ETV Bharat / state

ರಾಮನಗರದಲ್ಲಿ 'ಹೈಟೆಕ್ ರೇಷ್ಮೆ ಮಾರುಕಟ್ಟೆ' ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ - 75 ಕೋಟಿ ರೂ.ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆ

ರಾಮನಗರದಲ್ಲಿ ಹೈಟೆಕ್ 'ರೇಷ್ಮೆ ಮಾರುಕಟ್ಟೆ' ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಹಿನ್ನೆಲೆ 10 ದಿನದೊಳಗೆ ಟೆಂಡರ್ ಕರೆದು, ಆದಷ್ಟು ಬೇಗ ಶಂಕುಸ್ಥಾಪನೆ ನೆರವೇರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ರೇಷ್ಮೆ ಸಚಿವ ಡಾ.ನಾರಾಯಣಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

high tech Silk Cocoon Market in Ramanagar
ರಾಮನಗರದಲ್ಲಿ 'ಹೈಟೆಕ್ ರೇಷ್ಮೆ ಮಾರುಕಟ್ಟೆ' ನಿರ್ಮಾಣ
author img

By

Published : Feb 4, 2022, 10:34 AM IST

ರಾಮನಗರ: ಜಿಲ್ಲೆಯಲ್ಲಿ ಅತ್ಯಾಧುನಿಕ ಹೈಟೆಕ್ 'ರೇಷ್ಮೆ ಮಾರುಕಟ್ಟೆ' ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಮನಗರ - ಚನ್ನಪಟ್ಟಣ ಅವಳಿ ನಗರದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಿಸಲು ನಿರ್ಧರಿಸಲಾಗಿದ್ದು, ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು. ಇದೀಗ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲೇ ಮೊದಲ ಬಾರಿಗೆ 'ಇಂಟ್ರಾ ಆಪರೇಟಿವ್ ರೇಡಿಯೋ ಥೆರಪಿ': ಕೇವಲ 30 ನಿಮಿಷದಲ್ಲಿ ಚಿಕಿತ್ಸೆ

10 ದಿನದೊಳಗೆ ಟೆಂಡರ್ ಆಹ್ವಾನ: ರಾಮನಗರ ಮಾರುಕಟ್ಟೆಗೆ ಪ್ರತಿದಿನ 40 - 50 ಟನ್ ರೇಷ್ಮೆಗೂಡು ಬರುತ್ತಿದ್ದು, ಹೈಟೆಕ್ ಮಾರುಕಟ್ಟೆ ನಿರ್ಮಾಣವಾದ ಬಳಿಕ 100-150 ಟನ್‌ನಷ್ಟು ರೇಷ್ಮೆಗೂಡು ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ. ಹಾಗಾಗಿ 10 ದಿನದೊಳಗೆ ಟೆಂಡರ್ ಕರೆದು, ಆದಷ್ಟು ಬೇಗ ಶಂಕುಸ್ಥಾಪನೆ ನೆರವೇರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ರೇಷ್ಮೆ ಸಚಿವ ಡಾ.ನಾರಾಯಣಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಚನ್ನಪಟ್ಟಣದ ಸರ್ಕಾರಿ ರೇಷ್ಮೆ ತರಬೇತಿ ಸಂಸ್ಥೆಯ 20 ಎಕರೆ ಜಾಗದಲ್ಲಿ 75 ಕೋಟಿ ರೂ.ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆ ನಿರ್ಮಿಸಲು ನಿರ್ಧರಿಸಲಾಗಿದೆ. ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ನಬಾರ್ಡ್‌ನಿಂದ ಆರ್ಥಿಕ ನೆರವು ದೊರೆತಿದ್ದು, 75 ಕೋಟಿ ರೂ. ಬಿಡುಗಡೆಯಾಗಿದೆ.

ಹೈಟೆಕ್ ರೇಷ್ಮೆ ಮಾರುಕಟ್ಟೆಯಲ್ಲಿ ಏನೇನು ಇರಲಿದೆ?:

  1. ಆಧುನಿಕ ಪ್ರವೇಶ ದ್ವಾರ
  2. ಗಣಕೀಕೃತ ರೇಷ್ಮೆಗೂಡು ಹರಾಜು ಸಭಾಂಗಣ
  3. ಕೋರ್ ಕಟ್ಟಡ
  4. ಶೌಚಾಲಯ ಬ್ಲಾಕ್
  5. ಅಗ್ನಿಶಾಮಕ ನಿಯಂತ್ರಣ ಕೊಠಡಿ
  6. ವಿದ್ಯುತ್ ಕೊಠಡಿ
  7. ಪೊಲೀಸ್ ಚೌಕಿ
  8. ನೀರು ಶೇಖರಣಾ ತೊಟ್ಟಿ
  9. ಒಳಚರಂಡಿ ಸಂಸ್ಕರಣಾ ಘಟಕ
  10. ಕಾಂಪೌಂಡ್
  11. ಸೋಲಾರ್ ವ್ಯವಸ್ಥೆ
  12. ಸಿಸಿಟಿವಿ
  13. ವಿದ್ಯುದೀಕರಣ ವ್ಯವಸ್ಥೆ
  14. ಹವಾ ನಿಯಂತ್ರಣ ವ್ಯವಸ್ಥೆ
  15. ಆಂತರಿಕ ರಸ್ತೆಗಳು
  16. ಜನರೇಟರ್ ವ್ಯವಸ್ಥೆ

ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ಹೆಚ್ಚಿನ ಸ್ಥಳಾವಕಾಶದ ಜತೆಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುವುದರಿಂದ ಮಾರುಕಟ್ಟೆ ಧಾರಣೆ ಹೆಚ್ಚಾಗುವ ಸಂಭವವಿರುತ್ತದೆ. ಜತೆಗೆ ಏಷ್ಯಾದಲ್ಲೇ ಇದೊಂದು ಮಹತ್ವದ ಮಾರುಕಟ್ಟೆಯಾಗಿ ಪರಿವರ್ತನೆ ಹೊಂದಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.