ETV Bharat / state

ಚನ್ನಪಟ್ಟಣದ ನಾಟಿ ವೈದ್ಯೆ ಲಕ್ಷ್ಮಮ್ಮಗೆ ಏಷ್ಯಾ ವೇದಿಕ್ ಕಲ್ಚರ್ ಅಕಾಡೆಮಿಯಿಂದ ಗೌರವ ಡಾಕ್ಟರೇಟ್ - ಏಷ್ಯಾ ವೇದಿಕ್ ಕಲ್ಚರ್ ಅಕಾಡೆಮಿ

ಸಮಾಜ ಸೇವೆ. ನಾಟಿ ವೈದ್ಯೆ ಕೆ.ಟಿ.ಲಕ್ಷ್ಮಮ್ಮ ಅವರಿಗೆ ಏಷ್ಯಾ ವೇದಿಕ್ ಕಲ್ಚರ್ ಅಕಾಡೆಮಿಯಿಂದ ಗೌರವ ಡಾಕ್ಟರೇಟ್ ಪ್ರದಾನ.

KT Lakshmamma get Honorary doctorate from Asia Vedic Culture Academy
ನಾಟಿ ವೈದ್ಯೆ ಲಕ್ಷ್ಮಮ್ಮ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
author img

By

Published : Jan 30, 2023, 7:16 PM IST

ನಾಟಿ ವೈದ್ಯೆ ಲಕ್ಷ್ಮಮ್ಮ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

ಚನ್ನಪಟ್ಟಣ(ರಾಮನಗರ): ಬೊಂಬೆನಗರಿ ಚನ್ನಪಟ್ಟಣ ತಾಲೂಕಿನ ಸಮಾಜ ಸೇವಕಿ, ಸಂತಾನ ಚಿಕಿತ್ಸೆಯ ನಾಟಿ ವೈದ್ಯೆ ಎಂದು ಹೆಸರಾಗಿರುವ ಹಾರೋಹಳ್ಳಿದೊಡ್ಡಿ ಕೆ.ಟಿ ಲಕ್ಷ್ಮಮ್ಮ ಅವರ ಸಮಗ್ರ ಸೇವೆಯನ್ನು ಗುರುತಿಸಿ ತಮಿಳುನಾಡಿನ ಕೊಯಮತ್ತೂರು ಏಷ್ಯಾ ವೇದಿಕ್ ಕಲ್ಚರ್ ಅಕಾಡೆಮಿ ವತಿಯಿಂದ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ.

ಸಮಾಜ ಸೇವೆಗೆ ಸಂದ ಗೌರವ: ಇವರ ಸಮಾಜ ಸೇವೆ ಗುರುತಿಸಿ ಏಷ್ಯಾ ವೇದಿಕ್ ಸಂಸ್ಕೃತಿ ಸಂಶೋಧನಾ ವಿಶ್ವವಿದ್ಯಾಲಯ "ಗೌರವ ಡಾಕ್ಟರೇಟ್" ಪ್ರದಾನ ಮಾಡಿ ಗೌರವಿಸಿದೆ. ತಮಿಳುನಾಡಿನ ಹೊಸೂರಿನ ಖಾಸಗಿ ಕ್ಲಾರೆಸ್ಟ್ ಫೈವ್ ಸ್ಟಾರ್ ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ತಮಿಳುನಾಡಿನ ಮುಂಚೂಣಿ ಜನಪ್ರತಿನಿಧಿಗಳು, ಗಣ್ಯಾತಿಗಣ್ಯರು, ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು, ವಿಶ್ವವಿದ್ಯಾಲಯದ ಸಂಸ್ಥಾಪಕರು ಹಾಗೂ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಕೆ.ಟಿ ಲಕ್ಷ್ಮಮ್ಮ ಅವರಿಗೆ ಗೌರವ ಡಾಕ್ಟರೇಟ್ ನೀಡಿ, ಗೌರವಿಸಲಾಗಿದೆ.

KT Lakshmamma get Honorary doctorate from Asia Vedic Culture Academy
ಏಷ್ಯಾ ವೇದಿಕ್ ಕಲ್ಚರ್ ಅಕಾಡೆಮಿಯಿಂದ ನಾಟಿ ವೈದ್ಯೆ ಲಕ್ಷ್ಮಮ್ಮ ಅವರಿಗೆ ಗೌರವ ಡಾಕ್ಟರೇಟ್

ಆಭಾರಿಯಾಗಿದ್ದೇನೆ..: ಈ ಬಗ್ಗೆ ಸಂತಸ ಹಂಚಿಕೊಂಡಿರುವ ಕೆ.ಟಿ ಲಕ್ಷ್ಮಮ್ಮ ಅವರು, "ಹೊಸ ವರ್ಷದ ಆರಂಭದಲ್ಲೇ ಗೌರವ ಡಾಕ್ಟರೇಟ್ ಅರಸಿ ಬರುವ ‌ಮೂಲಕ ನನ್ನ ಜವಾಬ್ದಾರಿ ಹಾಗೂ ಕರ್ತವ್ಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಹೆಚ್ಚಿಸಿದೆ‌. ನನ್ನ ಅಳಿಲು ಸೇವೆಯನ್ನು ಗುರುತಿಸಿ ತಮಿಳುನಾಡು ಕೊಯಮತ್ತೂರಿನ ಏಷ್ಯಾ ವೇದಿಕ್ ಕಲ್ಚರ್ ಅಕಾಡೆಮಿಯ ಏಷ್ಯಾ ವೇದಿಕ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿಯವರು ನೀಡಿದ ಗೌರವ ಡಾಕ್ಟರೇಟ್ ಪುರಸ್ಕಾರವನ್ನು ವಿನಮ್ರತೆಯಿಂದ ಸ್ವೀಕರಿಸಿ, ಅವರಿಗೆ ಆಭಾರಿಯಾಗಿದ್ದೇನೆ" ಎಂದು ತಿಳಿಸಿದರು.

