ETV Bharat / state

ಸ್ವಂತ ಬಲದ ಮೇಲೆ 'ತೆನೆ' ಹೊರಬೇಕಿದೆ; ಪಣತೊಟ್ಟ ಕುಮಾರಣ್ಣ..! - Former chief minister H.D. Kumaraswamy statement

ಜೆಡಿಎಸ್​​ ಪಕ್ಷವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರಬೇಕಿದ್ದು, ಇದಕ್ಕೆ ದೇವರ ಹಾಗೂ ಗುರು ಹಿರಿಯರ ಆಶೀರ್ವಾದ ಬೇಕಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು..

Former chief minister H.D. Kumaraswamy
ಹೆಚ್.ಡಿ. ಕುಮಾರಸ್ವಾಮಿ
author img

By

Published : Jan 15, 2021, 3:14 PM IST

Updated : Jan 15, 2021, 3:48 PM IST

ರಾಮನಗರ: ಕುಟುಂಬ ಸಮೇತರಾಗಿ ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿಯವರು, ಜಿಲ್ಲೆಯ ಜಾಲಮಂಗಲ ಗ್ರಾಮದ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯಕ್ಕೆ ಬಂದು ತಪ್ಪು ಕಾಣಿಕೆ ಸಲ್ಲಿಸಿದರು.

ಈ ಹಿಂದೆ ಇದೇ ದೇವರ ಬಳಿ ನನಗೆ ಯಾವುದೇ ಅಧಿಕಾರ ಬೇಡ ಎಂದು ಕೇಳಿಕೊಂಡಿದ್ದರು. ಆದರಿಂದಲೇ ಎರಡು ಬಾರಿ ಸಿಎಂ ಆದರೂ ಅರ್ಧಕ್ಕೆ ಅಧಿಕಾರ ಹೋಯ್ತು ಎಂಬ ಕೊರಗು ಇತ್ತು. ಈ ಹಿನ್ನೆಲೆ ಇಂದು ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ, ಸೊಸೆ ರೇವತಿ ಜೊತೆಗೆ ಬಂದು 101 ರೂ. ತಪ್ಪು ಕಾಣಿಕೆ ಅರ್ಪಿಸಿದರು.

ನಂತರ ನಗರದ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಸಂಕ್ರಾಂತಿ ವಿಶೇಷವಾಗಿ ಇಂದಿನಿಂದ ಪಕ್ಷ ಸಂಘಟನೆಗೆ ನಾಂದಿ ಹೇಳಿದರು. ಬಳಿಕ ಮಾತನಾಡಿದ ಅವರು, ಕೆಲವರು ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಳಿದೇ ಹೋಯಿತು ಎಂದು ಮಾತನಾಡುತ್ತಿದ್ದಾರೆ. ಆದ್ದರಿಂದ ನಮ್ಮ​​ ಪಕ್ಷವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರಬೇಕಿದ್ದು, ಇದಕ್ಕೆ ದೇವರ ಹಾಗೂ ಗುರು ಹಿರಿಯರ ಆಶೀರ್ವಾದ ಬೇಕಿದೆ ಎಂದರು.

ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ

ನಾನು ಅಧಿಕಾರದಲ್ಲಿದ್ದ ವೇಳೆ ಸಾಕಷ್ಟು ಜನಪರ ಕಾರ್ಯಕ್ಕೆ ಚಾಲನೆ ನೀಡಿದ್ದೇನೆ. ನನ್ನ ಅಧಿಕಾರದ ಅವಧಿಯ ವೇಳೆ ಯೋಜನೆಗಳು ಕಾರ್ಯಗತವಾಗಿಲ್ಲ ಹಾಗಾಗಿ ನನಗೆ ತೃಪ್ತಿಯಿಲ್ಲ ಎಂದರು.

ನಾನು ಪಂಚರತ್ನ ಯೋಜನೆಯನ್ನು ಜಾರಿಗೆ ತರಲು ಆಸೆ ಇಟ್ಟುಕೊಂಡಿದ್ದೇನೆ. 5 ವರ್ಷದಲ್ಲಿ ಪ್ರತಿವರ್ಷ ಒಂದೊಂದು ಯೋಜನೆಯನ್ನು ಜಾರಿಗೆ ತರುತ್ತೇನೆ. ಮುಂದಿನ ದಿನಗಳಲ್ಲಿ ಈ ಯೋಜನೆಗಳ ಬಗ್ಗೆ ರಾಜ್ಯದ ಜನತೆಗೆ ತಿಳಿಸುವುದಾಗಿ ಹೇಳಿದರು.

ನಾನು ಈ ಹಿಂದೆ ಸಾಲದ ಬಗ್ಗೆ ಮಾತನಾಡಿದಾಗ ಕೆಲವರು ಲಘುವಾಗಿ ಮಾತನಾಡಿದ್ರು. ನಾನು ರಾಜ್ಯದ ರೈತರ ಸಾಲ ಮನ್ನಾ ಮಾಡಿ ತೋರಿಸಿಲ್ವಾ ಎಂದು ಪ್ರಶ್ನೆ ಮಾಡಿದರು. ಎಲ್ಲಾ ಪಕ್ಷಗಳಿಗೂ ರಾಜ್ಯದ ಜನತೆ ಅಧಿಕಾರ ನೀಡಿದ್ದೀರಿ, ನಮ್ಮ ಪಕ್ಷಕ್ಕೂ ಅವಕಾಶ ಕೊಡಿ ಎಂದರು.

ಮುಂದಿನ ದಿನಗಳಲ್ಲಿ ಯಾವುದೇ ರಾಜಕೀಯ ಪಕ್ಷಗಳ ಜತೆಗೆ ಹೊಂದಾಣಿಕೆ ಇಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ನನ್ನ ಹೋರಾಟ ಎಂದರು. ಬೇರೆ ಪಕ್ಷಗಳಿಗೆ ನಮ್ಮ ಪಕ್ಷದ ಅವಶ್ಯಕತೆ ಇರಬಹುದು, ಯಾವುದೇ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ನಡೆಸುವ ಪ್ರಶ್ನೆ ಇಲ್ಲ ಎಂದು ಹೇಳಿದರು..

Last Updated : Jan 15, 2021, 3:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.