ರಾಮನಗರ: ಮರ್ಯಾದೆಗೆ ಅಂಜಿ ಪತಿ-ಪತ್ನಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಸಾದರಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ದಂಪತಿ ಸಾವಿಗೆ ತ್ಯಾಗರಾಜ್ ಎಂಬಾತ ಕಾರಣವೆಂದು ತ್ಯಾಗರಾಜನ ಮನೆಗೆ ಗ್ರಾಮಸ್ಥರು ಬೆಂಕಿ ಹಚ್ಚಿದ್ದು, ಮನೆ, ಎರಡು ಕಾರು, ಒಂದು ಟ್ರ್ಯಾಕ್ಟರ್ ಬೆಂಕಿಗಾಹುತಿಯಾಗಿವೆ. ಐದು ದಿನಗಳ ಹಿಂದೆ ತ್ಯಾಗರಾಜನ ಜೊತೆ ಗ್ರಾಮದ ವ್ಯಕ್ತಿಯೊಬ್ಬನ ಪತ್ನಿ ಮನೆ ಬಿಟ್ಟು ಹೋಗಿ ಇಂದು ವಾಪಾಸ್ ಬಂದಿದ್ದಾಳಂತೆ. ಇದೇ ವೇಳೆ ಆಕೆ ಜೊತೆ ಇರುವ ಕೆಲ ಪೋಟೋಗಳನ್ನ ಗಂಡನಿಗೆ ಕಳುಹಿಸಿದ್ದ ತ್ಯಾಗರಾಜ್ ವಿಕೃತಿ ಮೆರೆದಿದ್ದ ಎನ್ನಲಾಗಿದೆ.