''ನಮ್ಮ ಹೋರಾಟ ಹಾಗೂ ಸಾಧನೆಯ ಹಾದಿಯಲ್ಲಿ ಪ್ರಶಸ್ತಿ, ಪುರಸ್ಕಾರಗಳು ಬರುತ್ತವೆ, ಹೋಗುತ್ತವೆ. ಆದರೆ ನಾವು ಮಾಡುವ ಕೆಲಸಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ. ಈ ನಿಟ್ಟಿನಲ್ಲಿ ನನ್ನ ಸಮಾಜ ಸೇವೆ, ನಾಟಿ ವೈದ್ಯ ವೃತ್ತಿ, ಗ್ರಾಮೀಣ ಭಾಗದಲ್ಲಿ ಆರೋಗ್ಯ ಶಿಬಿರ, ನೇತ್ರ ತಪಾಸಣಾ ಶಿಬಿರ, ಹೋರಾಟ, ಸಂಘಟನೆ, ಸಹಕಾರ ಕೆಲಸ ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ನನ್ನ ಸಕ್ರಿಯ ಸಹಭಾಗಿತ್ವ, ಜವಾಬ್ದಾರಿ ಹಾಗೂ ಕರ್ತವ್ಯವನ್ನು ಎಚ್ಚರಿಸಿ ದ್ವಿಗುಣಗೊಳಿಸಿದೆ'' ಎಂದರು.

'2021'ರಲ್ಲಿ ಭಗವಾನ್ ಬುದ್ಧ ನ್ಯಾಷನಲ್‌ ಅವಾರ್ಡ್: ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಕೊಡಮಾಡುವ '2021ರ ಭಗವಾನ್ ಬುದ್ಧ ನ್ಯಾಷನಲ್ ಅವಾರ್ಡ್'​ಗೆ ಭಾಜನರಾಗುವ ಮೂಲಕ ಸಾಮಾಜಿಕ ಕಾರ್ಯಕರ್ತೆ, ಬಂಜೆತನ ನಿವಾರಣೆಯ ನಾಟಿ ವೈದ್ಯೆ ಕೆ.ಟಿ. ಲಕ್ಷ್ಮಮ್ಮ ಅವರು ಚನ್ನಪಟ್ಟಣ ತಾಲೂಕಿಗೆ ಹೆಮ್ಮೆ ತಂದಿದ್ದರು. ಸಂತಾನ ಇಲ್ಲದ ನೂರಾರು ದಂಪತಿಗೆ ಈ ಮಹಿಳೆ ಸಂತಾನ ಭಾಗ್ಯ ಕರುಣಿಸಿದ್ದಾರೆ. ಮಕ್ಕಳಿಲ್ಲದ ಎಷ್ಟೋ ಕುಟುಂಬದವರ ಬಾಳಿಗೆ ಬೆಳಕಾಗಿದ್ದಾರೆ. ತಮ್ಮದೇ ಆದ ಟ್ರಸ್ಟ್ ಮಾಡಿಕೊಂಡು ಎಲೆಮರೆಕಾಯಿಯಂತೆ ನೂರಾರು ಸಾಮಾಜಿಕ ಸೇವೆ ಮಾಡಿದ್ದಾರೆ. ಇವರ ಸಾಧನೆ ಗುರುತಿಸಿ ದೆಹಲಿಯಲ್ಲಿ ಭಾರತೀಯ ದಲಿತ ಸಾಹಿತ್ಯ ಅಕಾಡಮಿ ವತಿಯಿಂದ '2021ರ ಭಗವಾನ್ ಬುದ್ಧ ನ್ಯಾಷನಲ್‌ ಅವಾರ್ಡ್' ನೀಡಲಾಗಿತ್ತು.

ಬಂಜೆಯರ ಬಾಳಲ್ಲಿ ಬೆಳಕಾದ ನಾಟಿ ವೈದ್ಯೆ : ಕೆ.ಟಿ. ಲಕ್ಷ್ಮಮ್ಮ ಅವರು ಓದಿದ್ದು ಕೇವಲ 10ನೇ ತರಗತಿ. ವೈದ್ಯರನ್ನೇ ಬೆರಗುಗೊಳಿಸುವ ಶಕ್ತಿಯನ್ನು ನಾಟಿ ಔಷಧದ ಮೂಲಕ ಪಡೆದುಕೊಂಡಿದ್ದಾರೆ. ಮದುವೆಯಾಗಿ 10 ರಿಂದ 15 ವರ್ಷಗಳಿಂದ ಮಕ್ಕಳಾಗದೇ ಇರುವವರಿಗೂ ಇವರು ಚಿಕಿತ್ಸೆ ನೀಡಿದ ಬಳಿಕ ಮಕ್ಕಳಾದ ಇತಿಹಾಸವಿದೆ. ಇದುವರೆಗೂ ಬೆಂಗಳೂರು, ತುಮಕೂರು, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳು ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಅನೇಕರು ಇವರಿಂದ ಔಷಧಿ ಪಡೆದು ಮಕ್ಕಳ ಭಾಗ್ಯ ಪಡೆದಿದ್ದಾರೆ.

ಇದನ್ನೂ ಓದಿ: ಬಂಜೆಯರ ಬಾಳಲ್ಲಿ ಬೆಳಕಾದ ನಾಟಿ ವೈದ್ಯೆಗೆ '2021ರ ಭಗವಾನ್ ಬುದ್ಧ ನ್ಯಾಷನಲ್‌ ಅವಾರ್ಡ್'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.