ETV Bharat / state

ಹೃದಯದಲ್ಲಿ ಜಾಗ ಕೊಡಿ ಸಾಕು, ನನಗೆ ಮುಖ್ಯಮಂತ್ರಿ ಖುರ್ಚಿ ಬೇಡ: ಸಿ.ಟಿ.ರವಿ

ಅಧಿಕಾರ ಶಾಶ್ವತವಲ್ಲ, ದೇಶ ಪ್ರೇಮವಷ್ಟೇ‌ ಶಾಶ್ವತವಾಗಿರಬೇಕು ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಅಭಿಪ್ರಾಯಪಟ್ಟರು.

author img

By

Published : Jul 21, 2022, 12:04 PM IST

c t ravi
ಸಿ.ಟಿ ರವಿ

ರಾಮನಗರ: ನಾನು ಮುಖ್ಯಮಂತ್ರಿ ಖುರ್ಚಿಗೆ ಟವಲ್ ಹಾಕಿ ರಾಮನಗರಕ್ಕೆ ಬಂದಿಲ್ಲ. ಮುಖ್ಯಮಂತ್ರಿ ಖುರ್ಚಿ ಖಾಲಿಯೂ ಇಲ್ಲ. ಆದರೂ ಕೆಲವರು ಟವಲ್ ಹಾಕಿದ್ದಾರೆ. ನಾನು ಹಿಂದುತ್ವಕ್ಕೆ ಬದ್ಧನಾಗಿದ್ದೇನೆಂದು ಹೇಳಲಷ್ಟೇ ಬಂದಿದ್ದೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ರಾಮನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಆಲೋಚನೆಗೆ ತಕ್ಕಂತೆ ಅಧಿಕಾರ ಬಳಸುತ್ತೇನೆ. ಆದರೆ ಕೆಲವರು ಕುಟುಂಬ, ಹಣ, ಪ್ರತಿಷ್ಠೆಗಾಗಿ ಅಧಿಕಾರ ಕೇಳುತ್ತಿದ್ದಾರೆ. ಭಾರತವನ್ನು ಭಾರತವನ್ನಾಗಿ ಉಳಿಸಲು, ಉದಯಪುರ ಹಾಗೂ ಮಹಾರಾಷ್ಟ್ರದಲ್ಲಾದ ಘಟನೆಗಳು ನಮ್ಮಲ್ಲಿ ಆಗದಿರಲು ನಮಗೆ ಅಧಿಕಾರ ಕೊಡಿ ಎಂದರು. ಜೊತೆಗೆ ನಮಗೆ ಹೃದಯದಲ್ಲಿ ಜಾಗ ಕೊಡಿ. ನನಗೆ ಮುಖ್ಯಮಂತ್ರಿ ಖುರ್ಚಿ ಬೇಡ ಎಂದು ತಿಳಿಸಿದರು.

ಇದನ್ನೂ ಓದಿ: ಆಡಳಿತದಲ್ಲಿ ವೇಗ ಹಾಗು ಸಕಾಲದಲ್ಲಿ ಯೋಜನೆಗಳ ಪರಿಣಾಮಕಾರಿ ಜಾರಿಗೆ ಸಿಎಂ ಸೂಚನೆ

ಸಾಂವಿಧಾನಿಕ ಸಂಸ್ಥೆಗಳ ಮೇಲೆ ಕಾಂಗ್ರೆಸ್​ಗೆ ನಂಬಿಕೆ ಇಲ್ಲ. ಇಡಿ ಸುಮ್ಮನೆ ಯಾರ ಮೇಲೂ ತನಿಖೆ ನಡೆಸುವುದಿಲ್ಲ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿರುವವರು ಅಮಾಯಕರೇ? ಕಾಂಗ್ರೆಸ್​ ನಾಯಕರು ಪ್ರಾಮಾಣಿಕವಾಗಿದ್ದರೆ ಇಡಿಗೆ ಏಕೆ ಹೆದರಿಕೊಳ್ಳಬೇಕು? ಬಂಡವಾಳ ಹಾಕದೇ 20 ಸಾವಿರ ಕೋಟಿ ರೂ ವರ್ಗಾವಣೆ ಮಾಡಿಕೊಳ್ಳುವುದು ಸರಿಯೇ? ಎಂದು ಸಿ.ಟಿ.ರವಿ ಕೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.