ETV Bharat / state

ಕಾವೇರಿ ಕಣಿವೆಯಲ್ಲೂ ವ್ಯಾಪಕ ಮಳೆ... ಜನರಿಗೆ ಪ್ರವಾಹದ ಭೀತಿ, ಪ್ರವಾಸಿಗರಿಗೂ ಎಚ್ಚರಿಕೆ - ಕಾವೇರಿ, ಅರ್ಕಾವತಿ, ವೃಷಭಾವತಿ ನದಿಗಳು

ಕಾವೇರಿ ಕಣಿವೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆ, ಸಂಗಮ-ಮೇಕೆದಾಟು ಸೇರಿದಂತೆ ಅರಣ್ಯ ಪ್ರದೇಶದಲ್ಲಿನ ಜನರಿಗೆ ಇದೀಗ ಪ್ರವಾಹ ಭೀತಿ ಎದುರಾಗಿದೆ.

ಪ್ರವಾಹದ ಭೀತಿ
author img

By

Published : Aug 12, 2019, 2:56 PM IST

ರಾಮನಗರ: ಕೆಆರ್‌ಎಸ್ ಅಣೆಕಟ್ಟು, ಕಬಿನಿ, ಹಾರಂಗಿ ಜಲಾಶಯಗಳಿಂದ ಯಾವುದೇ ಸಂದರ್ಭದಲ್ಲಿ ನೀರನ್ನು ಕಾವೇರಿ ನದಿಗೆ ಹರಿಬಿಡುವ ಸಾಧ್ಯತೆ ಇದ್ದು, ನದಿ ಪಾತ್ರದ ಹಲವು ಹಳ್ಳಿಗಳು ಮುಳುಗಡೆಯ ಭೀತಿ ಎದುರಿಸುತ್ತಿವೆ.

ಸಂಗಮ, ಮೇಕೆದಾಟು ಮುಖಾಂತರ ಕಾವೇರಿ ನೀರು ತಮಿಳುನಾಡಿಗೆ ಸೇರುತ್ತದೆ. ಈಗಾಗಲೇ ಕೆಆರ್‌ಎಸ್ ಜಲಾಶಯದಿಂದ ನದಿಗೆ 50 ಸಾವಿರ ಕ್ಯೂಸೆಕ್​ ನೀರು ಬಿಡುಗಡೆ ಮಾಡಲಾಗಿದೆ. ಸದ್ಯ ಕೆ ಆರ್ ಎಸ್ ಭರ್ತಿಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ನದಿಗೆ ಮತ್ತಷ್ಟು ನೀರು ಹರಿಸಲಿದ್ದಾರೆ. ಈ ಪ್ರಮಾಣ ಹೆಚ್ಚಾದರೆ, ಸಂಗಮ ಪ್ರದೇಶದಲ್ಲಿನ ನಿವಾಸಿಗಳು ಸಹ ಜಲ ಪ್ರಳಯದ ಭೀತಿ ಎದುರಿಸಬೇಕಾಗಿದೆ.

ಸಂಗಮಕ್ಕೆ ಕಾವೇರಿ, ಅರ್ಕಾವತಿ, ವೃಷಭಾವತಿ ನದಿಗಳು ಸೇರುತ್ತವೆ. ಕೆಆರ್‌ಎಸ್‌ನಿಂದ ಹೊರಬಿಡುವ ನೀರು ಮುತ್ತತ್ತಿ ಮೂಲಕ ಸಂಗಮ ಸೇರಲಿದೆ. ಹೀಗಾಗಿ ಕೆಆರ್‌ಎಸ್‌ನಲ್ಲಿ ನೀರಿನ ಪ್ರಮಾಣ ಹೆಚ್ಚಾದರೆ, ಜಿಲ್ಲೆಯ ಸಂಗಮ ಪ್ರದೇಶದ ನಿವಾಸಿಗಳು ಸಹ ಪ್ರವಾಹಕ್ಕೆ ಬಲಿಯಾಗುವ ಸಾಧ್ಯತೆಯು ದಟ್ಟವಾಗಿದೆ. ಕಾವೇರಿ ನದಿ ಪಾತ್ರದಲ್ಲಿರುವ ಗ್ರಾಮಗಳ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕನಕಪುರ ತಾಲೂಕಾಡಳಿತ ಈಗಾಗಲೇ ಸೂಚನೆ ನೀಡಿದೆ. ಉಯ್ಯಂಬಳ್ಳಿ ಹೋಬಳಿ ಸಂಗಮದ ಬಳಿ ಇರುವ ಕುಪ್ಪೇದೊಡ್ಡಿ, ಬೊಮ್ಮಸಂದ್ರ ಗ್ರಾಮದ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.

