ರಾಮನಗರ: ಕನಕಪುರದ ಕಪಾಲ ಬೆಟ್ಟದಲ್ಲಿ ಏಸುವಿನ ಪ್ರತಿಮೆ ನಿರ್ಮಾಣ ವಿಚಾರ ರಾಜಕೀಯ ತಿರುವು ಪಡೆಯುತ್ತಿದ್ದು, ಇದೀಗ ಕಪಾಲ ಬೆಟ್ಟದಲ್ಲಿ ಪ್ರತಿಮೆ ಕಾಮಗಾರಿ ಸ್ಥಗಿತಗೊಂಡಿದೆ.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹಾರೋಬೆಲೆಯ ಕಪಾಲ ಬೆಟ್ಟದಲ್ಲಿ ಡಿ.ಕೆ. ಶಿವಕುಮಾರ್ ಸಹಕಾರದಿಂದ ದೇಶದಲ್ಲೇ ಅತೀ ದೊಡ್ಡ ಏಸು ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಇದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ವಿವಾದದ ಕಿಡಿ ಹೊತ್ತು ಸರ್ಕಾರ ಭೂಮಿ ವಾಪಸ್ ಪಡೆದುಕೊಳ್ಳಲು ಮುಂದಾಗಿದೆ.
28 ನೇ ತಾರೀಖಿನಂದು ಬೆಟ್ಟಕ್ಕೆ ಅಧಿಕಾರಿಗಳು ಬೇಟಿ ನೀಡಿದ್ದರು. ಅಂದಿನಿಂದ ಕೆಲಸ ಸ್ಥಗಿತಗೊಳಿಸಲಾಗಿದ್ದು, ಈ ಸ್ಥಳ ಸಾತನೂರು ಪೊಲೀಸರ ಭದ್ರತೆಯಲ್ಲಿದೆ.
ಕಾಳಿ ಸ್ವಾಮಿ ಭೇಟಿ:
ಈ ಎಲ್ಲಾ ವಿವಾದಗಳ ನಡುವೆ ಕಪಾಲ ಬೆಟ್ಟಕ್ಕೆ ಕಾಳಿ ಮಠದ ರಿಶಿಕುಮಾರ ಸ್ವಾಮೀಜಿ ಭೇಟಿ ನೀಡಿದ್ದಾರೆ. ಶಿಷ್ಯರ ಜತೆ ಕಪಾಲ ಬೆಟ್ಟಕ್ಕೆ ಭೇಟಿ ನೀಡಿದ ಸ್ವಾಮೀಜಿ, ಯೇಸು ಪ್ರತಿಮೆ ಮಾದರಿ ವೀಕ್ಷಿಸಿದ್ದಾರೆ. ಟ್ರಸ್ಟ್ಗೆ ಸಂಬಂಧಿಸಿದ ಜಾಗ ಇದಾಗಿದ್ದು, ಇಲ್ಲಿ ನಿಂತು ಯಾವುದೇ ರಿಯಾಕ್ಷನ್ ನೀಡದಂತೆ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ. ಅಕಸ್ಮಾತ್ ಹೇಳಿಕೆ ಕೊಟ್ಟರೆ ದೂರು ದಾಖಲಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ ಎಂದು ಯಾವುದೇ ಪ್ರತಿಕ್ರಿಯೆ ನೀಡಲು ಮುಂದಾಗಲಿಲ್ಲ.