ETV Bharat / state

ಸ್ವ ಕ್ಷೇತ್ರದಲ್ಲೇ ಶಾಸಕಿ ಅನಿತಾ ಕುಮಾರಸ್ವಾಮಿಗೆ ಜೆಡಿಎಸ್​ ಕಾರ್ಯಕರ್ತರಿಂದ ಘೇರಾವ್​ - Jds activist opposing MLA anita kumaraswami

ಸ್ವ ಕ್ಷೇತ್ರದಲ್ಲೇ ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಗೆ ಸ್ಥಳೀಯರು ಹಾಗೂ ಜೆಡಿಎಸ್​ ಕಾರ್ಯಕರ್ತರೇ ಘೇರಾವ್​ ಹಾಕಿದ ಘಟನೆ ನಡೆದಿದೆ.

MLA anita kumaraswami
ಶಾಸಕಿ ಅನಿತಾ ಕುಮಾರಸ್ವಾಮಿ
author img

By

Published : Dec 11, 2019, 4:01 PM IST

ರಾಮನಗರ: ಮನವಿ‌ ಸಲ್ಲಿಸಲು ಬಂದಿದ್ದ ವೇಳೆ ಸರಿಯಾಗಿ ಸ್ಪಂದಿಸಲಿಲ್ಲವೆಂದು ಆರೋಪಿಸಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಗೆ ಜೆಡಿಎಸ್ ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ಕಾರಿಗೆ ಅಡ್ಡವಾಗಿ ನಿಂತು ಘೇರಾವ್ ಹಾಕಿದರು.

ಸ್ವ ಕ್ಷೇತ್ರದಲ್ಲೇ ಶಾಸಕಿ ಅನಿತಾ ಕುಮಾರಸ್ವಾಮಿಗೆ ಜೆಡಿಎಸ್​ ಕಾರ್ಯಕರ್ತರ ಘೇರಾವ್​

ರಾಮನಗರ ನಗರಸಭೆ ಕಾರ್ಯಾಲಯದಲ್ಲಿ ಇಂದು ಸಭೆ ನಡೆಸಲು ಶಾಸಕಿ ಅನಿತಾ ಕುಮಾರಸ್ವಾಮಿ ಆಗಮಿಸಿದ್ದರು. ಈ ವೇಳೆ ಅರ್ಕಾವತಿ ಬಡಾವಣೆಯಲ್ಲಿರುವ ಗ್ಯಾಸ್ ಗೋಡೌನ್​ ತೆರವಿಗೆ ಸ್ಥಳೀಯರು ಆಗ್ರಹಿಸಿದ್ದು ಹಲವು ಬಾರಿ ಹೋರಾಟ ಕೂಡ ನಡೆಸಿದ್ದರು. ಇಂದು ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಗೆ ಈ ಬಗ್ಗೆ ಅಲ್ಲಿನ ನಿವಾಸಿಗಳು ಮನವಿ ಸಲ್ಲಿಸಲು ಬಂದಿದ್ದರು. ಆಗ ಶಾಸಕರು ಸರಿಯಾಗಿ ಸ್ಪಂದಿಸಲಿಲ್ಲವೆಂದು ಸ್ಥಳೀಯರು ಶಾಸಕರ ಕಾರಿನ ಮುಂದೆ ಕುಳಿತು ಆಕ್ರೋಶ ವ್ಯಕ್ತಪಡಿಸಿದರು.

ಅನಿತಾ ಕುಮಾರಸ್ವಾಮಿ ಕಾಲಿಗೆ ಬಿದ್ದು, ಕಾರಿನ ಮುಂದೆ ಕುಳಿತರೂ ಯಾವುದಕ್ಕೂ ಸ್ಪಂದಿಸದ ಕಾರಣ ಅವರ ವಿರುದ್ಧ ಆಕ್ರೋಶ ಹೊರಹಾಕಿದ್ರು.

ಸ್ಥಳೀಯ ನಿವಾಸಿಗಳು ಮತ್ತು ಜೆಡಿಎಸ್ ಕಾರ್ಯಕರ್ತರು ಶಾಸಕರ ಭೇಟಿಗೆ ಬಂದಾಗ ಶಾಸಕಿಗೆ ಘೇರಾವ್​ ಹಾಕಿದ್ದಕ್ಕೆ ರಾಮನಗರ ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್ ಹಾಗೂ ರಾಜು ಎಂಬುವರ ಮಧ್ಯೆ ಮಾತಿನ‌ ಚಕಮಕಿ ನಡೆಯಿತು.

ಇದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರ ಮೇಲೂ ಜೆಡಿಎಸ್ ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ಕಿಡಿಕಾರಿದರು. ಇದೆಲ್ಲವನ್ನೂ ಗಮನಿಸಿದ ಶಾಸಕಿ ಅನಿತಾ ಕುಮಾರಸ್ವಾಮಿ ಗಲಾಟೆ ನೋಡಲಾಗದೇ ಕಾರ್ ಹತ್ತಿ ಹೊರಟು ಹೋದ್ರು.

Intro:Body:ರಾಮನಗರ: ನಗರದ ಅರ್ಕಾವತಿ ಬಡವಾಣೆಯಲ್ಲಿರುವ ಗ್ಯಾಸ್ ಗೋಡೌನ್ ಖಾಲಿ ಮಾಡಿಸಲು ಅಲ್ಲಿನ ನಿವಾಸಿಗಳು‌ ಮನವಿ‌ ಸಲ್ಲಿಸಲು ಬಂದಿದ್ದ ವೇಳೆ ಸ್ಪಂದಿಸದ ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಗೆ ಜೆಡಿಎಸ್ ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ಕಾರಿಗೆ ಅಡ್ಡಲಾಗಿ‌ ಕುಳಿತು ಘೇರಾವ್ ಹಾಕಿದ ಘಟನೆ ನಡೆದಿದೆ.
ರಾಮನಗರ ನಗರಸಭೆ ಕಾರ್ಯಾಲಯದಲ್ಲಿ ಇಂದು ಸಭೆ ನಡೆಸಲು ಶಾಸಕಿ ಅನಿತಾ ಕುಮಾರಸ್ವಾಮಿ ಆಗಮಿಸಿದರು ಈ ವೇಳೆ ಅರ್ಕಾವತಿ ಬಡಾವಣೆಯಲ್ಲಿರುವ ಗ್ಯಾಸ್ ಗೌಡೋನ್ ತೆರವಿಗೆ ಸ್ಥಳೀಯರು ಆಗ್ರಹಿಸಿದ್ದು ಹಲವು ಭಾರಿ ಹೋರಾಟ ಕೂಡ ನಡೆಸಿದ್ದರು. ಇಂದು ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಗೆ ಈ ಬಗ್ಗೆ ಅಲ್ಲಿನ ನಿವಾಸಿಗಳು ಮನವಿ ಸಲ್ಲಿಸಲು ಬಂದಿದ್ದರು ಈ ವೇಳೆ ಶಾಸಕಿ ಅನಿತಾ ಸರಿಯಾಗಿ ಸ್ಪಂದಿಸದ ಕಾರಣ ರಾಜು ಶಾಸಕರ ಕಾರಿನ ಮುಂದೆ ಕುಳಿತು ಆಕ್ರೋಶ ವ್ಯಕ್ತಪಡಿಸಿದರು.
ಅನಿತಾಕುಮಾರಸ್ವಾಮಿ ಕಾಲಿಗೆ ಬಿದ್ದು, ಕಾರಿನ ಮುಂದೆ ಕುಳಿತರೂ ಯಾವುದಕ್ಕೂ ಸ್ಪಂದಿಸದ ಕಾರಣ ಅನಿತಾ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯ ನಿವಾಸಿಗಳು ಮತ್ತು ಜೆಡಿಎಸ್ ಕಾರ್ಯಕರ್ತರು ಶಾಸಕರ ಬೇಟಿಗೆ ಬಂದಾಗ ಅಡ್ಡಲಾಗಿ ತಡೆ‌ಮಾಡಿದ ರಾಮನಗರ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ರಾಜಶೇಖರ್ ಹಾಗೂ ರಾಜು ನಡುವೆ ಮಾತಿನ‌ಚಕಮಕಿ ಜೋರಾಗಿ ಗಲಾಟೆ ನಡೆಸಿದರು.
ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು ಈ ವೇಳೆ ಮಧ್ಯ ಪ್ರವೇಶಿಸಿದ ಪೋಲೀಸರ ಮೇಲೂ ಜೆಡಿಎಸ್ ಕಾರ್ಯಕರ್ತರು , ಅಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಇದೆಲ್ಲವನ್ನೂ ಗಮನಿಸಿದ ಶಾಸಕಿ ಅನಿತಾ ಕುಮಾರಸ್ವಾಮಿ ಗಲಾಟೆ ನೋಡಲಾಗದೇ ಕಾರ್ ಹತ್ತಿ ಹೊರಟರು.Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.