ETV Bharat / state

ರಾಮನಗರ : ಶ್ರೀರಾಮನವಮಿ ಶೋಭಾಯಾತ್ರೆಯಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ..

ಸಿ.ಪಿ. ಯೋಗೇಶ್ವರ್​ ನೇತೃತ್ವದಲ್ಲಿ ಬೊಂಬೆನಗರಿ ಚನ್ನಪಟ್ಟಣದಲ್ಲಿ ಶ್ರೀರಾಮನವಮಿ ಹಾಗೂ ಶೋಭಯತ್ರೆಯನ್ನು ಅದ್ಧೂರಿಯಗಿ ಆಚರಿಸಲಾಯಿತು. ಸುಗ್ರೀವ ಆಂಜನೇಯನಿಗೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ವಿಶೇಷ ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ಕೊಟ್ಟರು..

C. P. Yogeshwara
ಶ್ರೀರಾಮನವಮಿ ಶೋಭಯಾತ್ರೆಯಲ್ಲಿ ಹಿಂದೂ ಮುಸ್ಲಿಂ ಭಾಗಿ
author img

By

Published : Apr 10, 2022, 5:25 PM IST

ರಾಮನಗರ : ಬೊಂಬೆನಗರಿ ಚನ್ನಪಟ್ಟಣದಲ್ಲಿ ಶ್ರೀರಾಮನವಮಿ ಹಾಗೂ ಶೋಭಾಯತ್ರೆಯನ್ನು ಅದ್ಧೂರಿಯಗಿ ಆಚರಿಸಲಾಯಿತು. ನಗರದ ಪ್ರಮುಖ ವೃತ್ತಗಳಲ್ಲಿ ಶ್ರೀರಾಮದೇವರ ಫೋಟೋವನ್ನು ಇರಿಸಿ ಪೂಜೆ ಸಲ್ಲಿಸಿ, ನಂತರ ಪ್ರಮುಖ ಸ್ಥಳಗಳಲ್ಲಿ ಭಕ್ತರಿಗೆ ಪಾನಕ, ಮಜ್ಜಿಗೆ ಕೋಸಂಬರಿಯನ್ನು ವಿತರಣೆ ಮಾಡಲಾಯಿತು.

ಸಿಪಿ ಯೋಗೇಶ್ವರ್​ ನೇತೃತ್ವದಲ್ಲಿ ಶೋಭಯಾತ್ರೆ : ಇದಕ್ಕೂ ಮೊದಲು ಸುಗ್ರೀವ ಆಂಜನೇಯನಿಗೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ವಿಶೇಷ ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ಕೊಟ್ಟರು. ಈ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಲೇವಡಿ ವಿಚಾರವಾಗಿ ಮಾತನಾಡಿದ ಅವರು, ಇಂತಹ ದಿನದಂದು ನಾನು ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಲ್ಲ. ಮುಂದೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದರು.

ಶ್ರೀರಾಮನವಮಿ ಶೋಭಯಾತ್ರೆಯಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ..

ಶೋಭಯಾತ್ರೆಯಲ್ಲಿ ಕಲಾಮೇಳಗಳ ‌ಮೆರಗು : ಶೋಭಾಯಾತ್ರೆಯಲ್ಲಿ ಕರಾವಳಿ ಭಾಗದ ಚಂಡೆ, ಮಹಿಳಾ ಡೊಳ್ಳು ಕುಣಿತದ ತಂಡ, ರಾಮ, ಸೀತಾ, ಲಕ್ಷ್ಮಣ, ಹನುಮಂತನ ಪ್ರತಿಕೃತಿಯ ಬೃಹತ್ ಬೆದರು ಬೊಂಬೆಗಳು, ಪೂಜೆ ಮತ್ತು ವೀರಗಾಸೆ ಕುಣಿತದ ತಂಡಗಳು ಮೆರವಣಿಗೆಯಲ್ಲಿ ಪ್ರಮುಖ ಆಕರ್ಷಣೆಯಾಗಿತ್ತು.

ಮಸ್ಲಿಂ ಬಾಂಧರು ಯಾತ್ರೆಯಲ್ಲಿ ಭಾಗಿ : ಶೋಭಾಯಾತ್ರೆಯಲ್ಲಿ ಮುಸ್ಲಿಂ ಸಮುದಾಯದವರು ಸಹ ಭಾಗಿಯಾಗಿ ಹಿಂದೂ-ಮುಸ್ಲಿಂ ಭಾಯಿ ಭಾಯಿ ಎಂಬುದನ್ನು ಸಾಬೀತುಪಡಿಸಿದರು. ಮೆರವಣಿಗೆಯನ್ನು ನೂರಾರು ಮುಸ್ಲಿಂ ಯುವಕರು ವೀಕ್ಷಣೆ ಮಾಡಿದರು. ಈ ವೇಳೆ ಮುಸ್ಲಿಂ ಯುವಕನೋರ್ವ ಮಾತನಾಡಿ, ಮೊದಲು ನಾವು ಭಾರತೀಯರು. ಹಿಂದಿನಿಂದಲೂ ನಮ್ಮ ಚನ್ನಪಟ್ಟಣದಲ್ಲಿ ಹಿಂದೂ-ಮುಸ್ಲಿಂ ಬಾಂಧವ್ಯದಿಂದ ಇದ್ದೇವೆ. ನಮ್ಮ ಹಬ್ಬಕ್ಕೆ ಅವರು ಬರುತ್ತಾರೆ. ಅವರ ಹಬ್ಬಕ್ಕೆ ನಾವು ಹೋಗುತ್ತೇವೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಕೂಡ ಶ್ರೀರಾಮ ನವಮಿಗೆ ನೀರು ಹಂಚುತ್ತಿದ್ದೇವೆ. ನಾವೆಲ್ಲರೂ ಕೂಡ ಬಾಂಧವ್ಯದಿಂದ ಇರುತ್ತೇವೆ ಎಂದರು.

ಇದನ್ನೂ ಓದಿ: ವಿಜಯೇಂದ್ರ ಮೊನ್ನೆ ಮೊನ್ನೆ ಹುಟ್ಟಿದ ಹುಡುಗ.. ಬಿಜೆಪಿಯಲ್ಲಿ ಇನ್ಮುಂದೆ ವಂಶಪಾರಂಪರ್ಯ ನಡೆಯಲ್ಲ.. ಯತ್ನಾಳ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.