ETV Bharat / state

'ಮಿಷನ್ 123' ಎನ್ನುವುದು ನಮ್ಮ ಗುರಿ ಮಾತ್ರವಲ್ಲ, ಛಲವೂ ಹೌದು: ಹೆಚ್​ಡಿಕೆ

author img

By

Published : Sep 30, 2021, 8:06 PM IST

ಜನರ ಮನ-ಮನೆ ಮುಟ್ಟುವ ನಿಟ್ಟಿನಲ್ಲೇ ಈಗಾಗಲೇ ಎಲ್ಲ ಕಾರ್ಯಕ್ರಮಗಳ ರೂಪುರೇಷೆಗಳನ್ನು ಸಿದ್ದ ಮಾಡಿಕೊಂಡಿದ್ದೇವೆ. ಮುಖ್ಯವಾಗಿ ಹೊಸ ತಲೆಮಾರಿನ ಯುವ ಜನರಿಗೆ ಪಕ್ಷದ ಬಗ್ಗೆ ವಿಶ್ವಾಸ ತುಂಬುವ ಪ್ರಯತ್ನವನ್ನು ದೊಡ್ಡ ಮಟ್ಟದಲ್ಲಿ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

Former CM HD Kumaraswamy
ಹೆಚ್.ಡಿ.ಕುಮಾರಸ್ವಾಮಿ

ರಾಮನಗರ: ಮಿಷನ್ 123 ಎನ್ನುವುದು ನಮ್ಮ ಗುರಿ ಮಾತ್ರವಲ್ಲ, ಛಲವೂ ಹೌದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ರಾಮನಗರ ಜಿಲ್ಲೆ ಬಿಡದಿಯ ತೋಟದಲ್ಲಿ ಜನತಾ ಪರ್ವ 1.O ಹಾಗೂ ಮಿಷನ್ 123 ಕಾರ್ಯಗಾರದ ನಾಲ್ಕನೇ ದಿನ ಮಾತನಾಡಿದ ಅವರು, ನಿಗದಿತ ಗುರಿ ಮುಟ್ಟಲು 224 ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತೇವೆ. ಜನತೆಗೆ ನಾವು ವಾಗ್ದಾನ ಮಾಡುತ್ತಿರುವ ಪಂಚರತ್ನ ಕಾರ್ಯಕ್ರಮಗಳ ಮಾಹಿತಿಯನ್ನು ಮನೆ ಮನೆಗೂ ತಲುಪಿಸಲಾಗುವುದು. ಈ ನಿಟ್ಟಿನಲ್ಲಿ ಜೆಡಿಎಸ್ ಪರಿವಾರ ಮುಂದಿನ 17 ತಿಂಗಳ ಕಾಲ ರಾಜ್ಯದ ಉದ್ದಗಲಕ್ಕೂ ಅವಿಶ್ರಾಂತವಾಗಿ ಕೆಲಸ ಮಾಡಲಿದೆ ಎಂದರು.

ಜೆಡಿಎಸ್ ನ್ಯೂ ಆ್ಯಪ್ ಮೂಲಕ ಸದಸ್ಯತ್ವ:

ಜನರ ಮನ-ಮನೆ ಮುಟ್ಟುವ ನಿಟ್ಟಿನಲ್ಲೇ ಈಗಾಗಲೇ ಎಲ್ಲ ಕಾರ್ಯಕ್ರಮಗಳ ರೂಪುರೇಷೆಗಳನ್ನು ಸಿದ್ದ ಮಾಡಿಕೊಂಡಿದ್ದೇವೆ. ಮುಖ್ಯವಾಗಿ ಹೊಸ ತಲೆಮಾರಿನ ಯುವ ಜನರಿಗೆ ಪಕ್ಷದ ಬಗ್ಗೆ ವಿಶ್ವಾಸ ತುಂಬುವ ಪ್ರಯತ್ನವನ್ನು ದೊಡ್ಡ ಮಟ್ಟದಲ್ಲಿ ಮಾಡಲಾಗುವುದು.

ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಕೊಡಲಾಗುವುದು. ಪಕ್ಷದ ಸದಸ್ಯತ್ವ ಪಡೆಯಲು ಯಾರೂ ಎಲ್ಲೂ ಹೋಗಬೇಕಿಲ್ಲ. ಇದ್ದ ಜಾಗದಲ್ಲಿಯೇ ಸದಸ್ಯತ್ವ ಪಡೆಯಲು ಆ್ಯಪ್​​ ಸಿದ್ದಪಡಿಸಲಾಗುತ್ತಿದೆ. ಆದಷ್ಟು ಬೇಗ ಈ ಆ್ಯಪ್​ ಬಳಕೆಗೆ ಸಿಗಲಿದೆ.

ಯಾರು ನಮ್ಮ ಪಕ್ಷದ ಸದಸ್ಯರಾಗುತ್ತರೋ ಅವರ ಕುಟುಂಬಕ್ಕೆ ಗುರುತಿನ ಚೀಟಿ ಕೊಡುತ್ತೇವೆ. ಇದಕ್ಕೆಲ್ಲ ಆಧುನಿಕ ತಂತ್ರಜ್ಞಾನ ಉಪಯೋಗಿಸುತ್ತೇವೆ. ಹೀಗೆ ಸದಸ್ಯತ್ವ ಪಡೆದವರಿಗೆ ಸದಸ್ಯರ ನಿಧಿ ಸೌಲಭ್ಯ ಇಡಲಾಗುತ್ತದೆ. ಉತ್ತಮವಾಗಿ ಓದುವ ಸದಸ್ಯರ ಮಕ್ಕಳಿಗೆ ಆರ್ಥಿಕ ನೆರವು ನೀಡುತ್ತೇವೆ. ಅಲ್ಲದೆ ಸದಸ್ಯರ ಮನೆಯಲ್ಲಿ ಸಮಸ್ಯೆ, ಅವಘಡಗಳಾದರೆ ಅಂತವರಿಗೂ ಆರ್ಥಿಕ‌ ನೆರವು ಕೊಡಲಾಗುವುದು. ಇದಕ್ಕೆ ಪೂರಕವಾಗಿ ನಿಖಿಲ್ ಕುಮಾರಸ್ವಾಮಿ ಹಾಗೂ ಪ್ರಜ್ವಲ್ ರೇವಣ್ಣ ಅವರಿಬ್ಬರೂ ಜತೆಯಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಾರೆ. ಯುವ ಪಡೆ ಕಟ್ಟಲು ಹೇಳಿದ್ದೇನೆ ಎಂದು ಹೆಚ್​​ಡಿಕೆ ತಿಳಿಸಿದರು.

ಜೀವಾಳ ನೀರಾವರಿ ಯೋಜನೆ‌ ಜಾರಿ:

ಈಗಾಗಲೇ ನೀರಾವರಿ ಯೋಜನೆಗಳ ಬಗ್ಗೆ ಪಕ್ಷದ ಕಾರ್ಯಗಾರದಲ್ಲಿ ಚರ್ಚೆ ಮಾಡಿದ್ದೇವೆ. ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಬಗ್ಗೆ ಸಮಗ್ರ ಅಭಿವೃದ್ಧಿ ಬಗ್ಗೆ ನಮ್ಮದೇ ಪರಿಕಲ್ಪನೆ ಇದೆ. ನೀರಾವರಿ ಯೋಜನೆಗಳು ಎಂದರೆ ಹಣ ಲೂಟಿ ಹೊಡೆಯುವ ಯೋಜನೆಗಳು ಆಗಬಾರದು ಎಂದು ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ: 2023ರ ಚುನಾವಣೆಗೆ ಜೆಡಿಎಸ್​​ನಿಂದ 30-35 ಮಹಿಳೆಯರಿಗೆ ಟಿಕೆಟ್: ಹೆಚ್​​ಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.