ETV Bharat / state

ಜಮೀರ್ ಹೇಳಿಕೆ ದೊಡ್ಡದು ಮಾಡುವ ಅವಶ್ಯಕತೆ ಇಲ್ಲ: ಹೆಚ್​ಡಿಕೆ

ಜಮೀರ್ ಹೇಳಿಕೆಯನ್ನ ದೊಡ್ಡದು ಮಾಡುವ ಅವಶ್ಯಕತೆ ಇಲ್ಲ. ಮುಂದಿನ ದಿನಗಳಲ್ಲಿ ಕಾಲವೇ ಉತ್ತರ ನೀಡಲಿದೆ ಎಂದು ಮಾಜಿ ಸಿಎಂ ಹೆಚ್​. ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಹೆಚ್​ಡಿಕೆ
ಹೆಚ್​ಡಿಕೆ
author img

By

Published : Jul 26, 2022, 8:36 PM IST

ರಾಮನಗರ: ಜಮೀರ್ ವಿರುದ್ಧ ಒಕ್ಕಲಿಗರ ಆಕ್ರೋಶ ವಿಚಾರಕ್ಕೆ ಸಂಬಂಧಿಸಿದಂತೆ ಜನ ತೀರ್ಮಾನ ಮಾಡುತ್ತಾರೆ. ಅದಕ್ಕೆ ತಲೆ‌ ಕೆಡಿಸಿಕೊಳ್ಳಬೇಡಿ,
ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತೆ. ಅವರ ಬಗ್ಗೆ ಚರ್ಚೆ ಬೇಡ ಎಂದು ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ‌ತಿಳಿಸಿದರು.

ರಾಮನಗರ ತಾಲೂಕಿನ ‌ಕೂಟಗಲ್ ಗ್ರಾಮದಲ್ಲಿ ಮಾತನಾಡಿದ ಅವರು, ಜಮೀರ್ ಹೇಳಿಕೆಯನ್ನ ದೊಡ್ಡದು ಮಾಡುವ ಅವಶ್ಯಕತೆ ಇಲ್ಲ. ಮುಂದಿನ ದಿನಗಳಲ್ಲಿ ಕಾಲವೇ ಉತ್ತರ ನೀಡಲಿದೆ. ಹಾಗೆಯೇ, ಡಿ. ಕೆ ಶಿವಕುಮಾರ್ ಸಿಎಂ ಆದರೆ ನನ್ನದೇನೂ ತಕರಾರು ಇಲ್ಲ ಎಂದು ಜೆಡಿಎಸ್ ನಾಯಕ ವಿಶ್ವನಾಥ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಯಾರ ಬಗ್ಗೆ ಒಲವು ತೋರಿಸುವುದು ಅವರಿಗೆ ಸೇರಿದ್ದು, ಅದರ ಬಗ್ಗೆ ಬಹಳ ಮಹತ್ವ ಕೊಡುವುದು ಬೇಡ. ಇತ್ತೀಚಿಗೆ ಡಿಕೆ ಶಿವಕುಮಾರ್ ಮೇಲೆ ಪ್ರೀತಿ, ಮೋಹ ಬಂದಿರಬಹುದು ಎಂದರು.

ಮಾಜಿ ಸಿಎಂ ಹೆಚ್​. ಡಿ ಕುಮಾರಸ್ವಾಮಿ ಮಾತನಾಡಿದರು.

ಹಾಗೆಯೇ, ಇಡಿಯಿಂದ ಸೋನಿಯಾಗಾಂಧಿ ವಿಚಾರಣೆ ವಿಚಾರವಾಗಿ ಮಾತನಾಡಿದ ಅವರು, ಇದೇ ವಿಚಾರವಾಗಿ ಕಾಂಗ್ರೆಸ್​​​ನವರು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿ ಸರ್ಕಾರ ವಿರೋಧಿಗಳನ್ನ ಮಟ್ಟ ಹಾಕಲು ಕೆಲವು ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ. ಆದರೆ, ಇಂತಹ ವಿಚಾರದಲ್ಲಿ ರಸ್ತೆಗೆ ಇಳಿದು ಜನರಿಗೆ ತೊಂದರೆ ಕೊಡುವುದು ಅನವಶ್ಯಕವಾಗಿದೆ ಎಂದರು.

