ETV Bharat / state

ರಾಮನಗರದಲ್ಲಿ ಜೇನು ಮೇಳ: ತುಪ್ಪ ಖರೀದಿಸಿ ಖುಷಿ ಪಟ್ಟ ಜನ - ರಾಮನಗರದಲ್ಲಿ ಜೇನು ಮೇಳ ಆಯೋಜನೆ ಸುದ್ದಿ

ರಾಮನಗರದಲ್ಲಿ ಜಿಲ್ಲಾಡಳಿತದ ವತಿಯಿಂದ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್ ಆವರಣದಲ್ಲಿ ಪ್ರಥಮ ಬಾರಿಗೆ ಜೇನು ಮೇಳವನ್ನ ಆಯೋಜನೆ ಮಾಡಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ರೈತರು ಆಗಮಿಸಿ ತಾವು ಸಾಕಿದ್ದ ಜೇನು ಪ್ರದರ್ಶನ ಮಾಡಿದರು.

ರಾಮನಗರದಲ್ಲಿ ಜೇನು ಮೇಳ ಆಯೋಜನೆ
author img

By

Published : Nov 13, 2019, 7:29 PM IST

ರಾಮನಗರ: ಜಿಲ್ಲಾಡಳಿತದ ವತಿಯಿಂದ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್ ಆವರಣದಲ್ಲಿ ಪ್ರಥಮ ಬಾರಿಗೆ ಜೇನು ಮೇಳವನ್ನ ಆಯೋಜನೆ ಮಾಡಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ರೈತರು ಆಗಮಿಸಿ ತಾವು ಸಾಕಿದ್ದ ಜೇನು ಪ್ರದರ್ಶನ ಮಾಡಿದರು.

ರಾಮನಗರದಲ್ಲಿ ಜೇನು ಮೇಳ ಆಯೋಜನೆ

ತೋಟಗಾರಿಕೆ ಇಲಾಖೆಯವರು ರೈತರಿಗಾಗಿ ಸ್ಟಾಲ್‌ಗಳನ್ನ ನಿರ್ಮಿಸಿದ್ದರು. ರಾಜ್ಯ ಸರ್ಕಾರ ಹಸು ಸಾಕಾಣೆ, ಕುರಿ ಸಾಕಾಣೆ ಜೊತೆಗೆ ಜೇನು ಸಾಕಾಣೆಗೂ ಅನುದಾನ ಕೊಡುತ್ತಿದೆ. ಮುಂದಿನ ದಿನಗಳಲ್ಲಿ ಜೇನು ಸಾಕಾಣೆಗೆ ರೈತರು ಆಸಕ್ತಿ ತೋರಿಸಬೇಕು ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿ ಗುಣವಂತ್ ಹೇಳಿದರು.

ಜೇನು ಮೇಳದಲ್ಲಿ ಬಳ್ಳಾರಿ, ಮೈಸೂರು ಸೇರಿದಂತೆ ಹಲವು ಭಾಗಗಳಿಂದ ಜೇನು ಹುಳುಗಳನ್ನ ತಂದು ರೈತರು ಪ್ರದರ್ಶನಕ್ಕೆ ಇಟ್ಟಿದ್ದರು. ಮೇಳದಲ್ಲಿ ಜೇನು ತುಪ್ಪ ಮಾರಾಟ ಸಹ ಮಾಡಲಾಯಿತು.

