ETV Bharat / state

ಎಸಿಪಿ ತಂಗಿ ಮನೆಗೆ ಖನ್ನ ಹಾಕಿದ ಖದೀಮರು...60 ಗ್ರಾಂ ಚಿನ್ನ, 10 ಸಾವಿರ ಕದ್ದು ಪರಾರಿ - theft news

ಚನ್ನಪಟ್ಟಣದಲ್ಲಿನ ಮಹದೇಶ್ವರ ನಗರ ಬಳಿಯ ಕೆ.ಹೆಚ್.ಬಿ ಕಾಲೊನಿಯಲ್ಲಿ ಭಾನುವಾರ ಸಂಜೆ ವೇಳೆಯಲ್ಲಿ ಮನೆಗೆ ನುಗ್ಗಿದ ನಾಲ್ವರ ತಂಡ. ಮನೆಯಲ್ಲಿದ್ದ ತಾಯಿ ಮಗಳಿಗೆ ಮಾರಕಾಸ್ತ್ರ ತೋರಿಸಿ ಸುಮಾರು 60 ಗ್ರಾಂ ಚಿನ್ನ ಹಾಗೂ 10 ಸಾವಿರ ನಗದು ಕಸಿದುಕೊಂಡು ನಂತರ ತಾಯಿ ಮಗಳನ್ನು ರೂಂನಲ್ಲಿ ಕೂಡಿಹಾಕಿ ಪರಾರಿಯಾಗಿದ್ದಾರೆ.

Home theft
ಕಳ್ಳತನ
author img

By

Published : Mar 9, 2020, 3:35 PM IST

ರಾಮನಗರ : ಹಾಡಹಗಲೇ ಖದೀಮರು ಮನೆಗೆ ನುಗ್ಗಿ ಮಾರಕಾಸ್ತ್ರ ಪ್ರದರ್ಶಿಸಿ, ಬೆದರಿಸಿ ಮನೆಯಲ್ಲಿದ್ದ ನಗ-ನಾಣ್ಯ ದೋಚಿರುವ ಘಟನೆ ಚನ್ನಪಟ್ಟಣದ ಕೆ.ಎಚ್.ಬಿ ಕಾಲೋನಿಯಲ್ಲಿ ಭಾನುವಾರ ನಡೆದಿದೆ.

ಚನ್ನಪಟ್ಟಣದಲ್ಲಿನ ಮಹದೇಶ್ವರ ನಗರ ಬಳಿಯ ಕೆ.ಹೆಚ್.ಬಿ ಕಾಲೊನಿಯಲ್ಲಿ ಭಾನುವಾರ ಸಂಜೆ ವೇಳೆಯಲ್ಲಿ ಮನೆಗೆ ನುಗ್ಗಿದ ನಾಲ್ವರ ತಂಡ. ಮನೆಯಲ್ಲಿದ್ದ ತಾಯಿ ಮಗಳಿಗೆ ಮಾರಕಾಸ್ತ್ರ ತೋರಿಸಿ ಸುಮಾರು 60 ಗ್ರಾಂ ಚಿನ್ನ ಹಾಗೂ 10 ಸಾವಿರ ನಗದು ಕಸಿದುಕೊಂಡು ನಂತರ ತಾಯಿ ಮಗಳನ್ನು ರೂಂನಲ್ಲಿ ಕೂಡಿಹಾಕಿ ಪರಾರಿಯಾಗಿದ್ದಾರೆ.

ಮನೆ ಕಳ್ಳತನ

ಮೈಸೂರಿನಲ್ಲಿ ಎಸಿಪಿಯಾಗಿ ಸೇವೆ ಸಲ್ಲಿಸುತ್ತಿರುವ ಗೋಪಾಲ್​ ಅವರ ಸಹೋದರಿ ಸುವರ್ಣ ಅವರ ಮನೆಯಲ್ಲಿ ಈ ಘಟನೆ ಜರುಗಿದ್ದು. ದರೋಡೆ ನಡೆದಾಗ ಸುವರ್ಣರ ಪತಿ ಉತ್ತೇಶ್ ಮನೆಯಲ್ಲಿ ಇರಲಿಲ್ಲ. ಸುಮಾರು 20-23 ವಯಸ್ಸಿನ ನಾಲ್ವರು ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಬಂದಿದ್ದರು. ಮನೆಗೆ ನುಗ್ಗಿದ ದುಷ್ಕರ್ಮಿಗಳು ತಾಯಿ ಸುವರ್ಣ ಮತ್ತು ಮಗಳು ಇಂಚರ ಇಬ್ಬರ ಕುತ್ತಿಗೆಗೆ ಲಾಂಗ್ ಇಟ್ಟು ಬೆದರಿಸಿ ಸುವರ್ಣ ಅವರ ಕುತ್ತಿಗೆಯಲ್ಲಿದ್ದ ಮಾಂಗಲ್ಯದ ಸರ, ಕಿವಿ ಓಲೆಗಳು ಹಾಗೂ ಮಗಳು ಧರಿಸಿದ್ದ ಒಡವೆಗಳನ್ನು ಬಿಚ್ಚಿಸಿಕೊಂಡು ನಂತರ ಮನೆಯಲ್ಲಿದ್ದ ಬೀರು ಜಾಲಾಡಿ 10 ಸಾವಿರ ನಗದು ದೋಚಿದ್ದಾರೆ.

ಮನೆ ಜಾಲಾಡುವಾಗ ಟಿವಿ ಮೇಲಿದ್ದ ಎಸಿಪಿ ಗೋಪಾಲ್ ರವರ ಪೋಲೀಸ್ ಸಮವಸ್ತ್ರದಲ್ಲಿ ಪೋಟೋ ನೋಡಿ ಆತಂಕಕ್ಕೊಳಗಾಗಿ, ಸುವರ್ಣರವರಿಗೆ ನಾವು ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲು ಬಂದಿದ್ದೆವು ಅದರೆ ಅವರು ತಪ್ಪಿಸಿಕೊಂಡರು ನಾವು ಬಂದಿರುವ ವಿಚಾರ ಅವರಿಗೆ ತಿಳಿಯಬೇಕು ಅದಕ್ಕೆ ನಿಮ್ಮ ಮನೆ ದರೋಡೆ ಮಾಡುತ್ತಿದ್ದೇವೆ. ನೀವು ಹೆದರಬೇಡಿ ಕೂಗಾಡಬೇಡಿ ನಾವು ಹೋದ ನಂತರ ಪೊಲೀಸ್ ಕಂಪ್ಲೇಟ್ ಕೊಡಿ ನಿಮಗೆ ನಿಮ್ಮ ಒಡವೆ ಸಿಗುತ್ತದೆ ಎಂದು ಧೈರ್ಯ ಹೇಳಿ ಹೋದರು ಎನ್ನಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಪೊಲೀಸ್​​ ಠಾಣೆಯ ಪೋಲಿಸರು ಸ್ಥಳಕ್ಕೆ ಬೆರಳಚ್ಚು ತಜ್ಞರನ್ನು ಕರೆಸಿ ತನಿಖೆ ಕೈಗೊಂಡಿದ್ದು, ಅಲ್ಲದೇ ಘಟನೆ ನಡೆದ ಬಡಾವಣೆಯ ಸಿಸಿ ಕ್ಯಾಮರಾಗಳ ದೃಶ್ಯಾ ವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದು ತನಿಖೆ ಚುರುಕುಗೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.