ರಾಮನಗರ: ಗೃಹ ಸಚಿವನಾದ ನಂತರ ನಾನು ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ಕೆಲವು ಜಿಲ್ಲೆಗಳಿಗೆ ಭೇಟಿ ನೀಡಲಿಕ್ಕೆ ಆಗಿರಲಿಲ್ಲ. ಆ ನಿಟ್ಟಿನಲ್ಲಿ ಇಂದು ರಾಮನಗರ ಜಿಲ್ಲೆಗೆ ಭೇಟಿ ನೀಡಿದ್ದೇನೆ. ಪೊಲೀಸರ ಸಮಸ್ಯೆಗಳನ್ನು ಆಲಿಸಿ ಸರಿಪಡಿಸುವ ಕೆಲಸ ಮಾಡ್ತಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಇದನ್ನೂ ಓದಿ: ಶೀಘ್ರವೇ ಪಿಎಸ್ಐ ಮರು ಪರೀಕ್ಷೆ: ಗೃಹ ಸಚಿವ ಆರಗ ಜ್ಞಾನೇಂದ್ರ
ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗೃಹ ಸಚಿವನಾದ ಮೇಲೆ ಬಹುತೇಕ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದೇನೆ. ಭೇಟಿ ಮಾಡಿದ ಸಂದರ್ಭದಲ್ಲಿ ಪೊಲೀಸರ ಕಷ್ಟ - ಸುಖ ಹಾಗೂ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ಮಾಡುತ್ತಿದ್ದೇನೆ. ಅದರಂತೆ ಈ ಜಿಲ್ಲೆಗೂ ಕೂಡ ಭೇಟಿ ನೀಡಿರುವುದಾಗಿ ತಿಳಿಸಿದರು.
ಪಠ್ಯ ಪುಸ್ತಕದಲ್ಲಿ ಕೆಲವು ಪಠ್ಯಗಳನ್ನು ಕೈಬಿಟ್ಟ ವಿಚಾರವಾಗಿ ಪ್ರತಿಕ್ರಿಯಿಸಿ ಇದು ನನ್ನ ಇಲಾಖೆ ಅಲ್ಲ. ಶಿಕ್ಷಣ ಸಚಿವರು ನಿತ್ಯ ಇದರ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಪಠ್ಯದಲ್ಲಿ ಆ ರೀತಿ ಯಾವುದೇ ಬದಲಾವಣೆಗಳಾಗಿಲ್ಲ. ಇವೆಲ್ಲ ಕೇವಲ ಊಹಾಪೋಹಗಳು ಎಂದರು.
ಬೆಂಗಳೂರಿನಲ್ಲಿ 28 ಮಂದಿ ಐಸಿಎಸ್ಗೆ ಮತಾಂತರ ವಿಚಾರವಾಗಿ ಮಾತನಾಡಿದ ಅವರು, ನಾನು ಕೂಡ ಈ ವಿಚಾರವನ್ನು ಗಮನಿಸಿದ್ದೇವೆ. ಈ ಬಗ್ಗೆ ಈಗಾಗಲೇ ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿರುವೆ. ಈ ಬಗ್ಗೆ NIA ಗಮನಹರಿಸಿದೆ. ನಾವೂ ಕೂಡ ಜಾಗರೂಕವಾಗುತ್ತೇವೆ. ಎಲ್ಲದರ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ: ಶಬ್ದ ಮಾಲಿನ್ಯದ ಬಗ್ಗೆ ಸರ್ಕಾರ ಶಿಘ್ರವೇ ನಿರ್ಧಾರ ಪ್ರಕಟಿಸಲಿದೆ.. ಗೃಹ ಸಚಿವ ಆರಗ ಜ್ಞಾನೇಂದ್ರ
ಮಸೀದಿಗಳಲ್ಲಿ ಆಜಾನ್ ಬಳಸುವ ವಿಚಾರ ಪ್ರತಿಕ್ರಿಯಿಸಿ, ಇದೀಗ ಸತ್ಯವನ್ನು ಅವರೇ ಒಪ್ಪಿಕೊಂಡಿದ್ದಾರೆ. ಯಾವ ಸಮಯದಲ್ಲಿ ಉಪಯೋಗಿಸವುದಾಗಿಯೂ ಅವರೇ ಹೇಳಿದ್ದಾರೆ. ಕೋರ್ಟ್ನಲ್ಲಿ ಆದೇಶ ಕೂಡ ಇದೆ. ಪರವಾನಗಿ ಸೇರಿದಂತೆ ಆಜಾನ್ನಲ್ಲಿ ಎಷ್ಟು ಡೆಸಿಬಲ್ ಇರಬೇಕು ಎಂಬೆಲ್ಲ ಮಾಹಿತಿ ಇದೆ. ಕೋರ್ಟ್ನ ಆದೇಶದಲ್ಲಿ ಏನಿದೆಯೋ ಅದನ್ನು ಪಾಲಿಸಲೆಬೇಕು ಎಂದರು.