ನದಿ ಪಾತ್ರದ ಜನರಿಗೆ ಪ್ರವಾಹದ ಭೀತಿ

ಕಳೆದ ವರ್ಷ ಸಹ ಮಡಿಕೇರಿಯಲ್ಲಿ ಮಳೆಯ ಆರ್ಭರ್ಟಕ್ಕೆ ಕೆಆರ್‌ಎಸ್ ತುಂಬಿ ಹರಿದು ಸಂಗಮ ಸಹ ಮುಳುಗಡೆ ಹಂತದಲ್ಲಿತ್ತು. ಅಂದು ಸಹ ಸುತ್ತಲಿನ ಗ್ರಾಮಗಳ ನಿವಾಸಿಗಳು ಊರು ಬಿಟ್ಟಿದ್ದರು. ಇಲ್ಲಿ ಪ್ರವಾಸೋಧ್ಯಮ ಇಲಾಖೆಗೆ ಸೇರಿದ್ದ ಕಟ್ಟಡಗಳು ಸಹ ಕಾವೇರಿ ನೀರಿನಲ್ಲಿ ಮುಳಗುಡೆಯಾಗಿದ್ದವು. ಆದರೆ, ಮುಂಜಾಗೃತ ಕ್ರಮಗಳನ್ನು ಕೈಗೊಂಡಿದ್ದರಿಂದ ಯಾವುದೇ ಅನಾಹುತಗಳು ಸಂಭವಿಸಿರಲಿಲ್ಲ. ಆದರೆ, ಇದೀಗ ಮತ್ತೆ ಮಳೆಯ ಆರ್ಭಟ ಜೋರಾಗಿರುವುದರಿಂದ ತುಂಬಿ ಹರಿಯುತ್ತಿರುವ ಕಾವೇರಿಯಿಂದಾಗಿ ಸ್ಥಳೀಯರು ಆತಂಕದಲ್ಲಿದ್ದಾರೆ.

ಪ್ರವಾಸಿಗರಿಗೆ ನಿರ್ಬಂಧ:

ಕಾವೇರಿ ನದಿ ಪಾತ್ರದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ನದಿಯಲ್ಲಿ ಯಾವುದೇ ಕ್ಷಣದಲ್ಲೂ ನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಪ್ರವಾಸಿಗರು ಮಾತ್ರವಲ್ಲದೇ, ಸ್ಥಳೀಯರು ಕೂಡ ಯಾವುದೇ ಕಾರಣಕ್ಕೂ ನೀರಿನಲ್ಲಿ ಇಳಿಯದಂತೆ ತಾಲೂಕು ಆಡಳಿತ ಸೂಚನೆ ನೀಡಿದೆ. ಇದಕ್ಕಾಗಿ ಸಂಗಮಕ್ಕೆ ಪ್ರವೇಶ ಪಡೆಯುವ ಬೆಂಡಗೋಡು ಚೆಕ್ ಪೋಸ್ಟ್ ಬಳಿಯೇ ಸೂಚನಾ ಫಲಕಗಳನ್ನು ಹಾಕಲಾಗಿದೆ. ಇನ್ನು ಫಿಶಿಂಗ್ ಕ್ಯಾಪ್ ಸಹ ಬಂದ್ ಮಾಡಲು ಮುಂದಾಗಿದ್ದಾರೆ.

