ETV Bharat / state

ರಾಮನಗರ ಜಿಲ್ಲೆಯಲ್ಲಿ ಜೂ. 10ರಿಂದ 30ರವರೆಗೆ ಸಮಗ್ರ ಕೃಷಿ ಅಭಿಯಾನ - undefined

ರೈತರಿಗೆ ಕೃಷಿ ಇಲಾಖೆ ಸೌಲಭ್ಯ ಹಾಗೂ ಅಗತ್ಯ ಸಲಹೆಗಳ ಸಮಗ್ರ ಮಾಹಿತಿ ನೀಡಲು ಜೂನ್ 10 ರಿಂದ 30 ರವರೆಗೆ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಸಮಗ್ರ ಕೃಷಿ ಅಭಿಯಾನ ನಡೆಸಲಾಗುತ್ತಿದೆ ಎಂದು ಜಿಲ್ಲಾ ಕೃಷಿ ಇಲಾಖೆಯ ಉಪ ನಿರ್ದೇಶಕ ಜಿ.ಎಚ್.ಯೋಗೇಶ್ ಮಾಹಿತಿ‌ ನೀಡಿದ್ದಾರೆ.

ಜಿಲ್ಲಾ ಕೃಷಿ ಇಲಾಖೆಯ ಉಪ ನಿರ್ದೇಶಕ ಜಿ.ಎಚ್.ಯೋಗೇಶ್
author img

By

Published : Jun 2, 2019, 4:11 AM IST

ರಾಮನಗರ: ರೈತರಿಗೆ ಕೃಷಿ ಇಲಾಖೆ ಸೌಲಭ್ಯ ಹಾಗೂ ಅಗತ್ಯ ಸಲಹೆಗಳ ಸಮಗ್ರ ಮಾಹಿತಿ ನೀಡಲು ಜೂನ್ 10ರಿಂದ 30ರವರೆಗೆ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಸಮಗ್ರ ಕೃಷಿ ಅಭಿಯಾನ ನಡೆಸಲಾಗುತ್ತಿದೆ ಎಂದು ಜಿಲ್ಲಾ ಕೃಷಿ ಇಲಾಖೆಯ ಉಪ ನಿರ್ದೇಶಕ ಜಿ.ಹೆಚ್.ಯೋಗೇಶ್ ಮಾಹಿತಿ‌ ನೀಡಿದ್ದಾರೆ.

ಜಿಲ್ಲಾ ಕೃಷಿ ಇಲಾಖೆಯ ಉಪ ನಿರ್ದೇಶಕ ಜಿ.ಹೆಚ್.ಯೋಗೇಶ್

ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜನಪರ ಮಾಹಿತಿ - ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಜಿಲ್ಲೆಯ ರೈತರ ಮನೆ ಬಾಗಿಲಿಗೆ ಬೆಳೆ ವೈವಿಧ್ಯೀಕರಣ, ವ್ಯವಸಾಯ ವೆಚ್ಚದಲ್ಲಿ ಕಡಿತ, ಕೃಷಿಯೊಂದಿಗೆ ಪೂರಕ ಉಪ ಕಸುಬುಗಳಾದ ಪಶುಸಂಗೋಪನೆ, ರೇಷ್ಮೆ, ಮೀನುಗಾರಿಕೆ ಮುಂತಾದ ಚಟುವಟಿಕೆಗಳ ಬಗ್ಗೆ ರೈತರಿಗೆ ಮಾಹಿತಿ ಒದಗಿಸಲಾಗುವುದು. ಕೃಷಿ ವಸ್ತು ಪ್ರದರ್ಶನ, ಸ್ಥಬ್ಧ ಚಿತ್ರ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ನಡೆಸಲಾಗುವುದು. ವಿಜ್ಞಾನಿಗಳು, ಮಾದರಿ ರೈತರು, ತಜ್ಞರೊಂದಿಗೆ ವಿಚಾರ ವಿನಿಮಯ ನಡೆಸಲಾಗುವುದು ಎಂದರು.

ರಾಮನಗರ: ರೈತರಿಗೆ ಕೃಷಿ ಇಲಾಖೆ ಸೌಲಭ್ಯ ಹಾಗೂ ಅಗತ್ಯ ಸಲಹೆಗಳ ಸಮಗ್ರ ಮಾಹಿತಿ ನೀಡಲು ಜೂನ್ 10ರಿಂದ 30ರವರೆಗೆ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಸಮಗ್ರ ಕೃಷಿ ಅಭಿಯಾನ ನಡೆಸಲಾಗುತ್ತಿದೆ ಎಂದು ಜಿಲ್ಲಾ ಕೃಷಿ ಇಲಾಖೆಯ ಉಪ ನಿರ್ದೇಶಕ ಜಿ.ಹೆಚ್.ಯೋಗೇಶ್ ಮಾಹಿತಿ‌ ನೀಡಿದ್ದಾರೆ.