Intro:Body:ರಾಮನಗರ : ಜೇನುತುಪ್ಪ ಅಂದ್ರೆ ಎಲ್ಲರಿಗೂ ಪಂಚಪ್ರಾಣ. ಅದನ್ನ ನೈಸರ್ಗಿಕವಾಗಿ ಉತ್ಪಾದಿಸಲಾಗುತ್ತಿರುವ ವಿವಿಧ ರೀತಿಯ ಜೇನುತುಪ್ಪದ ಮೇಳ ಆಯೋಜನೆ ಮಾಡಿ ಜನಕ್ಕೆ ತಲುಪಿಸುವಂತೆ ಇಲಾಖೆ ಪ್ರಯತ್ನಿಸಲಾಗುತ್ತಿದೆ. ಅದಕ್ಕಾಗಿ ಜೇನು ಮೇಳ ಕೂಡ ಏರ್ಪಡಿಸಲಾಗಿದ್ದು ಜನತೆ ಒಂದು ಕೈ ನೋಡಿಯೇ ಬಿಡೋಣ ಎಂದು ಜೇನಿನ ರುಚಿಯನ್ನ ಸವಿದು ಎಂಜಾಯ್ ಮಾಡ್ತಿದ್ದಾರೆ. ಈ ಮೇಳದಲ್ಲಿ ರಾಜ್ಯದ ಹಲವು ಭಾಗಗಳಿಂದ ಜೇನುಸಾಕಾಣೆದಾರರು ಆಗಮಿಸಿ ಜೇನುಮೇಳದಲ್ಲಿ ಭಾಗಿಯಾಗಿದ್ದರು.
ರಾಮನಗರ ಜಿಲ್ಲಾಡಳಿತದ ವತಿಯಿಂದ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಇಂದು ಜಿಲ್ಲಾ ಪಂಚಾಯತ್ ಆವರಣದಲ್ಲಿ ಇದೇ ಪ್ರಥಮ ಬಾರಿಗೆ ಜೇನುಮೇಳವನ್ನ ಆಯೋಜನೆ ಮಾಡಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ರೈತರು ಆಗಮಿಸಿ ತಾವು ಸಾಕಿದ್ದ ಜೇನನ್ನ ಪ್ರದರ್ಶನ ಮಾಡಿದರು. ಇನ್ನು ಜೇನುಸಾಕಿರುವ ರೈತರಿಗಾಗಿ ತೋಟಗಾರಿಕೆ ಇಲಾಖೆಯವರು ರೈತರಿಗಾಗಿ ಸ್ಟಾಲ್‌ಗಳನ್ನ ನಿರ್ಮಿಸಿಕೊಟ್ಟಿದ್ದರು. ಇನ್ನು ರಾಜ್ಯ ಸರ್ಕಾರ ಹಸುಸಾಕಾಣೆ, ಕುರಿ ಸಾಕಾಣೆ ಜೊತೆಗೆ ಜೇನುಸಾಕಾಣೆಗೂ ಕೂಡ ಸರ್ಕಾರ ಅನುದಾನ ಕೊಡುತ್ತಿದೆ. ಮುಂದಿನ ದಿನಗಳಲ್ಲಿ ಜೇನುಸಾಕಾಣೆಗೆ ರೈತರು ಮುಂದಾಗಬೇಕು ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿ ಗುಣವಂತ್ ಅಭಿಪ್ರಾಯಪಟ್ಟಿದ್ದಾರೆ.

ಜೇನುಮೇಳದಲ್ಲಿ ಬಳ್ಳಾರಿ, ಮೈಸೂರು, ಸೇರಿದಂತೆ ಹಲವು ಭಾಗಗಳಿಂದ ಜೇನುಹುಳುಗಳನ್ನ ಸಾಕಿದ್ದ ಕೆಲವರು ಆಗಮಿಸಿ ಸ್ಟಾಲ್‌ಗಳಲ್ಲಿ ತಾವೇ ಮನೆಯಲ್ಲಿ ತಯಾರಿಸಿದ ಜೇನುತುಪ್ಪವನ್ನ ಮಾರಾಟ ಸಹ ಮಾಡಿದರು. ಇನ್ನು ಜೇನುತುಪ್ಪದಿಂದ ಹಲವು ರೋಗಗಳಿಗೆ ಮುಕ್ತಿ ಸಿಗುತ್ತದೆ. ಮುಖ್ಯವಾಗಿ ದೇಹದ ಬೊಜ್ಜು ಕರಗಿಸುವುದಕ್ಕೆ ಜೇನುತುಪ್ಪ ಬಹಳ ಉಪಕಾರಿಯಾಗಿದೆ ಎಂದು ಜೇನು ಸಾಕಿರುವವರು ತಿಳಿಸಿದರು.

ಒಟ್ಟಾರೆ ರೇಷ್ಮೆನಗರಿ ರಾಮನಗರದಲ್ಲಿ ಇಂದು ಜೇನುಮೇಳ ಆಯೋಜಿಸಿ ವಿವಿಧ ಬಗೆಯ ಜೇನುತುಪ್ಪವನ್ನ ಜನರಿಗೆ ಪರಿಚಯಿಸಲಾಯಿತು. ಪ್ರಮುಖವಾಗಿ ಕಪ್ಪು ಜೇನು, ತುಡುವೆ ಜೇನು, ಕಾಡುಜೇನು, ಮಿಠಾಯ್ ಜೇನು ನೋಡುಗರ ಗಮನಸೆಳೆದವು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.