ETV Bharat / state

ರೇಷ್ಮೆ ನಗರಿಯಲ್ಲಿ ಕೆಜಿಎಫ್ 2 ರಿಲೀಸ್​..​ ಪಟಾಕಿ ಸಿಡಿಸಿ ಅಭಿಮಾನಿಗಳ ಸಂಭ್ರಮ - KGF kannada movie release

ಬಹುನಿರೀಕ್ಷಿತ ಸಿನೆಮಾ ಕೆಜಿಎಫ್ ಚಾಪ್ಟರ್ 2 ಇಂದು ಬಿಡುಗಡೆಯಾಗಿದೆ. ಯಶ್ ಅಭಿಮಾನಿಗಳು ಚಿತ್ರವನ್ನು ನೋಡಲು ಮುಗಿಬಿದ್ದಿದ್ದಾರೆ. ಕೆಲ ಅಭಿಮಾನಿಗಳು ಮುಂಜಾನೆಯಿಂದ ಸರತಿ ಸಾಲಿನಲ್ಲಿ ನಿಂತರೂ ಸಿನೆಮಾ ಟಿಕೆಟ್ ಸಿಗದೆ ನಿರಾಶೆಗೊಂಡಿದ್ದಾರೆ.

kgf-kannada-movie-release
ಬಹುನಿರೀಕ್ಷಿತ ಸಿನೆಮಾ ಕೆಜಿಎಫ್ ಚಾಪ್ಟರ್ 2 ಇಂದು ಬಿಡುಗಡೆ
author img

By

Published : Apr 14, 2022, 8:01 AM IST

ರಾಮನಗರ : ಕೆಜಿಎಫ್ ಚಾಪ್ಟರ್ 2 ಕನ್ನಡ ಚಿತ್ರರಂಗವಲ್ಲದೇ ವಿಶ್ವದಾದ್ಯಂತ ಕ್ರೇಜ್ ಹುಟ್ಟು ಹಾಕಿರುವ ಸಿನೆಮಾ. ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಡೈರೆಕ್ಟರ್​ ಪ್ರಶಾಂತ್ ನೀಲ್ ನಿರ್ದೇಶನದ ಹಾಗೂ ವಿಜಯ್ ಕಿರಂಗದೂರ್ ನಿರ್ಮಾಣದ ಕೆಜಿಎಫ್ ಚಾಪ್ಟರ್ 2 ಸಿನೆಮಾ ಇಂದು ಬಿಡುಗಡೆಯಾಗಿದೆ. ಕೆಜಿಎಫ್ ಚಾಪ್ಟರ್ 2 ಸಿನೆಮಾ ಬಿಡುಗಡೆಗೆ ಮುನ್ನವೇ ಹಲವು ದಾಖಲೆಗಳನ್ನು ಮಾಡಿದೆ.

ಇಡೀ ಭಾರತೀಯ ಚಿತ್ರರಂಗದಲ್ಲಿ ಬರೋಬ್ಬರಿ 12 ಸಾವಿರ ಸ್ಕ್ರೀನ್​ಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಮೊಟ್ಟ ಮೊದಲ ಸಿನೆಮಾ ಕೆಜಿಎಫ್ ಚಾಪ್ಟರ್ 2. ವಿಶ್ವದಾದ್ಯಂತ ಒಟ್ಟು 12 ಸಾವಿರ ಪರದೆಗಳಲ್ಲಿ ಕೆಜಿಎಫ್ ಚಾಪ್ಟರ್ 2 ಪ್ರದರ್ಶನಗೊಳ್ಳಲಿದೆ ಎಂದು ಹೊಂಬಾಳೆ ಫಿಲ್ಮ್ಸ್ ಹೇಳಿದೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲೆಯಾಳಂ ಹೀಗೆ ಹಲವು ಭಾಷೆಗಳಲ್ಲಿ ಕೆಜಿಎಫ್ ಚಾಪ್ಟರ್ 2 ಪ್ರದರ್ಶನಗೊಳ್ಳುತ್ತಿದೆ.

ಈಗಾಗಲೇ ಯಶ್ ಅಭಿಮಾನಿಗಳು ಚಿತ್ರವನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ. ರಾಮನಗರದ ಶಾನ್ ಚಿತ್ರಮಂದಿರದಲ್ಲಿಯೂ ಕೆಜಿಎಫ್ ಚಾಪ್ಟರ್ 2 ಸಿನೆಮಾ ಬಿಡುಗಡೆಯಾಗಿದೆ. ಬೆಳಗ್ಗೆ 7 ಗಂಟೆಗೆ ಸಿನೆಮಾದ ಮೊದಲ ಶೋ ಪ್ರದರ್ಶನ ಕಂಡಿದ್ದು, ಯಶ್ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಈ ಮಧ್ಯೆ ಜನಜಂಗುಳಿ ಹೆಚ್ಚಾದ ಹಿನ್ನೆಲೆಯಲ್ಲಿ ಮುಂಜಾನೆಯಿಂದ ಸರತಿಯಲ್ಲಿ ನಿಂತರೂ ಟಿಕೆಟ್ ಸಿಗದೆ ಕೆಲ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ.

ಓದಿ : ಕೆಜಿಎಫ್​ ಸಿನಿಮಾಗೆ ಡಾ.ರಾಜ್​ ಕುಟುಂಬದಿಂದ ಆಲ್​ ದಿ ಬೆಸ್ಟ್: ವಿಶ್ವಾದ್ಯಂತ ಯಶಸ್ಸಿಗೆ ಹಾರೈಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.