ETV Bharat / state

ಗೌಡಗೆರೆ ಚಾಮುಂಡೇಶ್ವರಿ ಬಸವಪ್ಪನ ಗಣಾರಾಧನೆ ಮತ್ತು ನೂತನ ಬಸವಪ್ಪನವರ ಗಣಾರಾಧನೆ - gowdagere chamundeshwari basavappa temple

ಈ ಬಸವಪ್ಪನಿಗೆ ಸಕಲ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಕ್ಷೇತ್ರಪಾಲಕನಾಗಿ ಪಟ್ಟಾಭಿಷೇಕ ಮಾಡುವ ಕಾರ್ಯಕ್ರಮ ವೈಭವವಾಗಿ ಜರುಗಿತು. ಶಿವೈಕ್ಯ ಬಸವಪ್ಪನ ಮಂಟಪದ ಮುಂಭಾಗ ನೂತನ ಬಸವಪ್ಪನಿಗೆ ಕ್ಷೀರ, ಅರಿಶಿನ, ಕುಂಕುಮ, ಗಂಧ, ಪುಷ್ಪಾ, ವಿಭೂತಿ ಸೇರಿ ಹಲವು ಅಭಿಷೇಕಗಳನ್ನು ಇದೇ ವೇಳೆ ನಡೆಸಲಾಯಿತು..

gowdagere-chamundeshwari-basavappa-temple-festival-at-ramanagara
ಗೌಡಗೆರೆ ಚಾಮುಂಡೇಶ್ವರಿ ಬಸವಪ್ಪನ ಗಣಾರಾಧನೆ ಮತ್ತು ನೂತನ ಬಸವಪ್ಪನವರ ಗಣಾರಾಧನೆ
author img

By

Published : Mar 19, 2022, 3:51 PM IST

Updated : Mar 19, 2022, 4:54 PM IST

ರಾಮನಗರ : ಬೊಂಬೆನಗರಿ ಚನ್ನಪಟ್ಟಣ ಕ್ಷೇತ್ರದ ಐತಿಹಾಸಿಕ ಗೌಡಗೆರೆ ಗ್ರಾಮದ ಚಾಮುಂಡೇಶ್ವರಿ ಬಸವಪ್ಪನ ಪುಣ್ಯಕ್ಷೇತ್ರದಲ್ಲಿ ಶಿವೈಕ್ಯವಾಗಿದ್ದ ಪವಾಡ ಬಸವಪ್ಪರವರ ಗಣಾರಾಧನೆ ಹಾಗೂ ನೂತನ ಬಸವಪ್ಪನವರ ಪಟ್ಟಾಭಿಷೇಕ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.

ಶ್ರೀಕ್ಷೇತ್ರದಲ್ಲಿ ನೆಲೆಸಿದ್ದ ಪವಾಡ ಬಸವಪ್ಪ ಕಳೆದ ಮಾ. 6ರಂದು ಶಿವೈಕ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜಿ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಗೌಡಗೆರೆ ಚಾಮುಂಡೇಶ್ವರಿ ಬಸವಪ್ಪನ ಗಣಾರಾಧನೆ ಮತ್ತು ನೂತನ ಬಸವಪ್ಪನವರ ಗಣಾರಾಧನೆ ಕಾರ್ಯಕ್ರಮ

ಈ ನಿಮಿತ್ತ ದೇಗುಲದ ಆವರಣದಲ್ಲಿ ಹೋಮ ಹಾಗೂ ಹವನಗಳನ್ನು ನಡೆಸಲಾಯಿತು. ನಂತರ ನೂತನ ಬಸಪ್ಪನಿಗೆ ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ಪಟ್ಟಾಭಿಷೇಕವನ್ನು ನಡೆಸಲಾಯಿತು. ಬೆಂಗಳೂರಿನ ವರ್ತೂರು ಸಂತೋಷ್‍ರವರ ಮನೆಯಿಂದ ತಂದಿರುವ ಹಳ್ಳಿಕಾರ್ ತಳಿಯ ಕರುವನ್ನು ಮುಂದಿನ ಕ್ಷೇತ್ರಪಾಲಕರಾಗಿ ಆಯ್ಕೆ ಮಾಡಲಾಗಿದೆ.

ಈ ಬಸವಪ್ಪನಿಗೆ ಸಕಲ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಕ್ಷೇತ್ರಪಾಲಕನಾಗಿ ಪಟ್ಟಾಭಿಷೇಕ ಮಾಡುವ ಕಾರ್ಯಕ್ರಮ ವೈಭವವಾಗಿ ಜರುಗಿತು. ಶಿವೈಕ್ಯ ಬಸವಪ್ಪನ ಮಂಟಪದ ಮುಂಭಾಗ ನೂತನ ಬಸವಪ್ಪನಿಗೆ ಕ್ಷೀರ, ಅರಿಶಿನ, ಕುಂಕುಮ, ಗಂಧ, ಪುಷ್ಪಾ, ವಿಭೂತಿ ಸೇರಿ ಹಲವು ಅಭಿಷೇಕಗಳನ್ನು ಇದೇ ವೇಳೆ ನಡೆಸಲಾಯಿತು.

ಈ ಬಸವಪ್ಪನಿಗೆ ಪುಷ್ಪ ಮುದ್ರೆ ಹಾಕಿ, ಬೆಳ್ಳಿ ಆಭರಣಗಳಿಂದ ಅಲಂಕಾರ ಮಾಡಿ ದೇವಾಲಯದ ಸುತ್ತ ಮೆರವಣಿಗೆ ಮಾಡಲಾಯಿತು. ಬಂದ ಭಕ್ತರಿಗೆ ಅನ್ನ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಓದಿ : ಮಕ್ಕಳಿಗೆ ಲಸಿಕೆ ಹಾಕಿಸಲು ಪೋಷಕರ ಹಿಂದೇಟು? ಮೂರು ದಿನದಲ್ಲಿ ರಾಜ್ಯದಲ್ಲಿ ನೀಡಿದ ಡೋಸ್​ ಎಷ್ಟು ಗೊತ್ತಾ?

Last Updated : Mar 19, 2022, 4:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.