ರಾಮನಗರ : ನನ್ನ ಕೊನೆಯ ಉಸಿರು ಇರುವವರೆಗೂ ರಾಮನಗರ ಜಿಲ್ಲೆ ಬಿಟ್ಟು ಹೋಗಲ್ಲ. ನಾನು ಅಂತಿಮವಾಗಿ ಭೂಮಿಗೆ ಹೋಗೋದು ಅದು ರಾಮನಗರದಲ್ಲೇ.. ರಾಮನಗರ ಜಿಲ್ಲೆ ಬಿಟ್ಟು ನಾನು ಹೊರಗೆ ಹೋಗುವುದಿಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಚನ್ನಪಟ್ಟಣದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಮಾತನಾಡಿದ ಅವರು, ನಾನು ಬೊಂಬೆನಗರಿ ಚನ್ನಪಟ್ಟಣ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಎಂದಿಗೂ ಬಿಡುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಕೆಲವರು ಸುಖಾಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ.
ಕ್ಷೇತ್ರ ಬಿಡುವುದಿದ್ದರೆ ನಾನು ಚನ್ನಪಟ್ಟಣದಲ್ಲಿ ಯಾಕೆ ಇಷ್ಟೊಂದು ಓಡಾಡುವ ಅವಶ್ಯಕತೆ ಇದೆ. ರಾಮನಗರ-ಚನ್ನಪಟ್ಟಣ ನನ್ನ ಎರಡು ಕಣ್ಣುಗಳು ಇದ್ದ ಹಾಗೆ. ಕಣ್ಣುಗಳು ಕಳೆದುಕೊಂಡರೆ ನಾನು ಕುರುಡಾಗುತ್ತೇನೆ. ಹಾಗಾಗಿ, ಚನ್ನಪಟ್ಟಣ ಕ್ಷೇತ್ರ ಬಿಡುವ ಪ್ರಶ್ನೆಯೇ ಇಲ್ಲ ಎಂದರು.
ಇದನ್ನೂ ಓದಿ: ವಿಧಾನಸೌಧದತ್ತ ತಲೆ ಹಾಕುತ್ತಿಲ್ಲ: ಖಾತೆಗಳಿಗಾಗಿ ಜವಾಬ್ದಾರಿ ಮರೆತರಾ ನೂತನ ಸಚಿವರು?
ನಾನು ಸಾಯುವುದರೊಳಗೆ ರಾಮನಗರ-ಚನ್ನಪಟ್ಟಣವನ್ನ ಅವಳಿ ನಗರ ಮಾಡುತ್ತೇನೆ. ಹುಬ್ಬಳ್ಳಿ-ಧಾರವಾಡದ ರೀತಿ ನಗರ ಪಾಲಿಕೆಯಾಗಿ ಮಾಡುವುದಾಗಿ ಘೋಷಣೆ ಮಾಡಿದರು. ರೈತರ ವಿರುದ್ಧ ಲಘುವಾಗಿ ಮಾತನಾಡಿದ ಕೃಷಿ ಸಚಿವ ಬಿ ಸಿ ಪಾಟೀಲ್ ವಿರುದ್ಧ ಇದೇ ವೇಳೆ ವಾಗ್ದಾಳಿ ನಡೆಸಿದರು.