ರಾಮನಗರ: 25 ಸಾವಿರ ಕೋಟಿ ರೈತರ ಸಾಲ ಮನ್ನ ಕುರಿತು ನೀಡಿದ ಭರವಸೆ ಈಡೇರಿಸಿದ್ದೇನೆ. ಇನ್ನೂ ಸ್ವಲ್ಪ ದಿನ ಬಿಟ್ಟಿದ್ದರೆ ಜನರಿಗೆ ಅನುಕೂಲವಾಗುತ್ತಿತ್ತು. ಈ ಸರ್ಕಾರ ತೆಗೆದವರು ಯಾರು. ನಾನು ನೀಡಿದ್ದ ರೈತರ ಸಾಲ ಮನ್ನಾದ ಹಣ ಡೈವರ್ಟ್ ಮಾಡಿದ್ದಾರೆ. ಇದಲ್ವ ಇವರು ಮಾಡಿದ ಕೆಲಸ. ರೈತಪರ ಸರ್ಕಾರ ತೆಗೆಯಲಿಕ್ಕೆ ಕಾರಣ ಯಾರು ಎಂದು ಹೆಚ್ ಡಿ ಕುಮಾರಸ್ವಾಮಿ ಸಿ ಪಿ ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಸಿ ಪಿ ಯೋಗೇಶ್ವರ್ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದು, ನಾನು ಈ ಕ್ಷೇತ್ರದ ಶಾಸಕನಾದ ಮೇಲೆ ಮುಖ್ಯಮಂತ್ರಿ ಆದೆ. ಸಿಎಂ ಆದ ನಂತರ ಏನು ಕೆಲಸ ಮಾಡಬೇಕೋ ಮಾಡಿದ್ದೇನೆ. ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡುತ್ತೇನೆ ಎಂದು ನಾನು ಎಲ್ಲೂ ಪ್ರಣಾಳಿಕೆಯಲ್ಲಿ ಹೇಳಿರಲಿಲ್ಲ. ಸಿಪಿವೈಗೆ ಏನಾದರೂ ತಲೆ ಕೆಟ್ಟಿದೆಯಾ. ಅಂತ ತಲೆಕೆಟ್ಟ ಹೇಳಿಕೆ ನೀಡುವವರಿಗೆ ನಾನು ಉತ್ತರ ಕೊಡುವುದಿಲ್ಲ ಎಂದು ಹೇಳಿದರು.
ಕೊಡಗಿನಲ್ಲಿ 144 ಜಾರಿ ವಿಚಾರ : ಇವರು ಮೊಟ್ಟೆ ಕಥೆ ಇಟ್ಟುಕೊಂಡು ಹೋಗದಿದ್ರೆ 144 ಸೆಕ್ಷನ್ ಜಾರಿಯಾಗುತ್ತಿರಲಿಲ್ಲ. 4 ದಿನ 144 ಸೆಕ್ಷನ್ನಿಂದ ಯಾರಿಗೆ ಲಾಭ ಯಾರಿಗೆ ನಷ್ಟ. ಬಡ ವ್ಯಾಪಾರಿಗಳ ದಿನಗೂಲಿ ಮಾಡುವವರ ಪರಿಸ್ಥಿತಿ ಏನಾಗಬೇಕು. ಪಾದಯಾತ್ರೆ ಯಾತಕ್ಕಾಗಿ ಮಾಡಬೇಕು, ಮೇಕೆದಾಟು ಪಾದಯಾತ್ರೆಯಿಂದ ಅಣೆಕಟ್ಟು ನಿರ್ಮಾಣ ಮಾಡೇ ಬಿಟ್ಟರು ಎಂದು ವ್ಯಂಗ್ಯವಾಡಿದರು.
ಸಾವರ್ಕರ್ ರಥಯಾತ್ರೆ ಯಾಕೆ ಬೇಕು : ಯಾರೋ ವೀರ ಸಾವರ್ಕರ್ ಫೋಟೊ ವಿವಾದ, ಮಾಂಸಾಹಾರ ವಿವಾದ ಬಿಟ್ಟು ಬೇರೆ ಇವರಿಗೆ ಬೇಡ. ರಾಜ್ಯದ ಸಮಸ್ಯೆಗಳ ಬಗ್ಗೆ ಯಾರೂ ಮತನಾಡುವುದಿಲ್ಲ. ಜನರ ಸಮಸ್ಯೆಗಳ ಏನು, ನೀರಾವರಿ ವಿಷಯದಲ್ಲಿ ಏನು ಕೆಲಸಗಳು ನಡೆದಿವೆ. ಈ ವಿಷಯ ಇಟ್ಟುಕೊಂಡು ರಥಯಾತ್ರೆ ಮಾಡಿದ್ದರೆ ನಾನೇ ಅವರನ್ನು ಅಭಿನಂದಿಸುತ್ತಿದ್ದೆ ಎಂದು ಹೇಳಿದರು.
ಇದನ್ನೂ ಓದಿ : ಕ್ಷುಲ್ಲಕವಾಗಿ ಮಾತನಾಡಿದರೆ ಬೀದಿಯಲ್ಲಿ ನಿಲ್ಲಿಸಿ ಕೇಳಬೇಕಾಗುತ್ತದೆ: ಹೆಚ್‌ಡಿಕೆ ವಿರುದ್ಧ ಸಿಪಿವೈ ಗರಂ