ರಾಮನಗರ: ಮಾಜಿ ಡಾನ್ ಮುತ್ತಪ್ಪ ರೈ ಇಂದು ಬೆಳಗ್ಗೆ ನಿಧನರಾಗಿದ್ದು, ಬಿಡದಿಯ ಅವರ ಮನೆಯಲ್ಲಿ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ.
ಮುತ್ತಪ್ಪ ರೈ ನಿವಾಸದ ಪಕ್ಕದಲ್ಲಿ ಬಂಟ ಸಮುದಾಯದ ಸಂಪ್ರದಾಯಂತೆ ಅಂತ್ಯ ಸಂಸ್ಕಾರ ನಡೆಯಲಿದೆ. ರೈ ಅವರ ಹಿರಿಯ ಮಗ ರಿಕ್ಕಿ ಅವರಿಂದ ವಿಧಿ ವಿಧಾನ ಕಾರ್ಯ ಜರುಗಲಿದೆ. ಅಂತಿಮ ಸಂಸ್ಕಾರದಲ್ಲಿ ಕುಟುಂಬಸ್ಥರಷ್ಟೇ ಭಾಗಿಯಾಗಲಿದ್ದಾರೆ.