ETV Bharat / state

ವಿಲ್ಲಾದಲ್ಲಿ ಹೈಡ್ರೋ ಗಾಂಜಾ ಬೆಳೆದಿದ್ದ ಇರಾನಿ ಪ್ರಜೆ ಅಂದರ್​​ - growing hydro marijuana

ಮನೆಯ ಟೆರೇಸ್ ಹಾಗೂ ರೂಮ್‌ನಲ್ಲಿ ಹೈಡ್ರೋ ಗಾಂಜಾ ಗಿಡಗಳು ಹಾಗೂ ಕೆಮಿಕಲ್​​​ಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆನ್‌ಲೈನ್‌ ಮುಖಾಂತರ ಸೀಡ್ಸ್ ತರಿಸಿ ಇಲ್ಲಿ ಹೈಡ್ರೋ ಗಾಂಜಾ ಬೆಳೆಯುತ್ತಿದ್ದ ಎನ್ನಲಾಗಿದೆ. ಹೈಡ್ರೋ ಗಾಂಜಾದ ಬೆಲೆ ಮೂರು ಕೋಟಿಗೂ ಅಧಿಕ ಎಂದು ಹೇಳಲಾಗುತ್ತಿದೆ..

ಬಿಡದಿಯ ವಿಲ್ಲಾದಲ್ಲಿ ಹೈಡ್ರೋ ಗಾಂಜಾ ಬೆಳೆದಿದ್ದಇರಾನಿ ಪ್ರಜೆ ಅಂದರ್​​

author img

By

Published : Sep 27, 2021, 7:06 PM IST

Updated : Sep 27, 2021, 7:59 PM IST

ರಾಮನಗರ : ಇಂದು ಸಿಸಿಬಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ತಾನು ವಾಸವಿದ್ದ ಮನೆಯಲ್ಲಿ ಹೈಡ್ರೋ ಗಾಂಜಾ ಬೆಳೆದ ವಿದೇಶಿ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಾವಿದ್ ರುಸ್ತಂ ಪುರಿ (36) ಎಂಬಾತ ಬಂಧಿತ ಆರೋಪಿ.

ಇರಾನಿ ಮೂಲದ ಗಾಂಜಾ ಬೆಳೆಗಾರ ಅಂದರ್ ಆಗಿದ್ದು, ಇಲ್ಲಿನ ಬಿಡದಿ ಈಗಲ್ಟನ್ ರೆಸಾರ್ಟ್​​ ಬಳಿಯ ವಿಲ್ಲಾದಲ್ಲಿ ಬೆಳೆದಿದ್ದ ಹೈಡ್ರೋ ಗಾಂಜಾವನ್ನ ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಬೆಂಗಳೂರಿನ ಡಿಜೆಹಳ್ಳಿಯಲ್ಲಿ ಆರೋಪಿಯನ್ನ ಬಂಧಿಸಿದ್ದಾರೆ.

ಸುಮಾರು 150ಕ್ಕೂ ಹೆಚ್ಚು ಹೈಡ್ರೋ ಗಾಂಜಾ ಗಿಡಗಳನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಒಂದೂವರೆ ವರ್ಷದಿಂದ ವಿಲ್ಲಾದಲ್ಲೇ ಗಾಂಜಾ ಬೆಳೆಯುತ್ತಿದ್ದ ಎನ್ನಲಾಗಿದೆ.

ಮನೆಯ ಟೆರೇಸ್ ಹಾಗೂ ರೂಮ್‌ನಲ್ಲಿ ಹೈಡ್ರೋ ಗಾಂಜಾ ಗಿಡಗಳು ಹಾಗೂ ಕೆಮಿಕಲ್​​​ಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆನ್‌ಲೈನ್‌ ಮುಖಾಂತರ ಸೀಡ್ಸ್ ತರಿಸಿ ಇಲ್ಲಿ ಹೈಡ್ರೋ ಗಾಂಜಾ ಬೆಳೆಯುತ್ತಿದ್ದ ಎನ್ನಲಾಗಿದೆ. ಹೈಡ್ರೋ ಗಾಂಜಾದ ಬೆಲೆ ಮೂರು ಕೋಟಿಗೂ ಅಧಿಕ ಎಂದು ಹೇಳಲಾಗುತ್ತಿದೆ.

Last Updated : Sep 27, 2021, 7:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.