ಕಾವೇರಿ ನದಿ ಪಾತ್ರದಲ್ಲಿಯೇ ಇರುವ ಕುಪ್ಪೇದೊಡ್ಡಿ, ಬೊಮ್ಮಸಂದ್ರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂದಾಜು 50 ಸಾವಿರ ಮಂದಿ ಜೀವನ ಸಾಗಿಸುತ್ತಿದ್ದಾರೆ. ಒಂದು ವೇಳೆ ನದಿ ಪಾತ್ರದಲ್ಲಿ ನೀರಿನ ಹರಿವು ಹೆಚ್ಚಾದರೆ, ಇಷ್ಟು ಮಂದಿ ಸಹ ಸುರಕ್ಷಿತ ಪ್ರದೇಶಗಳಿಗೆ ತೆರಳಬೇಕು. ಸಂಗಮ ಮುಳುಗಡೆ ಹಂತ ತಲುಪಿದರೆ, ಕುಪ್ಪೆದೊಡ್ಡಿ ಸಮೀಪ ಇರುವ ಅರಣ್ಯ ಇಲಾಖೆಯ ಐಬಿ ಹಾಗೂ ಕ್ಯಾಸಾಪುರದಲ್ಲಿನ ಚರ್ಚ್‌ಗೆ ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರಿಸಲು ತಾಲೂಕು ಆಡಳಿತ ಸಿದ್ಧತೆ ಮಾಡಿಕೊಂಡಿದೆ.

Intro:Body:ರಾಮನಗರ : ಜಿಲ್ಲೆಯ ಸಂಗಮ-ಮೇಕೆದಾಟು ಸೇರಿದಂತೆ ಅರಣ್ಯ ಪ್ರದೇಶದಲ್ಲಿನ ಜನರಿಗೆ ಇದೀಗ ಪ್ರವಾಹ ಸಂಕಷ್ಟ ಎದುರಾಗಲಿದೆ ಕಾವೇರಿ ಕಣಿವೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್ ಅಣೆಕಟ್ಟು, ಜತೆಗೆ, ಕಬಿನಿ, ಹಾರಂಗಿ ಜಲಾಶಯಗಳಿಂದ ಯಾವುದೇ ಸಂದರ್ಭದಲ್ಲಿ ನೀರನ್ನು ಕಾವೇರಿ ನದಿಗೆ ಹರಿಯ ಬಿಡುವ ಸಾಧ್ಯತೆ ಇದ್ದು ನದಸಿ ಪಾತ್ರದ ಹಲವು ಹಳ್ಳಿಗಳು ಮುಳುಗಡೆಯ ಬೀತಿ ಎದುರಿಸುತ್ತಿವೆ.
ಸಂಗಮ, ಮೇಕೆದಾಟು ಮುಖಾಂತರ ಕಾವೇರಿ ನೀರು ತಮಿಳುನಾಡಿಗೆ ಸೇರುತ್ತದೆ. ಈಗಾಗಲೇ ಕೆಆರ್‌ಎಸ್ ಜಲಾಶಯದಿಂದ ನದಿಗೆ 50,000 ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದೀಗ ಸದ್ಯ ಕೆಆರ್ ಎಸ್ ಭರ್ತಿಯಾಗುತ್ತಿದ್ದು ಮುಂದಿನ ದಿನಗಳಲ್ಲಿ ನದಿಗೆ ಮತ್ತಷ್ಟು ನೀರು ಹರಿಸಲಿದ್ದಾರೆ. ಈ ಪ್ರಮಾಣ ಹೆಚ್ಚಾದರೆ, ಸಂಗಮ ಪ್ರದೇಶದಲ್ಲಿನ ನಿವಾಸಿಗಳು ಸಹ ಜಲ ಪ್ರಳಯದ ಬೀತಿ ಎದುರಿಸಬೇಕಾಗಿ ಬರುತ್ತದೆ.
ಸಂಗಮ: ಕಾವೇರಿ, ಅರ್ಕಾವತಿ, ವೃಷಭಾವತಿ ನದಿಗಳು ಸೇರುತ್ತದೆ. ಕೆಆರ್‌ಎಸ್‌ನಿಂದ ಹೊರಬಿಡುವ ನೀರು ಮುತ್ತತ್ತಿ ಮೂಲಕ ಸಂಗಮ ಸೇರಲಿದೆ. ಈಗಾಗಿ ಕೆಆರ್‌ಎಸ್‌ನಲ್ಲಿ ನೀರಿನ ಪ್ರಮಾಣದ ಹೆಚ್ಚಾದರೆ, ಜಿಲ್ಲೆಯ ಸಂಗಮ ಪ್ರದೇಶದ ನಿವಾಸಿಗಳು ಸಹ ಪ್ರವಾಹಕ್ಕೆ ಬಲಿಯಾಗುವ ಸಾಧ್ಯತೆಯು ದಟ್ಟವಾಗಿದೆ. ಹೀಗಾಗಿ ಜಿಲ್ಲೆಯ ಕಾವೇರಿ ನದಿ ಪಾತ್ರದಲ್ಲಿರುವ ಗ್ರಾಮಗಳ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕನಕಪುರ ತಾಲೂಕು ಆಡಳಿತ ಈಗಾಗಲೇ ಸೂಚನೆ ನೀಡಿದೆ.
ಕಾವೇರಿ ಕಣಿವೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್ ಅಣೆಕಟ್ಟು, ಜತೆಗೆ, ಕಬಿನಿ, ಹಾರಂಗಿ ಜಲಾಶಯಗಳಿಂದ ಯಾವುದೇ ಸಂದರ್ಭದಲ್ಲಿ ಹೆಚ್ಚಿನ ನೀರನ್ನು ಕಾವೇರಿ ನದಿಗೆ ಹರಿಯ ಬಿಡಬಹುದು. ಈ ಹಿನ್ನೆಲೆಯಲ್ಲಿ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹೋಬಳಿ ಸಂಗಮದ ಬಳಿ ಇರುವ ಕುಪ್ಪೇದೊಡ್ಡಿ, ಬೊಮ್ಮಸಂದ್ರ ಗ್ರಾಮದ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆಯನ್ನುತಾಲ್ಲೂಕು ಆಡಳಿತ ನೀಡಿದೆ.

