ETV Bharat / state

ಹೆಂಡತಿಗೆ ಫೋನ್​ ಮೆಸೇಜ್​ ಮಾಡುತ್ತಾನೆ ಎಂದು ಗಂಡನಿಂದ ಯುವಕನ ಬರ್ಬರ ಹತ್ಯೆ - ವ್ಯಕ್ತಿ ಕೊಲೆ

ತನ್ನ ಹೆಂಡತಿ ಜೊತೆಗೆ ಅನೈತಿಕ‌ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ವ್ಯಕ್ತಿಯೊಬ್ಬ ಯುವಕನೋರ್ವನನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ‌ ಮಾಡಿರುವ ಘಟನೆ‌ ನಗರದ ಹೊರವಲಯದ ಚನ್ನಮಾನಹಳ್ಳಿಯಲ್ಲಿ ನಡೆದಿದೆ.

Ramanagara
author img

By

Published : Aug 20, 2019, 2:00 AM IST

ರಾಮನಗರ : ತನ್ನ ಹೆಂಡತಿಗೆ ಮೆಸೇಜ್ ಮತ್ತು ಫೋನ್ ಮಾಡಿ ಮಾತನಾಡುತ್ತಿದ್ದ ಎಂಬ ಕಾರಣಕ್ಕೆ ಆಕ್ರೋಶಗೊಂಡ ಮಹಿಳೆಯ ಪತಿ ನಾಗನಾಯ್ಕ್​ ಎಂಬಾತ ಯುವಕ ಅಂಜನಾಪುರ ಮಹಾದೇವ(22) ಎಂಬಾತನನ್ನು ಬರ್ಬರವಾಗಿ ಹತ್ಯೆ ಗೈದಿದ್ದಾನೆ.

ಬಳಿಕ ಆರೋಪಿ ನಾಗನಾಯ್ಕ್​ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಮೃತ ಮಹಾದೇವನು, ನಾಗನಾಯ್ಕ್​ನ ಹೆಂಡತಿ ಜೊತೆಗೆ ಅನೈತಿಕ‌ ಸಂಬಂಧ ಹೊಂದಿದ್ದ ಎಂದು ಶಂಕಿಸಿ ಆರೋಪಿ ನಾಗನಾಯ್ಕ್ ಕೊಲೆ‌ ಮಾಡಿದ್ದಾನೆ‌ ಎನ್ನಲಾಗಿದೆ.

ಕೊಲೆಯಾದ ಮಹಾದೇವ ಮತ್ತು ನಾಗನಾಯ್ಕ್​ ಇಬ್ಬರೂ ಅಂಜನಾಪುರ ಗ್ರಾಮದವರಾಗಿದ್ದು, ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

Intro:Body:ರಾಮನಗರ : ತನ್ನ ಹೆಂಡತಿಗೆ ಮೆಸೆಜ್ ಮತ್ತು ಫೋನ್ ಮಾಡಿ ಮಾತನಾಡುತ್ತಿದ್ದ ಎನ್ನುವ ಕಾರಣಕ್ಕೆ ಆಕ್ರೋಶಗೊಂಡು ವ್ಯಕ್ತಿಯೊಬ್ಬನ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ‌ ಮಾಡಿರುವ ಘಟನೆ‌ ,ಚನ್ನಮಾನಹಳ್ಳಿ ಯಲ್ಲಿ ನಡೆದಿದೆ.
ನಗರದ ಹೊರವಲಯದ ಚನ್ನಮಾನಹಳ್ಳಿಯಲ್ಲಿ ನಡೆದಿರುವ ಘಟನೆಯಲ್ಲಿ ಕೊಲೆಯಾದ ವ್ಯಕ್ತಿಯನ್ನು ಅಂಜನಾಪುರ ಮಹದೇವ (22) ಎಂದು ಗುರುತಿಸಲಾಗಿದೆ. ಕೊಲೆ ಮಾಡಿ ತಲೆ‌ಮರೆಸಿಕೊಂಡಿದ್ದ ಆರೋಪಿ ನಾಗನಾಯ್ಕ ನಂತರ ಪೋಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಅವನ ಹೆಂಡತಿ ಜೊತೆಗೆ ಅನೈತಿಕ‌ ಸಂಭಂದ‌ ಹೊಂದಿದ್ದ ಎಂದು ಶಂಕಿಸಿ ಕೊಲೆ‌ಮಾಡಿದ್ದಾನೆ‌ ಎನ್ನಲಾಗಿದೆ.
ಕೊಲೆಯಾದ ಮಹದೇವ ಮತ್ತು ನಾಗಾನಾಯ್ಕ‌ ಇಬ್ಬರೂ ಅಂಜನಾಪುರ ಗ್ರಾಮದವರಾಗಿದ್ದು ಐಜೂರು ಪೋಲೀಸ್ ಠಾಣಾ ವ್ಯಾಪ್ತಿಯ ಚನ್ನಮಾನಹಳ್ಳಿಯಲ್ಲಿ ಘಟನೆ ನಡೆದಿದ್ದು ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.Conclusion:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.