ETV Bharat / state

ನಾನು ಕನಕಪುರದ ಮೊಮ್ಮಗ, ಹೆದರೋ ಮಾತೇ ಇಲ್ಲ: ಡಿಕೆಶಿಗೆ ಕಾಳಿ ಸ್ವಾಮೀಜಿ ಟಾಂಗ್

ನಾನು ಕನಕಪುರದ ಮೊಮ್ಮಗ, ಇಲ್ಲಿ ಯಾರಿಗೂ ಹೆದರುವ ಮಾತಿಲ್ಲ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ಅವರಿಗೆ ಕಾಳಿ ಮಠದ ಋಷಿಕುಮಾರ ಸ್ವಾಮೀಜಿ ಟಾಂಗ್​ ಕೊಟ್ಟಿದ್ದಾರೆ.

author img

By

Published : Jan 10, 2020, 8:37 PM IST

ಸ್ವಾಮೀಜಿ ಆವಾಜ್​
ಸ್ವಾಮೀಜಿ ಆವಾಜ್​

ರಾಮನಗರ: ನಾನು ಕನಕಪುರದ ಮೊಮ್ಮಗ, ಇಲ್ಲಿ ಯಾರಿಗೂ ಹೆದರುವ ಮಾತಿಲ್ಲ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ಅವರಿಗೆ ಕಾಳಿ ಮಠದ ಋಷಿಕುಮಾರ ಸ್ವಾಮೀಜಿ ಟಾಂಗ್​ ಕೊಟ್ಟಿದ್ದಾರೆ.

ಕನಕಪುರದ ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣವಾಗುತ್ತಿರುವುದನ್ನು ನಿಲ್ಲಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೀವು ಕೆಂಪೇಗೌಡರ ಮಗ ಎಂದು ಹೇಳಿಕೊಳ್ಳುತ್ತೀರಿ ಅಲ್ವಾ, ನಾನು ಕಾಳೇಗೌಡರ ಮಗ, ಹೆದರಿಸಬೇಡಿ, ಇಲ್ಲಿ ಹೆದರುವವರು ಯಾರೂ ಇಲ್ಲ. ಕರ್ನಾಟಕ ನಿಮ್ಮದಲ್ಲ ಎಂದು ಡಿಕೆಶಿ ವಿರುದ್ಧ ಹರಿಹಾಯ್ದರು.

ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣವಾಗುತ್ತಿರುವುದರ ಕುರಿತು ಮಾತನಾಡಿದ ಸ್ವಾಮೀಜಿ

ಕರ್ನಾಟಕ ನಮ್ಮದು, ಬೆಟ್ಟಗಳನ್ನ ಕರಗಿಸಿದವರು ಅದೇ ಬೆಟ್ಟದ ಮೇಲೆ ಇನ್ನೊಂದನ್ನು ಇಡಲು ಹೋಗಬೇಡಿ. ನಾನು ಕನಕಪುರದ ಮೊಮ್ಮಗನೇ ಹೆದರಿಕೊಳ್ಳೋಕೆ‌ ನಾನು ಮೊದಲಿನ‌ ಕಾಳಿ ಸ್ವಾಮೀಜಿ ಅಲ್ಲ ಎಂದು ಟಾಂಗ್ ಕೊಟ್ಟರು.

ಈ ಹಿಂದೆ ಮಾತನಾಡಿದ್ದ ಡಿಕೆಶಿ, ಕನಕಪುರಕ್ಕೂ ಕಾಳಿ ಸ್ವಾಮೀಜಿಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದರು ಎಂದು ಆರೋಪಿಸಿದ ಕಾಳಿ ಸ್ವಾಮೀಜಿ, ನಾನು ಮೊದಲಿನಂತಿಲ್ಲ ನನ್ನ ಜೊತೆ ಸೇನೆಗಳೆಲ್ಲಾ ಇವೆ ಎಂದು ಗರಂ ಆಗಿ ಪ್ರತಿಕ್ರಿಯಿಸಿದರು.

ಕಪಾಲ ಬೆಟ್ಟದಲ್ಲಿ ನಡೆಯುತ್ತಿರುವ ಕಾಮಗಾರಿ ನಿಲ್ಲಿಸಿ, ಪರಿಕರಗಳನ್ನು ಅಲ್ಲಿಂದ ಶಿಫ್ಟ್​ ಮಾಡದಿದ್ದರೆ ಇದೇ 20ರಂದು ಕೋತಿ ಆಂಜನೇಯ ಸ್ವಾಮಿ ದೇವಾಲಯದಿಂದ ಮುನೇಶ್ವರ ಬೆಟ್ಟದವರೆಗೆ ಪಾದಯಾತ್ರೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಉತ್ತರ ಕರ್ನಾಟಕದ ಹತ್ತಾರು ಸ್ವಾಮೀಜಿಗಳು ಹಿಂದೂಪರ‌ ಸಂಘಟನೆಗಳು ಪಾಲ್ಗೊಳ್ಳಲಿವೆ ಎಂದ ಅವರು ಆಕಸ್ಮಾತ್ ಪಾದಯಾತ್ರೆ ವೇಳೆ ಏನಾದರೂ ಅವಘಡ ಸಂಭವಿಸಿದರೆ ಇದಕ್ಕೆ ಸರ್ಕಾರ, ಜಿಲ್ಲಾಡಳಿತವೇ ನೇರ ಹೊಣೆ ಎಂದು ಎಚ್ಚರಿಸಿದರು.