ಕಳೆದ ವರ್ಷ ಸಹ ಮಡಿಕೇರಿಯಲ್ಲಿನ ಮಳೆ ಆರ್ಭರ್ಟಕ್ಕೆ ಕೆಆರ್‌ಎಸ್ ತುಂಬಿ ಹರಿದು ಸಂಗಮ ಸಹ ಮುಳುಗಡೆ ಹಂತದಲ್ಲಿತ್ತು. ಅಂದು ಸಹ ಸುತ್ತಲಿನ ಗ್ರಾಮಗಳ ನಿವಾಸಿಗಳು ಊರು ಬಿಟ್ಟಿದ್ದರು. ಅಂದು ಸಂಗಮ ಬಳಿ ಇರುವ ಪ್ರವಾಸೋಧ್ಯಮ ಇಲಾಖೆಗೆ ಸೇರಿದ್ದ ಕಟ್ಟಡಗಳು ಸಹ ಕಾವೇರಿ ನೀರಿನಲ್ಲಿ ಮುಳಗುಡೆಯಾಗಿದ್ದವು. ಆದರೆ, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರಿಂದ ಯಾವುದೇ ಅನಾಹುತಗಳು ಸಂಭವಿಸಿರಲಿಲ್ಲ. ಆದರೆ, ಇದೀಗ ಮತ್ತೆ ಮಳೆಯ ಆ‘ರ್ಟ ಜೋರಾಗಿರುವುದರಿಂದ ತುಂಬಿ ಹರಿಯುತ್ತಿರುವ ಕಾವೇರಿಯಿಂದಾಗಿ ಸ್ಥಳೀಯರು ಆತಂಕದಲ್ಲಿದ್ದಾರೆ.
ಪ್ರವಾಸಿಗರಿಗೆ ನಿರ್ಬಂಧ ;
ಕಾವೇರಿ ನದಿ ಪಾತ್ರದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ನದಿಯಲ್ಲಿ ಯಾವುದೇ ಕ್ಷಣದಲ್ಲೂ ನೀರಿನ ಪ್ರಮಾಣ ಹೆಚ್ಚಾಗುವ ಸಾದ್ಯತೆ ಇದೆ. ಈಗಾಗಿ ಪ್ರವಾಸಿಗರು ಮಾತ್ರವಲ್ಲದೇ, ಸ್ಥಳೀಯರು ಕೂಡ ಯಾವುದೇ ಕಾರಣಕ್ಕೂ ನೀರಿನಲ್ಲಿ ಇಳಿಯದಂತೆ ತಾಲೂಕು ಆಡಳಿತ ಸೂಚನೆ ನೀಡಿದೆ.
ಇದಕ್ಕಾಗಿ ಸಂಗಮಕ್ಕೆ ಪ್ರವೇಶ ಪಡೆಯುವ ಬೆಂಡಗೋಡು ಚೆಕ್ ಪೋಸ್ಟ್ ಬಳಿಯೇ ಸೂಚನಾ ಲಕಗಳನ್ನು ಹಾಕಲಾಗಿದೆ. ಇನ್ನು ಫಿಶಿಂಗ್ ಕ್ಯಾಪ್ ಸಹ ಬಂದ್ ಮಾಡಲು ಮುಂದಾಗಿದ್ದಾರೆ.
ಕಾವೇರಿ ನದಿ ಪಾತ್ರದಲ್ಲಿಯೇ ಇರುವ ಕುಪ್ಪೇದೊಡ್ಡಿ, ಬೊಮ್ಮಸಂದ್ರ ಸೇರಿದಂತೆ ಸುತ್ತಲಿನ ಸುತ್ತಲಿನ ಗ್ರಾಮಗಳಿಂದ ಅಂದಾಜು 50 ಸಾವಿರ ಮಂದಿ ಜೀವನ ನಡೆಸುತ್ತಿದ್ದಾರೆ. ಒಂದು ವೇಳೆ ನದಿ ಪಾತ್ರದಲ್ಲಿ ನೀರಿನ ಹರಿವು ಹೆಚ್ಚಾದರೆ, ಇಷ್ಟು ಮಂದಿ ಸಹ ಸುರುಕ್ಷಿತ ಪ್ರದೇಶಗಳಿಗೆ ತೆರಳಬೇಕು. ಸಂಗಮ ಮುಳುಗಡೆ ಹಂತ ತಲುಪಿದರೆ, ಕುಪ್ಪೆದೊಡ್ಡಿ ಸಮೀಪ ಇರುವ ಅರಣ್ಯ ಇಲಾಖೆಯ ಐಬಿ ಹಾಗೂ ಕ್ಯಾಸಾಪುರದಲ್ಲಿನ ಚರ್ಚ್‌ಗೆ ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರ ಮಾಡಲು ತಾಲೂಕು ಆಡಳಿತ ಸಿದ್ದತೆ ಮಾಡಿಕೊಂಡಿದೆ. ಜೊತೆಗೆ ಕಾವೇರಿ ನೀರಾವರಿ ನಿಗಮವು ಸಹ ಸ್ಥಳೀಯರಿಗೆ ಎಚ್ಚರಿಕೆ ನೀಡಿದೆ. ಮುಂದಿನ‌ ದಿನಗಳಲ್ಲಿ ಮಳೆ‌ಕಡಿಮೆಯಾಗಿ ಪ್ರವಾಹದ ಬೀತಿ ಇಲ್ಲವಾಗಲಿ ಎಂದು ಸ್ಥಳೀಯರು ದೇವರಲ್ಲಿ ಮೊರೆಯಿಡುತ್ತಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.