ಜಿಲ್ಲಾ ಕೃಷಿ ಇಲಾಖೆಯ ಉಪ ನಿರ್ದೇಶಕ ಜಿ.ಹೆಚ್.ಯೋಗೇಶ್

ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜನಪರ ಮಾಹಿತಿ - ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಜಿಲ್ಲೆಯ ರೈತರ ಮನೆ ಬಾಗಿಲಿಗೆ ಬೆಳೆ ವೈವಿಧ್ಯೀಕರಣ, ವ್ಯವಸಾಯ ವೆಚ್ಚದಲ್ಲಿ ಕಡಿತ, ಕೃಷಿಯೊಂದಿಗೆ ಪೂರಕ ಉಪ ಕಸುಬುಗಳಾದ ಪಶುಸಂಗೋಪನೆ, ರೇಷ್ಮೆ, ಮೀನುಗಾರಿಕೆ ಮುಂತಾದ ಚಟುವಟಿಕೆಗಳ ಬಗ್ಗೆ ರೈತರಿಗೆ ಮಾಹಿತಿ ಒದಗಿಸಲಾಗುವುದು. ಕೃಷಿ ವಸ್ತು ಪ್ರದರ್ಶನ, ಸ್ಥಬ್ಧ ಚಿತ್ರ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ನಡೆಸಲಾಗುವುದು. ವಿಜ್ಞಾನಿಗಳು, ಮಾದರಿ ರೈತರು, ತಜ್ಞರೊಂದಿಗೆ ವಿಚಾರ ವಿನಿಮಯ ನಡೆಸಲಾಗುವುದು ಎಂದರು.

