ರಾಮನಗರ : ಒಳ್ಳೆಯ ಸಮಯವೇಕೆ?, ಸಿಡಿ ಇದ್ದರೆ ನಾಳೆಯೇ ಬಿಡುಗಡೆ ಮಾಡಲಿ ಎಂದು ಸಚಿವ ಸಿ.ಪಿ. ಯೋಗೇಶ್ವರ್ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.
ಚನ್ನಪಟ್ಟಣ ಇಲ್ಲಾಂದ್ರೆ ಎಲ್ಲಾದರೂ ಬರಲಿ, ರಾಜಕಾರಣ ಮಾಡೋದು ನನಗೂ ಗೊತ್ತಿದೆ. ಅವರ ಸವಾಲನ್ನು ನಮ್ಮ ಕಾರ್ಯಕರ್ತರೇ ಸ್ವೀಕಾರ ಮಾಡ್ತಾರೆ. ನಾನು ಕಳೆದ ಬಾರಿ ಚನ್ನಪಟ್ಟಣಕ್ಕೆ ಚುನಾವಣೆ ನಡೆಸಲು ಬಂದಿರಲಿಲ್ಲ, ಅರ್ಜಿ ಹಾಕಲು ಬಂದಿದ್ದೆ. ಆದ್ರೂ ನಾನು ಗೆಲ್ಲಲಿಲ್ಲವೇ?, ಹಾಗಾಗಿ ಈ ರೀತಿಯ ಬಾಯಿ ಚಪಲದ ಹೇಳಿಕೆ ನೀಡುವುದನ್ನು ಅವರು ಬಿಡಬೇಕು ಎಂದು ಹರಿಹಾಯ್ದರು.
ಕೃಷಿ ಸಚಿವ ಬಿ.ಸಿ.ಪಾಟೀಲ್ ವೈದ್ಯರನ್ನು ಮನೆಗೆ ಕರೆಸಿ ವ್ಯಾಕ್ಸಿನ್ ಹಾಕಿಸಿಕೊಂಡ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಸರ್ಕಾರದಲ್ಲಿ ಯಾರು ಏನು ಬೇಕಾದರೂ ಮಾಡಬಹುದು ಬನ್ನಿ ಎಂದು ಅವರು ವ್ಯಂಗ್ಯವಾಡಿದರು.