ETV Bharat / state

ಬಿಜೆಪಿ ಸೇರಲು ಸುಮಲತಾಗೆ ಮಾಜಿ ಸಚಿವ ಯೋಗೇಶ್ವರ್​ ಆಹ್ವಾನ

author img

By

Published : Apr 28, 2022, 4:13 PM IST

Updated : Apr 28, 2022, 5:04 PM IST

ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಸಂಘಟನೆಗೆ ವರಿಷ್ಠರು ಮುಂದಾಗಿದ್ದು, ಮಂಡ್ಯ ಸಂಸದೆ ಸುಮಲತಾ ಅವರನ್ನು ಪಕ್ಷಕ್ಕೆ ಸೇರಿಕೊಳ್ಳಲು ಆಹ್ವಾನ ನೀಡಲಾಗಿದೆ ಎಂದು ಮಾಜಿ ಸಚಿವ ಯೋಗೇಶ್ವರ್​ ತಿಳಿಸಿದರು.

yogeshwar
ಯೋಗೇಶ್ವರ್​ ಆಹ್ವಾನ

ರಾಮನಗರ: ಹಳೆ ಮೈಸೂರು ಭಾಗದಲ್ಲಿ ಪಕ್ಷದ ಬಲವರ್ಧನೆಗೆ ಮುಂದಾಗಿರುವ ಬಿಜೆಪಿ, ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ ಅವರನ್ನು ಪಕ್ಷ ಸೇರ್ಪಡೆಗೆ ಆಹ್ವಾನ ನೀಡಿದೆ. ಈ ಬಗ್ಗೆ ಮಾಹಿತಿ ನೀಡಿದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್​, ಸಂಸದೆ ಸುಮಲತಾ ಅಂಬರೀಶ್​ ಅವರನ್ನು ಪಕ್ಷಕ್ಕೆ ಆಹ್ವಾನಿಸಲಾಗಿದೆ. ನಮಗೆ ಬೆಂಬಲ ನೀಡಲೂ ಕೋರಿದ್ದೇನೆ. ಏನು ನಿರ್ಧಾರ ಮಾಡುತ್ತಾರೋ ನೋಡೋಣ ಎಂದಿದ್ದಾರೆ.

ರಾಮನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಂಸದೆ ಸುಮಲತಾರನ್ನ ಮದುವೆ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದೆ. ಅವರನ್ನು ಬಿಜೆಪಿಗೆ ಆಹ್ವಾನ ಮಾಡಿದ್ದೇವೆ. ಪಕ್ಷಕ್ಕೆ ಸಪೋರ್ಟ್ ಮಾಡಿ ಎಂದಿದ್ದೇವೆ‌. ಅವರ ಗೆಲುವಿನಲ್ಲಿ ನಮ್ಮ ಪಕ್ಷ ಕೂಡ ಶ್ರಮಿಸಿದೆ. ಇದಲ್ಲದೆ ಪಕ್ಷ ಬಲವರ್ಧನೆಗೆ ಬೆಂಬಲ ನೀಡಿ ಎಂದಿದ್ದೇವೆ‌ ಎಂದರು.

ಬಿಜೆಪಿ ಸೇರಲು ಸುಮಲತಾಗೆ ಮಾಜಿ ಸಚಿವ ಯೋಗೇಶ್ವರ್​ ಆಹ್ವಾನ

ವರಿಷ್ಠರು ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಹಲವು ಕಾರ್ಯಕ್ರಮಗಳನ್ನ ರೂಪಿಸುತ್ತಿದ್ದಾರೆ. ರಾಮನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ಉತ್ತಮ ಅಭ್ಯರ್ಥಿಗಳನ್ನು ಹಾಕುವ ಯೋಜನೆ ರೂಪಿಸಿದ್ದಾರೆ ಎಂದು ಹೇಳಿದರು.

ಸಮಾಜಮುಖಿ ಕೆಲಸ ಮಾಡುವವರಿಗೆ ಪಕ್ಷಕ್ಕೆ ಅಹ್ವಾನ ಮಾಡಲಾಗುತ್ತಿದೆ. ಮಂಡ್ಯದ ಲಕ್ಷಿ ಅಶ್ವಿನ್​ಕುಮಾರ್ ಅವರನ್ನೂ ಪಕ್ಷಕ್ಕೆ ಆಹ್ವಾನಿಸಲಾಗಿದೆ. ಸಾಮೂಹಿಕ ಜವಾಬ್ದಾರಿಯಡಿ ಕೆಲಸ ಮಾಡುತ್ತೇನೆ. ನಾನೇನೂ ಆಪರೇಷನ್ ಎಕ್ಸ್​ಪರ್ಟ್ ಅಲ್ಲ‌. ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡುತ್ತಿದ್ದೇನೆ. ನಾಳೆಯಿಂದ ಮಂಡ್ಯ ಜಿಲ್ಲೆಯಲ್ಲಿ ಪ್ರತಿ ತಾಲೂಕಿನಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಮಾಡುತ್ತೇವೆ ಎಂದರು.

ಇದನ್ನೂ ಓದಿ: ಪೊಲೀಸರಿಗೆ ಶರಣಾಗುವಂತೆ ಆರೋಪಿ ದಿವ್ಯಾ ಹಾಗರಗಿಗೆ ಎಚ್ಚರಿಕೆ ನೀಡಿದ ಗೃಹ ಸಚಿವ

Last Updated : Apr 28, 2022, 5:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.