ನಾಯಕರು ಅರ್ಥ ಮಾಡಿಕೊಳ್ಳಬೇಕು : ಬಿಜೆಪಿ ಸರ್ಕಾರ ಜನರಿಗೆ ಎರಡು ಹೊತ್ತು ಗೌರವಯುತವಾಗಿ ಬದುಕುವ ಶಕ್ತಿ ತುಂಬಲಿಲ್ಲ. ಇದರ ಬಗ್ಗೆ ಗಮನಕೊಡಲಿಲ್ಲ. ಆದರೆ‌, ಅವರಿಗೆ ಹತ್ತಿರದವರಿಗೆ ದಿನಕ್ಕೆ 1300 ಕೋಟಿ ಆದಾಯ ಸಂಪಾದಿಸುವ ಶಕ್ತಿ ತುಂಬಿದ್ದಾರೆ. ಈ ರೀತಿಯ ವಿಚಾರಗಳಿಗೆ ದಾಖಲೆ ಇಟ್ಟುಕೊಂಡು ಕಾಂಗ್ರೆಸ್ ಹೋರಾಟ ಮಾಡಬೇಕು. ಅದನ್ನು ಬಿಟ್ಟು ನಿತ್ಯ ಹೋರಾಟ ಮಾಡುವುದರಿಂದ ಜನಸಾಮಾನ್ಯರಿಗೆ ಆಗುವ ಸಮಸ್ಯೆ ಬಗ್ಗೆ ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಜಿಟಿಡಿ ಪರ ಬ್ಯಾಟ್: ಹಾಗೆಯೇ ಸಾ. ರಾ ಮಹೇಶ್ ಹಾಗೂ ಜಿ. ಟಿ‌ ದೇವೇಗೌಡ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಅವರೆನೂ‌ ನಮಗೆ ಶತ್ರುಗಳು ಅಲ್ಲ. ನಾವೆಲ್ಲ ಒಂದೇ ಕುಟುಂಬದವರು. ನಿನ್ನೆ ಭೇಟಿ ಆಗಿರುವುದು ಒಳ್ಳೆಯ ಬೆಳವಣಿಗೆ ಅಲ್ಲವೇ. ಜೆಡಿಎಸ್ ಮುಗಿಸೇ ಬಿಡುತ್ತೇವೆ ಎನ್ನುವವರಿಗೆ ಇದು ಉತ್ತರ ಕೊಟ್ಟಿದೆ ಎಂದು ಪರೋಕ್ಷವಾಗಿ ಜಿಟಿಡಿ ಪರ ಬ್ಯಾಟ್ ಬೀಸಿದರು.

ನಾನು ಏನೂ ಕೆಲಸ ಮಾಡಿಲ್ಲ: ಇನ್ನು ಚನ್ನಪಟ್ಟಣದಲ್ಲಿ ಬೊಂಬೆನಾಡೋತ್ಸವ ವಿಚಾರವಾಗಿ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಕಾರ್ಯಕ್ರಮ ಮಾಡಲಿ ತೊಂದರೆ ಇಲ್ಲ. ಅದು ಅವರ ಕಾರ್ಯಕ್ರಮವಾಗಿದೆ. ಬೊಂಬೆನಾಡು ಎಂಬ ಹೆಸರನ್ನ ನಾಡಿಗೆ ಪ್ರಚಾರ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಅದು ಒಳ್ಳೆಯ ಕಾರ್ಯಕ್ರಮವಾಗಿದೆ. ನಾನು ಏನು ಕೆಲಸ ಮಾಡಿಲ್ಲ. ಎಲ್ಲ ಯೋಗೇಶ್ವರ್ ಅವರೇ ಮಾಡಿ ಮುಗಿಸಿದ್ದಾರೆ.

ನಾನೇಕೆ ವಿರೋಧ ಮಾಡಲಿ: ನಾನು ಈಗ ಮಾಡಲು ಏನೂ ಕೆಲಸವಿಲ್ಲ. ಅವರೇ ಎಲ್ಲ ಮುಗಿಸಿದ್ದಾರೆ. ಹೀಗಾಗಿ, ನಾನು ಏನು ಮಾಡಲು ಆಗುತ್ತಿಲ್ಲ. ಬೊಂಬೆನಾಡು ಉತ್ಸವ ಮಾಡುವುದರಿಂದ ನನಗೂ ಗೌರವವಿದೆ. ಅಂತಹ ಕ್ಷೇತ್ರ ಪ್ರತಿನಿಧಿಸುತ್ತಿದ್ದೇನೆ. ಇದಕ್ಕೆ ನಾನೇಕೆ ವಿರೋಧ ಮಾಡಲಿ ಎಂದು‌ ಇದೇ ವೇಳೆ ತಿಳಿಸಿದರು.

ಓದಿ: ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ, ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷ: ಜನರಿಗೆ ಸಿಗಲಿದೆಯಾ ಬಂಪರ್ ಕೊಡುಗೆ!?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.