ETV Bharat / state

ಭಾರೀ ಮಳೆಯಿಂದಾಗಿ ತತ್ತರಿಸಿದ ಜನರು.. ಬಡಾವಣೆಗಳೆಲ್ಲ ಸಂಪೂರ್ಣ ಜಲಾವೃತ - ಎಪಿಎಂಸಿ ಮಾರುಕಟ್ಟೆ

ಎಪಿಎಂಸಿ ಮಾರುಕಟ್ಟೆ ಪಕ್ಕದಲ್ಲಿರುವ 22 ನೇ ವಾರ್ಡ್ ಮಳೆ ನೀರಿನಿಂದ ತುಂಬಿತ್ತು. ಬೆಂಗಳೂರು-ಮೈಸೂರು ಹೆದ್ದಾರಿಯ ಪಕ್ಕದಲ್ಲೇ ಇರುವ ಈ ಬಡಾವಣೆಯಲ್ಲಿ ಎಪಿಎಂಸಿ ಮಾರುಕಟ್ಟೆಯಲ್ಲಿ ಕೂಲಿಮಾಡಿ ಬದುಕುವ ಜನರೇ ಇದ್ದಾರೆ. ತಮಗೆ ಮೂಲಭೂತ ಸೌಕರ್ಯ ಒದಗಿಸಬೇಕೆಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಬಡಾವಣೆ ಸಂಪೂರ್ಣ ಜಲಾವೃತ
author img

By

Published : Sep 24, 2019, 6:24 PM IST

ರಾಮನಗರ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ ಅಸ್ಥವ್ಯಸ್ತವಾಗಿದೆ. ರಾಮನಗರ ಜಿಲ್ಲೆಯಲ್ಲಿ ತಡರಾತ್ರಿ ವರುಣನ ಅಬ್ಬರ ಜೋರಾಗಿಯೇ ಇತ್ತು. ವರುಣನ ಅಬ್ಬರದಿಂದ ಮನೆಗಳೆಲ್ಲ ಸ್ವಿಮಿಂಗ್‌ಫೂಲ್‌ಗಳಂತಾಗಿ, ತಮ್ಮ ಮನೆಗಳಲ್ಲಿ ತುಂಬಿರುವ ನೀರನ್ನ ಹೊರಹಾಕುವಲ್ಲಿ ಜನರು ಹೈರಾಣಾದರು.

ಚನ್ನಪಟ್ಟಣ ನಗರದ ಎಪಿಎಂಸಿ ಮಾರುಕಟ್ಟೆ ಪಕ್ಕದಲ್ಲಿರುವ 22ನೇ ವಾರ್ಡ್‌ನಲ್ಲಿ ಮಳೆ ನೀರಿನಿಂದ ತುಂಬಿತ್ತು. ಬೆಂಗಳೂರು-ಮೈಸೂರು ಹೆದ್ದಾರಿಯ ಪಕ್ಕದಲ್ಲೇ ಇರುವ ಈ ಬಡಾವಣೆಯಲ್ಲಿ ಎಪಿಎಂಸಿ ಮಾರುಕಟ್ಟೆಯಲ್ಲಿ ಕೂಲಿ ಮಾಡಿ ಬದುಕುವ ಜನರೇ ಇದ್ದಾರೆ. 18 ವರ್ಷದಿಂದ ಈ ಬಡಾವಣೆಯಲ್ಲಿ ಜನರು ವಾಸ ಮಾಡುತ್ತಿದ್ದು, ಇಲ್ಲಿ ಯಾವುದೇ ಮೂಲಸೌಕರ್ಯ ಇಲ್ಲ.

ಮಳೆ ನೀರಿನಿಂದ 22ನೇ ವಾರ್ಡ್ ಭರ್ತಿ..

ಮಳೆ ಬಂದರೆ ಪಕ್ಕದ ಹನುಮಂತನಗರ, ಟಿಪ್ಪುನಗರ, ಮಕ್ಕಾನ್ ಬಡಾವಣೆ ಸೇರಿ ನಗರದಲ್ಲಿನ ದೊಡ್ಡಮೋರಿಗಳ ನೀರೆಲ್ಲ ಇಲ್ಲಿಗೆ ಬಂದು ಸೇರುತ್ತದೆ. ಈ ಬಗ್ಗೆ ಚನ್ನಪಟ್ಟಣ ನಗರಸಭೆಗೆ ಸಾಕಷ್ಟು ದೂರು ಕೊಟ್ಟರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

