ETV Bharat / state

ಚನ್ನಪಟ್ಟಣ ನಗರಸಭೆ ಜೆಡಿಎಸ್​ ತೆಕ್ಕೆಗೆ: ಯೋಗೇಶ್ವರ್‌ಗೆ ನಿರಾಸೆ, ಹೆಚ್​ಡಿಕೆ ಮೇಲುಗೈ - jds wins in channapatna municipality election

ಕಾಂಗ್ರೆಸ್ ಪಕ್ಷ ಬಿಜೆಪಿಗೆ ಬೆಂಬಲ ಕೊಡದ ಹಿನ್ನೆಲೆಯಲ್ಲಿ ಯೋಗೇಶ್ವರ್ ಪ್ಲ್ಯಾನ್ ಫೇಲ್ ಆಗಿದೆ. ಜೆಡಿಎಸ್​ ಪಾಲಿಗೆ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನ‌ ಒಲಿದಿದೆ.

channapatna-municipality
ಚನ್ನಪಟ್ಟಣ ನಗರಸಭೆ
author img

By

Published : Nov 8, 2021, 8:46 PM IST

ರಾಮನಗರ: ಕೊನೆಗೂ ಚನ್ನಪಟ್ಟಣ ನಗರಸಭೆ ಜೆಡಿಎಸ್ ತೆಕ್ಕೆಗೆ ಬಂದಿದೆ. ಅಧ್ಯಕ್ಷರಾಗಿ 26ನೇ ವಾರ್ಡ್​ನ ಜೆಡಿಎಸ್​ ಸದಸ್ಯ ಪ್ರಶಾಂತ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನ 19 ನೇ ವಾರ್ಡ್​ನ ಹಸೀನಾ ಫರೀನ್ ಅವರಿಗೆ ಒಲಿದುಬಂತು.

ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಜೆಡಿಎಸ್ ಸರಳ ಬಹುಮತ ಪಡೆದಿತ್ತು. ಬಿಜೆಪಿ ಹಾಗೂ ಕಾಂಗ್ರೆಸ್​ನಿಂದ ಯಾರೂ ನಾಮಪತ್ರ ಸಲ್ಲಿಸದ ಕಾರಣ ಜೆಡಿಎಸ್ ಅವಿರೋಧವಾಗಿ ಆಯ್ಕೆಯಾಗಿದೆ. ಈ ಮೂಲಕ ಮಾಜಿ‌ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಜೆಡಿಎಸ್ ತನ್ನ ಪ್ರಾಬಲ್ಯ ಮೆರೆದಿದೆ.

ಈ ನಡುವೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ-ಕಾಂಗ್ರೆಸ್ ಚುನಾವಣಾ ಪೂರ್ವ ಒಳ ಮೈತ್ರಿಯಾಗಬಹುದು ಎನ್ನಲಾಗಿತ್ತು. ಕಾಂಗ್ರೆಸ್ ಜೊತೆಗೆ ಕೈಜೋಡಿಸಿ ಜೆಡಿಎಸ್​ಗೆ ಟಾಂಗ್ ಕೊಡಲು ಯೋಗೇಶ್ವರ್ ಪ್ಲ್ಯಾನ್ ಕೂಡ ಮಾಡಿದ್ದರು. ಆದರೆ, ಕೊನೆ ಹಂತದಲ್ಲಿ ಅವರ ಯೋಜನೆ ಕೈಗೂಡಲಿಲ್ಲ.

ಕಾಂಗ್ರೆಸ್- 7, ಬಿಜೆಪಿ- 7, ಜೆಡಿಎಸ್- 16 ಸ್ಥಾನಗಳಿದ್ದವು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ಕೊಡುವ ಪ್ಲ್ಯಾನ್‌ ಯೋಗೇಶ್ವರ್ ಅವರದ್ದಾಗಿತ್ತು. ಹೇಗಾದ್ರೂ ಮಾಡಿ ಅಧ್ಯಕ್ಷಗಾದಿ ಹಿಡಿಯುವ ಮೂಲಕ ಹೆಚ್​ಡಿಕೆಗೆ ಟಾಂಗ್ ಕೊಡಲು ಅವರು ತಂತ್ರ ಮಾಡಿದ್ದರು. ಆದರೆ, ಕಾಂಗ್ರೆಸ್ ಪಕ್ಷ ಬಿಜೆಪಿಗೆ ಬೆಂಬಲ ಕೊಡದ ಹಿನ್ನೆಲೆಯಲ್ಲಿ ಯೋಗೇಶ್ವರ್ ಪ್ಲ್ಯಾನ್ ಫೇಲ್ ಆಗಿದೆ. ಜೆಡಿಎಸ್​ನ ಪಾಲಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ‌ ಒಲಿದಿದೆ.

ಇದನ್ನೂ ಓದಿ: 'ಕಿತ್ತೂರು ಕರ್ನಾಟಕ'ವೆಂದು ಮರುನಾಮಕರಣ: ಬೆಳಗಾವಿಯಲ್ಲಿ ವಿಜಯೋತ್ಸವ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.