ETV Bharat / state

ಕರ್ನಾಟಕ ಬಂದ್​ನಿಂದ ಯಾರಿಗೆ ಅನಾನುಕೂಲ: ಹೆಚ್​ಡಿಕೆ ಪ್ರಶ್ನೆ - ಕರ್ನಾಟಕ ಬಂದ್​ಗೆ ಹೆಚ್​ ಡಿ ಕುಮಾರಸ್ವಾಮಿ ವಿರೋಧ

ಎಂಇಎಸ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಕರೆ ಕೊಟ್ಟಿರುವ ಕರ್ನಾಟಕ ಬಂದ್​ನಿಂದ ಯಾರಿಗೆ ಅನುಕೂಲವಾಗಲಿದೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಕರ್ನಾಟಕ ಬಂದ್​ಗೆ ಹೆಚ್​ ಡಿ ಕುಮಾರಸ್ವಾಮಿ ವಿರೋಧ,HD Kumaraswamy opposes Karnataka Bandha
ಕರ್ನಾಟಕ ಬಂದ್​ಗೆ ಹೆಚ್​ ಡಿ ಕುಮಾರಸ್ವಾಮಿ ವಿರೋಧ
author img

By

Published : Dec 25, 2021, 7:41 PM IST

ರಾಮನಗರ: ಕರ್ನಾಟಕ ಬಂದ್ ಮಾಡುವುದರಿಂದ ಏನು ಪ್ರಯೋಜನವಾಗಲಿದೆ. ಇದರಿಂದ ಯಾರಿಗೆ ಅನುಕೂಲ, ಅನಾನುಕೂಲ ಆಗಲಿದೆ ಅನ್ನೋ ಪ್ರಶ್ನೆ ಉದ್ಭವಿಸಿದೆ ಎಂದು ಚನ್ನಪಟ್ಟಣದ ಬೇವೂರಿನಲ್ಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ನಮ್ಮ ರಾಜ್ಯದಲ್ಲಿ ಬಂದ್​ಗೆ ಕರೆ ನೀಡಿದ್ದಾರೆ. ಇದರಿಂದ ಮಹಾರಾಷ್ಟ್ರಕ್ಕೆ ತೊಂದರೆ ಇಲ್ಲ. ಸಮಸ್ಯೆ ಆಗೋದು ಕನ್ನಡಿಗರಿಗೆ ಅಲ್ಲವೇ? ಎಂಇಎಸ್ ಸೇರಿದಂತೆ ಕಿಡಿಗೇಡಿಗಳ ಕ್ರಮಕ್ಕೆ ಕಾನೂನು ವ್ಯಾಪ್ತಿಯಲ್ಲಿ ಕ್ರಮಕ್ಕೆ ಸರ್ಕಾರ ಮುಂದಾಗಬೇಕೆಂದು ಅಭಿಪ್ರಾಯಪಟ್ಟರು.

ಎಂಇಎಸ್ ಕಠಿಣವಾದ ಕ್ರಮ ತೆಗೆದುಕೊಳ್ಳುವುದು ಸರ್ಕಾರದ ಜವಾಬ್ದಾರಿ‌. ಬಂದ್ ಘೋಷಣೆಯಿಂದ ನಮ್ಮವರಿಗೆ ತೊಂದರೆಯಾಗಲಿದೆ. ಬಂದ್​​ನಿಂದ ರಾಜ್ಯದ ಜನರಿಗೆ ನಷ್ಟವಾಗಲಿದೆ. ಸಣ್ಣಪುಟ್ಟ ವ್ಯಾಪಾರಿಗಳಿಗೆ, ಕೂಲಿ ಕೆಲಸದವರಿಗೆ ಆಗುವ ಪರಿಣಾಮದ ಬಗ್ಗೆ ಬಂದ್ ಕರೆ ನೀಡಿದವರು ಯೋಚಿಸಬೇಕು ಎಂದು ಮಾರ್ಮಿಕವಾಗಿ‌ ನುಡಿದರು.

(ಇದನ್ನೂ ಓದಿ: ಯಾರ ಬಳಿ ಗೋಡಾ ಹೈ, ಮೈದಾನ ಹೈ ಅವರು ಮತ್ತೊಮ್ಮೆ ಅಧಿಕಾರಕ್ಕೆ ಬರ್ತಾರೆ.. ಸಿಎಂ ಬೊಮ್ಮಾಯಿ)

ಬಂದ್​​ನಿಂದ ಕನ್ನಡಿಗರಿಗೆ ಅನಾನುಕೂಲವಾಗಲಿದೆ. ಹೋರಾಟಗಾರರು ಸರ್ಕಾರದ ಮೇಲೆ ಒತ್ತಡ ಹೇರಬೇಕು. ನಿಖಿಲ್ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಬಂದ್​​ನಿಂದ ಏನು ಪ್ರಯೋಜನ ಎಂದು ಪ್ರಶ್ನೆ ಮಾಡಿದ್ದಾರೆ ಎಂದು ಹೇಳಿದರು.

ಕಲಾಪ ವ್ಯರ್ಥ ಮಾಡಿದ್ದಾರೆ:
ಬೆಳಗಾವಿ ವಿಧಾನಸಭಾ ಕಲಾಪದ ಬಗ್ಗೆ ಪ್ರತಿಕ್ರಿಸಿದ ಕುಮಾರಸ್ವಾಮಿ, ಬೆಳಗಾವಿಯಲ್ಲಿ ನಡೆದ ಸದನ ಕಲಾಪವನ್ನ ಸಂಪೂರ್ಣ ವ್ಯರ್ಥ ಮಾಡಿದ್ದಾರೆ. ಮೊದಲ 5 ದಿನ ಸಂಪೂರ್ಣ ವ್ಯರ್ಥವಾಗಿದೆ ಎಂದರು.

ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿಲ್ಲ. ಉತ್ತರ ಕರ್ನಾಟಕ ಸಮಸ್ಯೆ ಬಗ್ಗೆಯೂ ಚರ್ಚೆ ಮಾಡಿಲ್ಲ. ಸಂಡೂರು ತಹಸೀಲ್ದಾರ್, ಬೈರತಿ ಬಸವರಾಜ್ ಬಗ್ಗೆ ವೃಥಾ ಚರ್ಚೆ ನಡೆಸಿದ್ದಾರೆ ಎಂದು ಆರೋಪಿಸಿದ ಅವರು, ಯಾವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿತ್ತೋ ಅದಕ್ಕೆ ಪ್ರಾರಂಭಿಕ ಹಂತದಲ್ಲಿ ನೀಡಿಲ್ಲ. ಕೊನೆ ಎರಡು ದಿನವೆಂದು ಆಗ ಕೂಡ ಸರಿಯಾದ ಚರ್ಚೆ ನಡೆಯಲಿಲ್ಲ ಎಂದು ಬೇಸರ ಹೊರ ಹಾಕಿದರು.

(ಇದನ್ನೂ ಓದಿ: Vajpayee birth anniversary: ವಿದ್ಯಾರ್ಥಿಗಳಿಗೆ ಒಂದು ಲಕ್ಷ ಮೊಬೈಲ್, ಟ್ಯಾಬ್ ಉಡುಗೊರೆ ನೀಡಿದ ಯುಪಿ ಸಿಎಂ)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.