Intro:Body:ರಾಮನಗರ : ಜಿಲ್ಲೆಯಾಧ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ ಅಸ್ಥವ್ಯಸ್ಥವಾಗಿದೆ. ರಾಮನಗರ ಜಿಲ್ಲೆಯಲ್ಲಿ ತಡರಾತ್ರಿ ವರುಣನ ಅಬ್ಬರ ಜೋರಾಗಿಯೇ ಇತ್ತು. ವರುಣನ ಅಬ್ಬರದಿಂದ ಮನೆಗಳೆಲ್ಲ ಸ್ವಿಮಿಂಗ್ ಫೂಲ್ ಗಳಂತಾಗಿದ್ದವು, ತಮ್ಮ ಮನೆಗಳಲ್ಲಿ ತುಂಬಿರುವ ನೀರನ್ನ ಹೊರಹಾಕುವ ಕಾರ್ಯದಲ್ಲಿ ಮನೆ‌ಮಂದಿಯೆಲ್ಲಾ ಹೈರಾಣಾಗಿದ್ದರು.
ರಾಮನಗರ ಜಿಲ್ಲೆ ಚನ್ನಪಟ್ಟಣ ನಗರದ ಎ.ಪಿ.ಎಂ.ಸಿ ಮಾರುಕಟ್ಟೆ ಪಕ್ಕದಲ್ಲಿರುವ ಮುಸ್ಲಿಂ ಕಾರ್ಮಿಕರೆ ವಾಸವಿರುವ 22 ನೇ ವಾರ್ಡ್ ಎಪಿಎಂಸಿ ಕ್ವಾಟ್ರಸ್ ಮಳೆ ನೀರಿನಿಂದ ತುಂಬಿ ನಿಂತಿತ್ತು. ಬೆಂಗಳೂರು-ಮೈಸೂರು ಹೆದ್ದಾರಿಯ ಪಕ್ಕದಲ್ಲೇ ಇರುವ ಈ ಬಡಾವಣೆಯಲ್ಲಿ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿನ ಕೂಲಿ ನಾಲಿ‌ ಮಾಡಿ ಬದುಕುವ ಮಂದಿಗೆ ಈ ಜಾಗದಲ್ಲಿ ಮನೆಕಟ್ಟಿಕೊಡಲಾಗಿದೆ. ಕಳೆದ 18 ವರ್ಷದಿಂದಲೂ ಸಹ ಇವರೆಲ್ಲರುವ ಇಲ್ಲೇ ವಾಸವಾಗಿದ್ದಾರೆ. ಸುಮಾರು 50 ಕ್ಕೂ ಹೆಚ್ಚು ಮನೆಗಳಿರುವ ಈ ಬಡಾವಣೆಯಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲದಂತಾಗಿದೆ. ಅದರಲ್ಲೂ ಮಳೆ ಬಂದರೆ ಸಾಕು ಪಕ್ಕದ ಹನುಮಂತನಗರ, ಟಿಪ್ಪುನಗರ, ಮಕ್ಕಾನ್ ಬಡಾವಣೆ ಸೇರಿದಂತೆ ನಗರದಲ್ಲಿನ ದೊಡ್ಡಮೋರಿಗಳ ನೀರೆಲ್ಲ ಇಲ್ಲಿಗೆ ಬಂದು ಸೇರುತ್ತದೆ ಅಲ್ಲದೆ ಮನೆಗಳಿಗೆ ನುಗ್ಗುತ್ತದೆ. ಈ ಬಗ್ಗೆ ಚನ್ನಪಟ್ಟಣ ನಗರಸಭೆಗೆ ಸಾಕುಷ್ಟು ದೂರು ಕೊಟ್ಟರು ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಕರು ಬೇಸರವ್ಯಕ್ತಪಡಿಸಿದ್ದಾರೆ. ಇನ್ನು ಕಳೆದ ರಾತ್ರಿ ಸುರಿದ ಮಳೆಯಿಂದಾಗಿ ಏರಿಯಾದಲ್ಲಿರುವ ಮನೆಗಳೆಲ್ಲ ಜಲಾವೃತವಾಗಿದೆ.
ಇಲ್ಲಿರುವ ಪ್ರತಿಯೊಂದು ಮನೆಯಲ್ಲೂ ಚಿಕ್ಕಮಕ್ಕಳಿದ್ದಾರೆ. ಮಳೆಬಂದ್ರೆ ಸಾಕು ಮಕ್ಕಳೆಲ್ಲ ನೀರಿನಲ್ಲಿ ಆಟವಾಡಿಕೊಂಡು ಇರ್ತಾರೆ. ಇದರಿಂದಾಗಿ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತ ವಹನದೆ. ಪ್ರತಿ ಭಾರಿ ಮಳೆ ಬಂದಾಗಲೆಲ್ಲ ಈ ಕ್ವಾಟ್ರಸ್ ಜಾಲವೃತವಾಗುತ್ತದೆ. ಈ ವೇಳೆ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ದುರಸ್ಥಿ ಪಡಿಸುವ ಮಾತುಗಳನ್ನ ಹಾಡಿ ಮತ್ತೆ ಇತ್ತ ತಿರುಗಿಯು ನೋಡುವುದಿಲ್ಲ ಎಂಬುದು ಕ್ವಾಟ್ರಸ್ ನಿವಾಸಿಗಳ ಅಳಲು. ಇನ್ನು ನಗರದ ಕೆಲ ಮೋರಿಗಳನ್ನ ದುರಸ್ಥಿ ಮಾಡಿದ್ರೆ ಆಲ್ಲಿನ ನೀರು ಇತ್ತ ಬರುವುದಿಲ್ಲ ನಮ್ಮ ಸಮಸ್ಯೆ ಸರಿಹೋಗುತ್ತೆ ಅಂತ್ತಾರೆ ಇಲ್ಲಿನ ನಿವಾಸಿಗಳು.
ಒಟ್ಟಾರೆ ಚುನಾವಣೆಗಳು ಬಂದಾಗ ಜನರ ಮುಂದೆ ಬಂದು ಮತಕೇಳುವ ಜನಪ್ರತಿನಿಧಿಗಳು, ತಮಗೆ ಮತಹಾಕುವ ಜನರ ಸಮಸ್ಯೆಗಳಿಗೆ ಸ್ಪಂದಿಸದೇ ಇರುವುದು ನಿಜಕ್ಕೂ ನೋವಿನ ಸಂಗತಿ. ಮುಂದಿನ ದಿನಗಳಲ್ಲಾದರೂ ಜನಪ್ರತಿನಿಧಿಗಳು ತಮ್ಮ ಕರ್ತವ್ಯಗಳನ್ನ ಅರಿತು ಕೆಲಸ ಮಾಡಲಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.