ರಾಮನಗರ : ರೈತರಿಗೆ ಕೃಷಿ ಇಲಾಖೆ ಸೌಲಭ್ಯ ಹಾಗೂ ಅಗತ್ಯ ಸಲಹೆಗಳ ಸಮಗ್ರ ಮಾಹಿತಿ ನೀಡಲು ಜೂನ್ ೧೦ರಿಂದ ೩೦ರವರೆಗೆ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಸಮಗ್ರ ಕೃಷಿ ಅಭಿಯಾನ ನಡೆಸಲಾಗುತ್ತಿದೆ ಎಂದು ಜಿಲ್ಲಾ ಕೃಷಿ ಇಲಾಖೆಯ ಉಪ ನಿರ್ದೇಶಕ ಜಿ.ಎಚ್.ಯೋಗೇಶ್ ಮಾಹಿತಿ‌ ನೀಡಿದ್ದಾರೆ. ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜನಪರ ಮಾಹಿತಿ - ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಜಿಲ್ಲೆಯ ರೈತರ ಮನೆಬಾಗಿಲಿಗೆ ಬೆಳೆ ವೈವಿಧ್ಯೀಕರಣ, ವ್ಯವಸಾಯ ವೆಚ್ಚದಲ್ಲಿ ಕಡಿತ, ಕೃಷಿಯೊಂದಿಗೆ  ಪೂರಕ ಉಪ ಕಸುಬುಗಳಾದ ಪಶುಸಂಗೋಪನೆ, ರೇಷ್ಮೆ, ಕೃಷಿ, ಮೀನುಗಾರಿಕೆ ಮುಂತಾದ ಚಟುವಟಿಕೆಗಳ ಬಗ್ಗೆ ರೈತರಿಗೆ ಮಾಹಿತಿ ಒದಗಿಸಲಾಗುವುದು ಎಂದ ಅವರು ಕೃಷಿ ವಸ್ತು ಪ್ರದರ್ಶನ, ಸ್ಥಬ್ದ ಚಿತ್ರ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ನಡೆಸಲಾಗುವುದು. ವಿಜ್ಞಾನಿಗಳು, ಮಾದರಿ ರೈತರು ತಜ್ಞರೊಂದಿಗೆ ವಿಚಾರ ವಿನಿಮಯ ನಡೆಸಲಾಗುವುದು ಎಂದರು. ಜಿಲ್ಲೆಯಲ್ಲಿ ೨,೭೧,೪೪೮ ರೈತರಿದ್ದು, ಅದರಲ್ಲಿ ಅತಿ ಸಣ್ಣ ರೈತರು ೨,೦೯,೪೫೮, ಸಣ್ಣ ರೈತರು ೪೧,೧೯೧, ಮಧ್ಯಮ ರೈತರು೨೦,೫೨೪, ದೊಡ್ಡ ರೈತರು ೨೭೫, ಪರಿಶಿಷ್ಟ ಜಾತಿಯ ೨೫೮೬೬ ರೈತರು ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ೨೦೩೮ ರೈತರಿದ್ದು ೧೮ ರೈತ ಸಂಪರ್ಕ ಕೇಂದ್ರಗಳು, ೧೬೫ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕ ಮಾರಾಟಗಾರರು, ನೂರಕ್ಕೂ ಅಧಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಒಂದು ಮಣ್ಣು ಪರೀಕ್ಷಾ  ಪ್ರಯೋಗಾಲಯ ಮತ್ತು ಒಂದು ಕೃಷಿ ವಿಜ್ಞಾನ ಕೇಂದ್ರವಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ರೈತರಿಗಾಗಿ ವಿಶೇಷ ಕೃಷಿ ಚೇತನ ಅಭಿಯಾನದಡಿ ಗ್ರಾಮ ಪಂಚಾಯಿತಿ ಮತ್ತು ಹೋಬಳಿ ಮಟ್ಟದಲ್ಲಿ ರೈತರು ಮತ್ತು ಅಧಿಕಾರಿಗಳನ್ನೊಳಗೊಂಡ ನೂರಕ್ಕೂ ಅಧಿಕ ವಾಟ್ಸ್ ಆಪ್ ಗ್ರೂಪ್‌ಗಳಿದ್ದು ೬೫೦೦ರೈತರು ಗ್ರೂಪ್‌ನಲ್ಲಿದ್ದಾರೆ. ಈ ಎಲ್ಲಾ ರೈತರಿಗೆ ಗ್ರೂಪ್‌ನ ಮೂಲಕ ಸರ್ಕಾರದ ಕಾರ್ಯಕ್ರಮಗಳ ಮಾಹಿತಿಯನ್ನು ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. ರೈತರಿಗೆ ದೂರವಾಣಿ ಹೆಲ್ಪ್‌ಲೈನ್: ರೈತರು ಯಾವುದೇ ಮಾಹಿತಿ, ಸಮಸ್ಯೆ ಅಥವಾ ಅಹವಾಲು ಸಲ್ಲಿಸಲು ಹತ್ತಿರದ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಿ ಹಾಗೂ ದೂರವಾಣಿ ಸಂಖ್ಯೆ ೧೮೦೦೪೨೫೭೯೧೯ ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು. ೨೦೧೮-೧೯ನೇ ಸಾಲಿನಲ್ಲಿ ಜಿಲ್ಲೆಗೆ ೨೬.೩೯ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು ಶೇ.೯೮ರಷ್ಟು ಗುರಿ ಸಾಧನೆಯಾಗಿದೆ, ೧೯೭೭೬೬ ರೈತರಿಗೆ ೩೨೯೦ ಕ್ವಿಂಟಾಲ್ ವಿವಿಧ ಬೆಳೆಗಳ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗಿದೆ ಎಂದು ಹೇಳಿದರು. ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ ಕೃಷಿ ಹೊಂಡ, ಪಾಲಿಥೀನ್ ಹೊದಿಕೆ, ಡೀಸೆಲ್ ಪಂಪ್ ಸೆಟ್, ತುಂತುರು ನೀರಾವರಿ, ನೆರಳು ಪರದೆ, ಪಾಲಿಹೌಸ್ ಮುಂತಾದ ಸೌಲಭ್ಯಗಳಿಗೆ ಸಬ್ಸಿಡಿ ಮತ್ತು ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದರು. ರೈತರಿಗೆ ಸಕಾಲದಲ್ಲಿ ಮತ್ತು ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸಲು ರಾಜ್ಯದ ಗ್ರಾಮೀಣ ಪ್ರದೇಶದ ಹೋಬಳಿಗಳಲ್ಲಿ ವಿವಿಧ ಸಂಸ್ಥೆಗಳ ಮೂಲಕ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ತಾಲ್ಲೂಕಿಗೆ ಒಂದರಂತೆ ಕೈಲಾಂಚ, ಕುದೂರು, ವಿರೂಪಾಕ್ಷಿಪುರ ಹಾಗೂ ದೊಡ್ಡಮರಳವಾಡಿ ಹೋಬಳಿಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯಿಂದ ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸುವ ಕಾರ್ಯ ನಡೆಯುತ್ತಿದೆ ಎಂದರು. ಮಣ್ಣು ಆರೋಗ್ಯ ಚೀಟಿ ಕಾರ್ಯಕ್ರಮ ಯೋಜನೆಯಡಿ ೨೯೧೧೨ ಮಾದರಿಗಳನ್ನು ಸಂಗ್ರಹಿಸಿದ್ದು ೨೩೯೦೫೩ ಮಣ್ಣು ಆರೋಗ್ಯ ಚೀಟಿಗಳನ್ನು ರೈತರಿಗೆ ವಿತರಿಸಲಾಗಿದೆ. ಮಣ್ಣಿನಲ್ಲಿರುವ ಪೋಷಕಾಂಶಗಳನ್ನು ಹೆಚ್ಚಿಸಲು ಸರಿಯಾದ ರಸಗೊಬ್ಬರದ ಬಳಕೆ ಮಾಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು. ದಕ್ಷಿಣ ಕರ್ನಾಟಕದ ಜಿಲ್ಲೆಗಳು ೨-೩ ವರ್ಷಕ್ಕೊಮ್ಮೆ ಬರ ಪೀಡಿತ ಪ್ರದೇಶಗಳಾಗುವುದರಿಂದ ಸರ್ಕಾರವು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ರೂಪಿಸಿದ್ದು ಇಚ್ಚೆಯುಳ್ಳ ಬೆಳೆ ಸಾಲ ಪಡೆಯದ ರೈತರು ನಿಗಧಿತ ಅರ್ಜಿಯೊಂದಿಗೆ ಭೂಮಿ ದಾಖಲೆಗಳಾದ ಪಹಣಿ, ಖಾತೆ, ಬ್ಯಾಂಕ್ ಪಾಸ್‌ಪುಸ್ತಕ, ಆಧಾರ್ ಕಾರ್ಡ್‌ನ್ನು ಹತ್ತಿರದ ಬ್ಯಾಂಕ್‌ಗಳಲ್ಲಿ ನೊಂದಾಯಿಸಿಕೊಳ್ಳಬಹುದು ಎಂದರು. ಈ ಯೋಜನೆಯಡಿಯಲ್ಲಿ ನೊಂದಾಯಿಸಿಕೊಳ್ಳಲು ಎಳ್ಳು ಬೆಳೆಗೆ ಜುಲೈ ೧೬, ಭತ್ತ, ನೆಲಗಡಲೆ, ಅಲಸಂದೆ, ತೊಗರಿ ಬೆಳೆಗೆ ಜುಲೈ ೩೧ ಮತ್ತು ಮುಸುಕಿನ ಜೋಳ, ರಾಗಿ, ಹುರುಳಿ, ಕೆಂಪು ಮೆಣಸಿನಕಾಯಿಗೆ ಆಗಸ್ಟ್‌ನ ೧೪ನ್ನು ಕೊನೆಯ ದಿನವಾಗಿರುತ್ತದೆ ವಿಮೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ರೂಫೇಶ್ ೯೬೧೧೯೯೩೧೬೧ (ಮಾಗಡಿ, ಚನ್ನಪಟ್ಟಣ ತಾಲ್ಲೂಕು) ಮತ್ತು ಧರಣೀಂದ್ರ ೮೧೦೫೫೨೨೦೭೭(ರಾಮನಗರ, ಕನಕಪುರ ತಾಲ್ಲೂಕು) ವಿಮಾ ಪ್ರತಿನಿಧಿಗಳನ್ನು ಸಂಪರ್ಕಿಸುವಂತೆ ತಿಳಿಸಿದರು. ಕೃಷಿಯಲ್ಲಿ ತೊಡಗಿದ್ದ ಸಂದರ್ಭದಲ್ಲಿ ಹಾವು ಕಡಿತ ಮತ್ತಿತರ ಕಾರಣಗಳಿಂದ ರೈತರಿಗೆ ಪ್ರಾಣ ಹಾನಿಯುಂಟಾದರೆ ಅಂತಹ ರೈತರ ಕುಟುಂಬಕ್ಕೆ ೨ ಲಕ್ಷ ಪರಿಹಾರವನ್ನು ನೀಡಲಾಗುವುದು, ಬಣವೆ ಬೆಂಕಿ ಬಿದ್ದ ಸಂದರ್ಭದಲ್ಲಿ ಅಂತಹ ರೈತರಿಗೆ ೨೫೦೦೦ ಧನಸಹಾಯವನ್ನು ಕೃಷಿ ಇಲಾಖೆಯಿಂದ ನೀಡಲಾಗುತ್ತದೆ ಎಂದರು. ನೀರಿನ ಸಮರ್ಪಕ ಬಳಕೆಯ ಉದ್ದೇಶದಿಂದ ಪ್ರಧಾನ ಮಂತ್ರಿಗಳ ಕೃಷಿ ಸಿಂಚಾಯಿ ಯೋಜನೆಯಡಿ ತುಂತುರು ಮತ್ತು ಹನಿ ನೀರಾವರಿ ಘಟಕಗಳನ್ನು ಎಲ್ಲಾ ವರ್ಗದ ರೈತರಿಗೆ ಶೇ.೯೦ರ ಸಹಾಯಧನದಡಿಯಲ್ಲಿ ವಿತರಿಸಲಾಗುತ್ತಿದೆ ಎಂದು ಹೇಳಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಎಸ್. ಶಂಕರಪ್ಪ ಉಪಸ್ಥಿತರಿದ್ದರು..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.