿದೆ. ಅಲ್ಲದೇ ರೈತರಿಂದ ವಾರದಲ್ಲಿ ಎರಡು ದಿನ ಹಾಲು ಖರೀದಿಸದಿರಲು ಬೆಂಗಳೂರು ಹಾಲು ಒಕ್ಕೂಟ ಹಲವಾರು ಸಭೆಗಳನ್ನು ನಡೆಸುತ್ತಿದೆ ಎಂದರು.
ಕೋವಿಡ್ ಮಹಾಮಾರಿ ಇನ್ನಿಲ್ಲದಂತೆ ಜನರನ್ನು ಕಾಡುತ್ತಿದೆ. ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನೆಲಸಿದ್ದ ಗ್ರಾಮೀಣ ಭಾಗದ ಜನರು ಉದ್ಯೋಗ ತೊರೆದು ಗ್ರಾಮಕ್ಕೆ ವಾಪಸ್ ಬಂದು ಹಸು ಸಾಕಾಣಿಕೆಯನ್ನು ವೃತ್ತಿಯಾಗಿಸಿಕೊಂಡಿದ್ದಾರೆ. ಆಟೋ ಚಾಲಕರು, ಸಣ್ಣಪುಟ್ಟ ವೃತ್ತಿ ಸೇರಿದಂತೆ ಇಂಜಿನಿಯರ್ ಉದ್ಯೋಗ ತೊರೆದು ಹಳ್ಳಿ ಸೇರಿದ ನೂರಾರು ಮಂದಿ ಹೈನು ಉದ್ಯಮ ಆಸರೆಯಾಗಿತ್ತು. ಆದರೆ ಒಕ್ಕೂಟದ ನಿರ್ಧಾರದಿಂದ ಕೊಡಲಿ ಪೆಟ್ಟು ನೀಡಿದೆ ಎಂದು ಆರೋಪಿಸಿದರು.
ಓದಿ: ಕೊರೊನಾ ನಿಯಂತ್ರಣಕ್ಕೆ ಜೂನ್ ಅಂತ್ಯದವರೆಗೆ ಕಠಿಣ ನಿರ್ಬಂಧ ಅನಿವಾರ್ಯ: ತಾಂತ್ರಿಕ ಸಲಹಾ ಸಮಿತಿ ಸಲಹೆ ಏನಿರಬಹುದು??