Intro:Body:ರಾಮನಗರ : ಕನಕಪುರಕ್ಕೂ ಕಾಳಿಗೂ ಏನ್ ಸಂಬಂಧ ಅಂತಾರಂತೆ, ನಾನು ಕನಕಪುರದ ಮೊಮ್ಮೊಗನೇ ಇದು ನೆನಪಿರಲಿ
ನಾನು ಕೆಂಪೇಗೌಡರ ಮಗ ಅಂತಾ ನೀವು ಹೇಳ್ತಿರಲ್ಲಾ, ನಾನು ಕಾಳೇಗೌಡರ ಮಗಾನೇ ಹೆದರಿಸಬೇಡಿ, ಹೆದರಿಕೊಳ್ಳೋಕೆ ಇಲ್ಲಿ ಯಾರು ಇಲ್ಲ, ಕನಕಪುರ, ರಾಮನಗರ, ಕರ್ನಾಟಕ ನಿಮ್ಮದಲ್ಲ
ಹೆದರೋಕೆ ನಾನು ಮೊದಲಿನಂಗಿಲ್ಲ ಎಂದು ಕಾಳಿ‌ಮಠದ ಋಷಿಕುಮಾರಸ್ವಾಮಿಜಿ ಡಿ.ಕೆ.ಶಿವಕುಮಾರ್ ವಿರುದ್ದ ವಾಗ್ದಾಳಿ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಕನಕಪುರದಲ್ಲಿ ಏಸುಪ್ರತಿಮೆ ನಿರ್ಮಾಣ ನಿಲ್ಲಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಆಗಮಿಸಿದ್ದ ವೇಳೆ ಮಾತನಾಡಿದ ಅವರು ಕರ್ನಾಟಕ ನಮ್ಮದು, ಬೆಟ್ಟಗಳನ್ನ ಕರಗಿಸಿದವರು ಅದೇ ಬೆಟ್ಟದ ಮೇಲೆ ಇನ್ನೊಂದನ್ನ ಇಡಲು ಹೋಗಬೇಡಿ ನಾನು ಕನಕಪುರದ ಮೊಮ್ಮಗನೇ ಹೆದರಿಕೊಳ್ಳೋಕೆ‌ನಾನು ಮೊದಲಿನ‌ ಕಾಳಿ ಸ್ವಾಮೀಜಿ ಅಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಗೆ ಟಾಂಗ್ ನೀಡಿದರು.
ನಾನು ಹಿಂದೂ ಸಂಪ್ರದಾಯಸ್ತ ನಾನು ನನ್ನ ಸಂಸ್ಕೃತಿ ಹದಗೆಡದಂತೆ ಕಪಾಲ ಬೆಟ್ಟದಲ್ಲಿ ಏಸು ನಿರ್ಮಾಣ ಕಾಮಗಾರಿ‌ನಿಲ್ಲಿಸಿ ಎಂದು ಸ್ಥಳ ಬೇಟಿ ಮಾಡಿ ಆಗ್ರಹಿಸಿದ್ದೇ ಆದ್ರೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕಾಳಿಮಠದ ಋಷಿಕುಮಾರಸ್ವಾಮೀಜಿ ಗೂ ಕನಕಪುರಕ್ಕೂ ಏನು ಸಂಬಂಧ ಎಂದಿದ್ದರು ಎಂದು ಆಕ್ರೋಶ‌ ವ್ಯಕ್ತಪಡಿಸಿದ ಸ್ವಾಮೀಜಿ ಡಿ.ಕೆ.ಶಿವಕುಮಾರ್ ಗೆ ನಾನು ಮೊದಲಿನಂತಿಲ್ಲ ನನ್ನ ಜೊತೆ ಸೇನೆಗಳೆಲ್ಲಾ ಇವೆ ಎಂಬ ಎಚ್ಚರಿಕೆಯ ಸಂದೇಶ ಕೂಡ ರವಾನಿಸಿದರು.
ಇದೇ ವೇಳೆ ಜನವರಿ 19 ರ ಒಳಗೆ ಕಪಾಲ ಬೆಟ್ಟದಲ್ಲಿ ಅಕ್ರಮವಾಗಿ ಎರಡು ವರ್ಷಗಳಿಂದ ನಡೆಯುತ್ತಿದ್ದ ಕೆಲಸಗಳನ್ನು ಸ್ಥಗಿತ ಗೊಳಿಸಿದ್ದು ಅಲ್ಲಿರುವ ಕಲ್ಲುಗಳು ಮಿಷಿನ್ ಗಳು, ಪರಿಕರಗಳನ್ನು ಅಲ್ಲಿಂದ ಸ್ಥಳಾಂತರಿಸದಿದ್ದರೆ 20 ರಂದು ಕೋತಿ ಆಂಜನೇಯ ಸ್ವಾಮಿ ದೇವಾಲಯದಿಂದ ಮುನೇಶ್ವರ ಬೆಟ್ಟದ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುತ್ತದೆ ಅಲ್ಲದೆ ಪ್ರತಿಭಟನೆಯಲ್ಲಿ ಉತ್ತರ ಕರ್ನಾಟಕದ ಹತ್ತಾರು ಸ್ವಾಮೀಜಿಗಳು ಹಿಂದೂಪರ‌ ಸಂಘಟನೆಗಳು ಪಾಲ್ಗೊಳ್ಳಲಿವೆ ಎಂದ ಅವರು ಅಕಸ್ಮಾತ್ ಪಾದಯಾತ್ರೆ ವೇಳೆ ಏನಾದರೂ ಅವಘಡ ಸಂಭವಿಸಿದರೆ ಇದಕ್ಕೆ ಸರ್ಕಾರ ಜಿಲ್ಲಾಡಳಿತವೇ ನೇರ ಹೊಣೆ ಎಂದು ಎಚ್ಚರಿಸಿದರು.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.